Advertisement

ಮಾತಿನಲ್ಲಿ ಅಬ್ಬರ, ಕೃತಿಯಲ್ಲಿ ಶೂನ್ಯ, ಇದುವೇ ಬಿಜೆಪಿಯ ಸಾಧನೆ : ಕಾಂಗ್ರೆಸ್‌ ಟೀಕೆ

12:04 PM Jun 21, 2019 | Sathish malya |

ಹೊಸದಿಲ್ಲಿ : ಭಾರತೀಯ ಜನತಾ ಪಕ್ಷಕ್ಕೆ ಜನರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟಿಸುವ ದಾಖಲೆಯೇ ಇದೆ; ಆದರೆ ಕೃತಿಯಲ್ಲಿ ಏನೂ ಮಾಡಿ ತೋರಿಸದ ದಾಖಲೆಯೂ ಅದಕ್ಕಿದೆ. ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡಿರುವ ಭಾಷಣ ಇದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

Advertisement

ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸರ್‌ಜೇವಾಆ ಅವರು ಮಾತಿಗೆ ತಕ್ಕುದಾದ ಕೃತಿಯನ್ನು ಕಾಯಿಸದ ಅಲಿಖೀತ ಸಂಪ್ರದಾಯವೇ ಬಿಜೆಪಿಯಲ್ಲಿದೆ ಎಂದು ಟೀಕಿಸಿದರು.

2019ರಲ್ಲಿ ಜಮ್ಮು ಕಾಶ್ಮೀರದಲ್ಲಿ 74 ಜವಾನರು ಮೃತಪಟ್ಟಿದ್ದಾರೆ; ಕಳೆದ ಒಂದು ವಾರದಲ್ಲೇ 10 ಜವಾನರು ಪ್ರಾಣಾರ್ಪಣೆ ಮಾಡಿದ್ದಾರೆ. ರಾಷ್ಟ್ರದ ಭದ್ರತೆ ಅಪಾಯದಲ್ಲಿದೆ; ಆದರೂ ಕೇಂದ್ರ ಗೃಹ ಸಚಿವಾಲಯ ಮತ್ತು ಗುಪ್ತಚರ ದಳ ಅನಂತ್‌ನಾಗ್‌ ಮತ್ತು ಪುಲ್ವಾಮಾದಲ್ಲಿ ನಡೆಯುತ್ತಿರುವ ಉಗ್ರ ದಾಳಿಗಳನ್ನು ತಡೆಯಲು ವಿಫ‌ಲವಾಗಿವೆ ಎಂದು ಸುರ್‌ಜೇವಾಲಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next