Advertisement

Lok Sabha polls: ಬಿಜೆಪಿ ಜನಸೇವೆ ಮಾಡಲು ಅವಕಾಶ ಕಲ್ಪಿಸಿದೆ: ಯದುವೀರ್

09:57 PM Mar 15, 2024 | Team Udayavani |

ಹುಣಸೂರು: ಬಿಜೆಪಿಯ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ರನ್ನು ಹುಣಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಭವ್ಯ ಸ್ವಾಗತ ಕೋರಿದರು.

Advertisement

ಮಡಿಕೇರಿಯಲ್ಲಿ ಬಿಜೆಪಿಯ ಕಾರ್ಯಕ್ರಮ ಮುಗಿಸಿಕೊಂಡು ಮೈಸೂರಿಗೆ ವಾಪಸ್ ಬರುತ್ತಿದ್ದ ವೇಳೆ ಶುಕ್ರವಾರ ಸಂಜೆ ಹುಣಸೂರಿನ ಕಲ್ಕುಣಿಕೆ ವೃತ್ತದಲ್ಲಿ ಜಮಾಯಿಸಿದ್ದ ಬಿಜೆಪಿ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು, ಅಭಿಮಾನಿಗಳು ಯದುವೀರ್ ರಿಗೆ ಹೂಮಾಲೆ, ಜೈಕಾರ ಹಾಕಿ ಸ್ವಾಗತಿಸಿದರು.

ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯದುವೀರ್ ಒಡೆಯರ್‌ರವರು ಜನಸೇವೆ ಮಾಡಲು ಬಿಜೆಪಿ ತಮಗೊಂದು ಅವಕಾಶ ಕಲ್ಪಿಸಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹೀಗೇ ಇರಲಿ. ಇಲ್ಲಿ ಗೆಲ್ಲಬೇಕಾಗಿರುವುದು ಮುಖ್ಯವಾಗಿದ್ದು. ನಾವು ನೀವೆಲ್ಲಾ ಇಂದಿನಿಂದಲೇ ಚುನಾವಣೆ ಎದುರಿಸಲು ಸಿದ್ದರಾಗೋಣ, ಹಿಂದೆಯೇ ಹುಣಸೂರಿಗೆ ಅನೇಕ ಬಾರಿ ಭೇಟಿ ನೀಡಿದ್ದೇನೆ . ಮುಂದೆಯೂ ಭೇಟಿ ನೀಡುವೆ. ಇಲ್ಲಿನ ಸಮಸ್ಯೆಗಳ ಕುರಿತು ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಜನರೊಂದಿಗೆ ಚರ್ಚಿಸಿ ಬಗೆಹರಿಸಲು ಯತ್ನಿಸುವೆನೆಂದರು.

ಮಾಜಿ ಮಂತ್ರಿ ಎಸ್.ಎ.ರಾಮದಾಸ್ ಮಾತನಾಡಿ, ದೇಶದ ಏಕತೆಗಾಗಿ ಧ್ವನಿಎತ್ತಿದ್ದ ಮೈಸೂರು ಮಹಾರಾಜರ ಕುಟುಂಬದ ಅಪರೂಪದ ಕುಡಿ ಯದುವೀರ್ ಒಡೆಯರ್‌ರಿಗೆ ಈ ಬಾರಿಯ ಮೈಸೂರು-ಕೊಡಗು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣವೆಂದರು. ಇದೇ ವೇಳೆ ಕೇಂದ್ರದ ಅಕ್ಕಿಯನ್ನು ಯದುವೀರ್ ಗ್ರಾಹಕರಿಗೆ ವಿತರಿಸಿದರು.

ಈ ವೇಳೆ ಬಿಜೆಪಿಯ ಪ್ರಭಾರಿ ಮೈ.ವಿ.ರವಿಶಂಕರ್, ಸೆನೆಟ್ ಸದಸ್ಯ ವಸಂತಕುಮಾರ್, ಜಿಲ್ಲಾ ಉಪಾಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ನಗರಸಭಾ ಸದಸ್ಯ ವಿವೇಕಾನಂದ, ತಾಲೂಕು ಅಧ್ಯಕ್ಷ ಕಾಂತರಾಜು, ಮಾಜಿ ಅಧ್ಯಕ್ಷರಾದ ನಾಗಣ್ಣಗೌಡ, ಹನಗೋಡು ಮಂಜುನಾಥ್, ಹೇಮಂತ್‌ಕುಮಾರ್,ನಗರ ಅಧ್ಯಕ್ಷ ನಾರಾಯಣ್, ತಾಲೂಕು ಮಹಿಳಾ ಅಧ್ಯಕ್ಷೆ ಮಂಜುಳ, ಮುಖಂಡರಾದ ದೇವರಹಳ್ಳಿಸೋಮಶೇಖರ್, ರಮೇಶ್‌ಕುಮಾರ್, ವಿ.ಎನ್.ದಾಸ್, ಬಿಳಿಕೆರೆಪ್ರಸನ್ನ ಹಬ್ಬನಕುಪ್ಪೆದಿನೇಶ್, ಕೇಸರಿಮಲ್, ನಾಗರಾಜಮಲ್ಲಾಡಿ, ಚಂದ್ರಶೇಖರ್, ಚೇತನ್, ವೀರೇಶರಾವ್‌ಬೋಬಡೆ, ಭಾಗ್ಯಮ್ಮ ಸೇರಿದಂತೆ ಅನೇಕ ಮುಖಂಡರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next