Advertisement

ಬಿಜೆಪಿಯವರು ಯುವಕರಿಗೆ ಕೇಸರಿ ಶಾಲು ಹೊದಿಸಿ ದಿಕ್ಕು ತಪ್ಪಿಸುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ

01:09 PM Oct 18, 2022 | Team Udayavani |

ಬೆಂಗಳೂರು: ಹೊನ್ನಾವರದ ಪರೇಶ್ ಮೇಸ್ತಾ ಪ್ರಕರಣದ ಬಗ್ಗೆ ಸಿಬಿಐ ಆಕಸ್ಮಿಕ ಸಾವು ಎಂದು ನ್ಯಾಯಲಯಕ್ಕೆ ವರದಿ ಸಲ್ಲಿಸಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಈ ಪ್ರಕರಣದಲ್ಲಿ ತಪ್ಪು ಹೇಳಿಕೆ ನೀಡಿ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಗೆ ಕಾರಣರಾಗಿರುವ ಬಿಜೆಪಿ ಮುಖಂಡರ ವಿರುದ್ದ ಸಿಬಿಐ ಸುಮಟೊ ಕೇಸ್ ದಾಖಲಿಸಿಕೊಳ್ಳಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಒಂದು ವೇಳೆ ಪ್ರಕರಣ ದಾಖಲಿಸಿಕೊಳ್ಳದೆ ಹೋದರೆ 15 ದಿನಗಳಲ್ಲಿ ಕಾಂಗ್ರೆಸ್ ಸಿಬಿಐ ಮುಂದೆ ಕೇಸು ದಾಖಲಿಸುವುದಾಗಿ ಹೇಳಿದರು.

ಪರೇಶ್ ಮೇಸ್ತಾ ಪ್ರಕರಣಗಳ ಸಂಬಂಧ ಸಚಿವೆ ಶೋಭಾ ಕರಂದ್ಲಾಜೆ, ಅನಂತ್ ಕುಮಾರ್ ಹೆಗಡೆ, ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲು, ಕೆ.ಎಸ್ ಈಶ್ವರಪ್ಪ, ಸೇರಿದಂತೆ ಹಲವರು ಮಾಧ್ಯಗಳ ಮತ್ತು ಪತ್ರಿಕೆಗಳ ಮುಂದೆ ತಪ್ಪು ಹೇಳಿಕೆ ನೀಡಿ ರಾಜ್ಯದಲ್ಲಿ ಕೋಮುಗಲಬೆ ಕಾರಣರಾಗಿದ್ದಾರೆ. ಅವರ ವಿರುದ್ದ ಕ್ರಮಕ್ಕೆ ಮನವಿ ಮಾಡಲಾಗುವುದು ಎಂದರು.

ಪೋಲಿಸ್ ನೇಮಕ ಅಕ್ರಮ ಪ್ರಕರಣದಲ್ಲಿ ಮಾಧ್ಯಮಗಳಲ್ಲಿ ಬಂದ ಹೇಳಿಕೆ ನೀಡಿದ್ದಕ್ಕೆ ಬಿಜೆಪಿಯವರು ನನಗೆ ಸಾಕ್ಷಿ ಕೇಳಿದ್ದರು. ಈ ಪ್ರಕರಣದಲ್ಲಿ ಸಿಬಿಐ ಸಾಕ್ಷಿ ಇಲ್ಲ ಎಂದು ಹೇಳಿ ಕೇಸ್ ಅಂತ್ಯಕ್ಕೆ ನ್ಯಾಯಾಲಯಕ್ಜೆ ಮನವಿ ಮಾಡಿದೆ.ಈ ರಾಜಕೀಯ ಮುಖಂಡರು ಏಕೆ ಸಾಕ್ಷಿಯನ್ನು ತನಿಖಾ ತಂಡಕ್ಕೆ ನೀಡಿಲ್ಲ? ಸಿಬಿಐ ಇವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದಿಲ್ಲ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಕಲಬುರಗಿಯಲ್ಲಿ ಮತ್ತೆ ಕಿಡಿಗೇಡಿಗಳ ಅಟ್ಟಹಾಸ: ಕಾರು, ಬೈಕ್ ಗಳ ಮೇಲೆ ರಾತ್ರಿ ವೇಳೆ ಕಲ್ಲೆಸೆತ

Advertisement

ಈ ಸಂಬಂಧ ಬಿಜೆಪಿ ನಾಯಕರು ಪರೇಶ್ ಮೇಸ್ತಾ ಪೋಷಕರಲ್ಲಿ ಕ್ಷಮೆ ಕೇಳಬೇಕು. ನಾಡಿನ ಯುವಕರಿಗೆ ಕೇಸರಿ ಶಾಲು ಹೊದಿಸಿ ದಿಕ್ಕು ತಪ್ಪಿಸುತ್ತಿದ್ದಾರೆ. ಬಿಜೆಪಿ, ಆರ್ ಎಸ್ಎಸ್ ನಾಯಕರ ಮಕ್ಕಳಲ್ಲಿ ಎಷ್ಟು ಮಕ್ಕಳು ಗೋರಕ್ಷಕರಾಗಿದ್ದಾರೆ? ನಿಮ್ಮ ಹಿಂದುತ್ವಕ್ಕೆ, ಗೋ ರಕ್ಷಣೆಗೆ ಬಿಲ್ಲವರು, ಈಡಿಗರು ಎಸ್ಸಿ ಎಸ್ಟಿ ಮಕ್ಕಳೆ ಬೇಕಾ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next