Advertisement
ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಶುಕ್ರವಾರ ಹೊರಬಿದ್ದ ಬಳಿಕ ಸಾರ್ವಜನಿಕರಲ್ಲಿ ಕೇಳಿಬರುತ್ತಿದ್ದಮಾತುಗಳಿವು. ಕಳೆದ 2008ರಲ್ಲಿ ಪಾಲಿಕೆಯ 35ರಲ್ಲಿ 30 ವಾರ್ಡ್ ಗಳಲ್ಲಿ ಗೆದ್ದು ಪಾಲಿಕೆ ಚುಕ್ಕಾಣಿ ಹಿಡಿದಿದ್ದ ಬಿಜೆಪಿ 2013ರಲ್ಲಿ ಬಿಜೆಪಿ ಒಡೆದು ಬಿಎಸ್‌ಆರ್ ಆದ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ಅಧಿಕಾರಕಳೆದುಕೊಂಡಿತು. ಪರಿಣಾಮ ಅಂದು (2013ರಲ್ಲಿ) ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 26 ವಾರ್ಡ್‌ಗಳಲ್ಲಿ ಜಯಗಳಿಸಿ ಪಾಲಿಕೆ ಚುಕ್ಕಾಣಿ ಹಿಡಿದರೆ ಕಡಿಮೆ ವಾರ್ಡ್‌ಗಳಲ್ಲಿ ಗೆದ್ದಿದ್ದ ಬಿಜೆಪಿ/ಬಿಎಸ್ ಆರ್ ವಿರೋಧ ಪಕ್ಷದಲ್ಲಿ ಕೂತಿತ್ತು.
Related Articles
Advertisement
ಮನ್ನಣೆ ನೀಡದ ಮತದಾರ: ಪಾಲಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿ ಮುಖಂಡರು ಅತಿಹೆಚ್ಚು ಪ್ರಚಾರ ನಡೆಸಿದರು.ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್, ಸಮಾಜ ಕಲ್ಯಾಣಸಚಿವ ಬಿ.ಶ್ರೀರಾಮುಲು, ಶಾಸಕ ಜಿ.ಸೋಮಶೇಖರರೆಡ್ಡಿ, ಮಾಜಿ ಸಂಸದರಾದ ಸಣ್ಣ ಫಕ್ಕೀರಪ್ಪ, ಜೆ.ಶಾಂತಾ ಅವರು ಹಲವು ವಾರ್ಡ್ಗಳಲ್ಲಿ ಹೆಚ್ಚು ಪ್ರಚಾರ ನಡೆಸಿದರು. ಕೇಂದ್ರದಲ್ಲಿ ಬಿಜೆಪಿಯ ಮೋದಿ,ರಾಜ್ಯದಲ್ಲಿ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರವಿದ್ದು, ಬಳ್ಳಾರಿಪಾಲಿಕೆಯಲ್ಲೂ ಬಿಜೆಪಿ ಅಧಿಕಾರ ಇದ್ದರೆ ಬಳ್ಳಾರಿ ನಗರ ಮತ್ತಷ್ಟುಅಭಿವೃದ್ಧಿಯಾಗಲಿದೆ ಎಂಬ ಸಚಿವರು, ಶಾಸಕರ ಮಾತುಗಳಿಗೆ ಮತದಾರರು ಮನ್ನಣೆ ನೀಡಿಲ್ಲ ಎನ್ನಬಹುದು.
ಒಗ್ಗೂಡದಿದ್ದರೂ “ಕೈ’ ಗೆಲುವು: ಸದಾ ಒಡೆದ ಮನೆ, ಮನೆಯೊಂದು ಮೂರು ಬಾಗಿಲು ಎಂಬ ಆರೋಪಗಳ ನಡುವೆಯೂ ಪಾಲಿಕೆಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲೇ ಮುಖಂಡರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಮೂಡಿದ್ದವು. ಈ ಎಲ್ಲ ಅಸಮಧಾನಗಳ ನಡುವೆ ಹಾಗೂ ಕಾಂಗ್ರೆಸ್ ಟಿಕೆಟ್ ಲಭಿಸದ ಐವರುಕಾಂಗ್ರೆಸ್ ಬಂಡಾಯ ಪಕ್ಷೇತರ ಅಭ್ಯರ್ಥಿಗಳನ್ನು ಹೊರತುಪಡಿಸಿ 21 ಸ್ಥಾನಗಳಲ್ಲಿ ಕಾಂಗ್ರೆಸ್‌ನನ್ನು ಮತದಾರರು ಕೈ ಹಿಡಿದಿದ್ದಾರೆ.
-ವೆಂಕೋಬಿ ಸಂಗನಕಲ್ಲು