Advertisement

ಹೊಟ್ಟೆ ಮೇಲೆ ಹೊಡೆಯುತ್ತಿದೆ ಬಿಜೆಪಿ

09:51 AM May 03, 2018 | |

ಜೇವರ್ಗಿ: ಹೊಟ್ಟೆ ತುಂಬಿಸುವ ಕೆಲಸ ಕಾಂಗ್ರೆಸ್‌ ಮಾಡಿದ್ರೆ ಬಿಜೆಪಿ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಹಸಿದವನಿಗೆ ಅನ್ನ, ಕಾಲಿ ಕೈಗಳಿಗೆ ಕೆಲಸ ನೀಡಿದ್ದು ಕಾಂಗ್ರೆಸ್‌. ಸತತ ಕಳೆದ 20 ವರ್ಷಗಳಿಂದ ಅಧಿಕಾರದಲ್ಲಿರುವ ಮೋದಿ ತಮ್ಮ ಸ್ವಂತ ರಾಜ್ಯವನ್ನೇ ಅಭಿವೃದ್ಧಿ ಮಾಡಲು ಸಧ್ಯವಾಗಿಲ್ಲ, ಇನ್ನು ದೇಶದ ಅಭಿವೃದ್ಧಿಯಾಗಲು ಸಾಧ್ಯವೇ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

Advertisement

ತಾಲೂಕಿನ ಚಿಗರಳ್ಳಿ ಕ್ರಾಸ್‌ ಬಳಿಯ ಗಂವ್ಹಾರ ರಸ್ತೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಜನರಿಗೆ ಪೊಳ್ಳು ಭರವಸೆ ನೀಡುವ ಮೂಲಕ ವಂಚಿಸಿದ್ದಾರೆ. ದೇಶದಲ್ಲಿರುವ ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬ ಪ್ರಜೆಯ ಖಾತೆಗೆ 15 ಲಕ್ಷ ರೂ. ಹಾಕಲಾಗುವುದು ಎಂದು ಹೇಳಿದ್ದ ಪ್ರಧಾನಿ, ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್‌ ಶಾ ಸುಳ್ಳಿನ ಸರದಾರರು ಎಂದು ವ್ಯಂಗ್ಯವಾಡಿದರು. 

ಪ್ರಸಕ್ತ ಚುನಾವಣೆ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಉಳಿವಿಗಾಗಿ ನಡೆಯುತ್ತಿದೆ. ಇದು ದೇಶದ ಭವಿಷ್ಯ ರೂಪಿಸುವ ಚುನಾವಣೆಯಾಗಿದೆ. ಸ್ವಾಭಿಮಾನದಿಂದ ಬದುಕಬೇಕಾದರೆ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಬೇಕು. ಈ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದು ಕಾಂಗ್ರೆಸ್‌ ಹೊರತು ಬಿಜೆಪಿಯಲ್ಲ ಎಂದರು. 

ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಕೊಟ್ಟ ಭರವಸೆಯನ್ನು ಒಂದಾದ್ರೂ ಈಡೇರಿಸಿದ್ದಾರಾ? ಒಂದು ಲಕ್ಷ ಕೋಟಿ ರೂ.ಗಳನ್ನು ಬುಲೆಟ್‌ ಟ್ರೇನ್‌ಗೆ ಖರ್ಚು ಮಾಡುವ ಬದಲು ದೇಶಕ್ಕೆ ಅವಶ್ಯವಿರುವ ನೀರಾವರಿ ಯೋಜನೆಗಳಿಗೆ ಖರ್ಚು ಮಾಡಬೇಕಿತ್ತು ಎಂದು ಹೇಳಿದರು.

Advertisement

ಇತ್ತೀಚೆಗೆ ದೇಶದಲ್ಲಿ ಅತ್ಯಾಚಾರ, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಜೆಪಿ, ಆರ್‌ಎಸ್‌ಎಸ್‌, ಮೋದಿಯಿಂದ ದೇಶಕ್ಕೆ ತೊಂದರೆಯಿದೆ. ಬಿಜೆಪಿಯವರ ಭೂಟಾಟಿಕೆ ಮಾತುಗಳನ್ನು ನಂಬದೇ ಸಾಮಾಜಿಕ ನ್ಯಾಯ ಕಲ್ಪಿಸಿ ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸದ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.
 
ಶಾಸಕ ಡಾ| ಅಜಯಸಿಂಗ್‌ ಮಾತನಾಡಿ, ಕಳೆದ 5 ವರ್ಷದ ಅವ ಧಿಯಲ್ಲಿ ಭೀಮಾನದಿಗೆ ಅಡ್ಡಲಾಗಿ ಐದು ಸೇತುವೆಗಳ ನಿರ್ಮಾಣ, 250 ಕೋಟಿ ರೂ. ವೆಚ್ಚದ ಸೋಲಾರ್‌ ಪಾರ್ಕ್‌, ಗ್ರಾಮೀಣ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸಿ ಅಭಿವೃದ್ಧಿ ಮಾಡಲಾಗಿದೆ. ಇನ್ನು ಹೆಚ್ಚಿನ ಅಭಿವೃದ್ಧಿಗೆ ಮತ ನೀಡಿ ಎಂದು ಕೋರಿದರು. 

ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಹಲವಾರು ಜನ ಕಾಂಗ್ರೆಸ್‌ ಸೇರ್ಪಡೆಯಾದರು. ರಾಜ್ಯಸಭೆ ಸದಸ್ಯ ಸೈಯದ್‌ ನಾಸೀರ ಹುಸೇನ, ಕೃಷ್ಣಾಜಿ ಕುಲಕರ್ಣಿ, ಜೇವರ್ಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿದ್ದಲಿಂಗರೆಡ್ಡಿ ಇಟಗಿ, ಯಡ್ರಾಮಿ ಅಧ್ಯಕ್ಷ ರುಕುಂ ಪಟೇಲ ಇಜೇರಿ, ತೊಗರಿ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಮೃತರಾಯಗೌಡ ವಡಗೇರಿ, ಜಿಪಂ ಮಾಜಿ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಆಂದೋಲಾ, ಬಸವರಾಜಗೌಡ ಪಾಟೀಲ ಗಂವ್ಹಾರ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಅಬ್ದುಲ್‌ ರಜಾಕ ಮನಿಯಾರ, ಶಿವಶರಣಪ್ಪ ಕೋಬಾಳ, ರಾಜಶೇಖರ ಸೀರಿ, ಚಂದ್ರಶೇಖರ ಹರನಾಳ, ಜಿಪಂ ಸದಸ್ಯ ಶಾಂತಪ್ಪ ಕೂಡಲಗಿ, ಶೌಕತ್‌ ಅಲಿ ಆಲೂರ, ಕಾಶಿಂ ಪಟೇಲ ಮುದಬಾಳ, ತಿಪ್ಪಣ್ಣ ಬಳಬಟ್ಟಿ, ಬಾಪುಗೌಡ ಜವಳಗಿ, ಚಂದ್ರಶೇಖರ ಪುರಾಣಿಕ, ಬಾಬಾ ಫರೀದ್‌ ಮಳ್ಳಿಕರ್‌, ಮರೆಪ್ಪ ಸರಡಗಿ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next