Advertisement
ಆರ್.ಎಂ. ಮಂಜುನಾಥ್ ಗೌಡರ ಮನೆ ಮೇಲೆ ನಡೆದ ಇಡಿ ದಾಳಿಯ ವಿಷಯವಾಗಿ ಪಟ್ಟಣದ ಗಾಂಧಿ ಭವನದಿಂದ ಪ್ರತಿಭಟನಾ ಮೆರವಣಿಗೆ ನೆಡೆಸಿ ನಂತರ ತಾಲೂಕು ಕಚೇರಿ ಎದುರು ಮಾತನಾಡಿದ ಅವರು ಈಗಾಗಲೇ ಮಂಜುನಾಥಗೌಡರ ತನಿಖೆ ಆಗಿದೆ ಈಗೆಂತ ಹೊಸದಾಗಿ ಮಾಡುವುದು ಮಾಡುವುದಾದರೆ ನಂದಿತಾ ಪ್ರಕರಣದಲ್ಲೂ ಮರು ತನಿಖೆ ಮಾಡಿಸಬಹುದಿತ್ತು. ಎರಡು ವರ್ಷ ಗೃಹಸಚಿವರಾಗಿ ಗೆಣಸು ತಿಂದಿದ್ದಾ? ಇವರೇ ಅವತ್ತು ಕಲ್ಲು ಹೊಡೆಸಿದ್ದು, ಆ ಕೇಸ್ ವಾಪಾಸ್ ತೆಗೆದುಕೊಂಡಿದ್ದಾರೆ. ಇವರು ಕೂಡ ಆ ಪ್ರಕರಣದಲ್ಲಿ ಆರೋಪಿ, ಇವರ ಮೇಲೂ 5 ಕೇಸ್ ಬಿದ್ದಿತ್ತು ಎಂದು ಆರಗ ವಿರುದ್ಧ ಹರಿಹಾಯ್ದರು.
Related Articles
Advertisement
ಮಂಜುನಾಥ ಗೌಡರನ್ನು ನಿಮ್ಮಿಂದ ಏನು ಮಾಡಲು ಆಗುವುದಿಲ್ಲ. ಸದ್ಯದಲ್ಲೇ ಒಂದು ಬೃಹತ್ ಪ್ರತಿಭಟನೆಯನ್ನು ಮಾಡುತ್ತೇವೆ. ನಾವೆಲ್ಲ ಸೇರಿ ಕೋಮು ಗಲಭೆ ಸೃಷ್ಟಿ ಮಾಡಿ ಮತ ಪಡೆಯಲು ಹೊರಟಿರುವ ಬಿಜೆಪಿ ಕುತಂತ್ರವನ್ನು ನಾವೆಲ್ಲರೂ ಸೇರಿ ತಡೆಯಬೇಕು. ದೇಶದ ಎಲ್ಲ ಪಕ್ಷಗಳು ಬಿಜೆಪಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿವೆ ಆದರೆ ಕಾಂಗ್ರೆಸ್ ಎಂದೂ ಮಾಡಿಕೊಂಡಿಲ್ಲ. ರಾಹುಲ್ ಗಾಂಧಿಯ ಇಮೇಜ್ ಡೆವಲಪ್ಮೆಂಟ್ ಆಗುತ್ತಿರುವುದನ್ನು ನೋಡಿ ಅವರಿಗೆ ಕಷ್ಟ ಅನಿಸುತ್ತಿದೆ ಎಂದರು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎಸ್ ಸುಂದರೇಶ್ ಮಾತನಾಡಿ ಮಂಜುನಾಥಗೌಡರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ನಂತರದಲ್ಲಿ ಇಡೀ ಜಿಲ್ಲೆಯಲ್ಲಿ ಎಲ್ಲಾ ಸಹಕಾರಿ ಕ್ಷೇತ್ರದವರು ಅತ್ಯಂತ ಖುಷಿಯಿಂದ ಇದ್ದರು.
ಯಾವುದೇ ರೀತಿಯ ಒಬ್ಬ ಒಳ್ಳೆ ನಾಯಕ ಬೆಳೆದರೆ ಅವರನ್ನು ಬೆಳೆಸುವ ಕೆಲಸವನ್ನು ಬಿಜೆಪಿ ಮಾಡುವುದಿಲ್ಲ. ಅವರನ್ನು ಹಾಳು ಮಾಡುವ ಕೆಲಸವನ್ನೇ ಬಿಜೆಪಿ ಮಾಡುತ್ತಾ ಬಂದಿದೆ ಎಂದರು.
ಈಗಾಗಲೇ ಬಿಜೆಪಿ ಜಿಲ್ಲೆಯಲ್ಲಿ ಲೋಕಸಭಾ ಸ್ಥಾನವನ್ನು ಗೆಲ್ಲಬೇಕು ಎಂದು ಎಲ್ಲಾ ಒಳ ಸಂಚನ್ನು ಮಾಡುತ್ತಿದೆ. ಅವರಿಗೆ ನೇರವಾಗಿ ಮತ ಕೇಳುವ ಶಕ್ತಿ ಇಲ್ಲ ಯಾವುದಾದರೂ ಸಣ್ಣ ಘಟನೆ ನಡೆದರು ಅದಕ್ಕೆ ತುಪ್ಪ ಸುರಿದು ಬೆಂಕಿ ಹಚ್ಚಿ ಕಾಂಗ್ರೆಸ್ಸಿಗೆ ಕಪ್ಪು ಚುಕ್ಕಿ ತರುವ ಕೆಲಸ ಮಾಡಿಸುತ್ತಿದೆ. ಸ್ವಾತಂತ್ರ ನಂತರ ಅತ್ಯಂತ ಕೆಟ್ಟ ಕೀಳು ಮಟ್ಟದ ಹೆಸರನ್ನು ಪಡೆದ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಎಂದರು.
ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಯ ಹಾಗೆ 25 ಸ್ಥಾನದಲ್ಲಿ ಈ ಬಾರಿ 5 ಸ್ಥಾನಗಳನ್ನು ಗೆಲ್ಲಲು ಕಷ್ಟವಾಗುತ್ತದೆ. ನಿಮ್ಮ 25 ಜನ ಎಂಪಿ ಗಳು ನಪುಂಸಕರ ರೀತಿ ಕೆಲಸ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ. ಕಾವೇರಿ, ಮೇಕೆದಾಟು ವಿಷಯಗಳನ್ನು ಕೂಡ ಇವರು ಹೋಗಿ ಮೋದಿ ಅವರ ಮುಂದೆ ನಿಂತು ಮಾತನಾಡುವ ಶಕ್ತಿ ಇವರಿಗೆ ಇಲ್ಲ ಎಂದರು.
ಈ ಸಂದರ್ಭದಲ್ಲಿ ಕಲಗೋಡು ರತ್ನಾಕರ್, ಡಾ. ಸುಂದರೇಶ್, ಮೂಡಬಾ ರಾಘವೇಂದ್ರ, ಕೆಸ್ತೂರು ಮಂಜುನಾಥ್, ಗೀತಾ ರಮೇಶ್, ರೆಹಮಾತುಲ್ಲ ಅಸಾದಿ ಸುಶೀಲಾ ಶೆಟ್ಟಿ, ಸೇರಿದಂತೆ ಹಲವರು ಇದ್ದರು.