Advertisement
ಮಂಗಳೂರು ಪಾಲಿಕೆಗೆ ವಿಶೇಷ ಅನುದಾನಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹಾನಗರಪಾಲಿಕೆಗಳು ಮತ್ತು ನಗರಾಡಳಿತ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲು ಮುಖ್ಯಮಂತ್ರಿಯವರ ವಿಶೇಷ ಅನುದಾನ ಯೋಜನೆಯನ್ನು ಜಾರಿಗೆ ತಂದಿದ್ದರು. ಇದರಂತೆ ಮಂಗಳೂರು ಮಹಾನಗರ ಪಾಲಿಕೆಗೆ ಇತರ ಅನುದಾನಗಳ ಹೊರತಾಗಿ ಎರಡು ವರ್ಷಗಳಲ್ಲಿ 200 ಕೋ.ರೂ. ವಿಶೇಷ ಅನುದಾನ ಬಿಡುಗಡೆಯಾಗಿತ್ತು.
ಮಹಾನಗರ ಪಾಲಿಕೆಗಳಿಗೆ ವಿಶೇಷ ಅನುದಾನ ಜತೆಗೆ ಜಿಲ್ಲೆಯ ನಗರಸಭೆ, ಪುರಸಭೆಗಳಿಗೂ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಮಂಗಳೂರು ನಗರಕ್ಕೆ ಪೊಲೀಸ್ ಕಮಿಷನರೆಟ್ ಕಚೇರಿ
ಮಂಗಳೂರಿಗೆ ಪೊಲೀಸ್ ಕಮಿಷನರೆಟ್ ಕಚೇರಿ ಕೂಡ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮಂಜೂರು ಆಗಿತ್ತು. ಗೃಹ ಸಚಿವರಾಗಿದ್ದ ಡಾ| ವಿ.ಎಸ್. ಆಚಾರ್ಯ ಅವರು ಕಮಿಷನರೆಟ್ ಕಚೇರಿಯನ್ನು ಉದ್ಘಾಟಿಸಿದ್ದರು. ಮಂಗಳೂರು ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಇದು ಮಹತ್ವದ ಕೊಡುಗೆಯಾಗಿದೆ.
Related Articles
ತಾಲೂಕು ಮಟ್ಟದಲ್ಲಿ ಎಲ್ಲ ಸರಕಾರಿ ಕಚೇರಿಗಳು ಒಂದೇ ಕಡೆ ಸಾರ್ವಜನಿಕರಿಗೆ ಲಭ್ಯವಾಗಬೇಕು ಎಂಬ ಪರಿಕಲ್ಪನೆಯಲ್ಲಿ ರೂಪುಗೊಂಡಿದ್ದ ಮಿನಿ ವಿಧಾನಸೌಧ ಯೋಜನೆಯಲ್ಲಿ ಮಂಗಳೂರು ತಾಲೂಕಿಗೂ ಮಿನಿ ವಿಧಾನಸೌಧ ಮಂಜೂರು ಮಾಡಲಾಗಿತ್ತು.
Advertisement
ನೂತನ ವೆಂಟೆಡ್‌ಡ್ಯಾಂ ಮಂಜೂರುಮಂಗಳೂರು ನಗರಕ್ಕೆ ಕುಡಿಯುವ ನೀರು ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ತುಂಬೆಯಲ್ಲಿ ನೂತನ ವೆಂಟೆಡ್ ಡ್ಯಾಂ ನಿರ್ಮಿಸಬೇಕು ಎಂಬ ಬೇಡಿಕೆ ಅನ್ವಯ ನೂತನ ವೆಂಟೆಡ್ ಡ್ಯಾಂ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮಂಜೂರುಗೊಂಡು ಅನುದಾನ ಬಿಡುಗಡೆಯಾಗಿತ್ತು. ಅನಂತರ ಯೋಜನೆ ಪರಿಷ್ಕೃತಗೊಂಡು ಇದರ ಯೋಜನಾ ವೆಚ್ಚ ದಲ್ಲಿ ಏರಿಕೆಯಾಗಿತ್ತು. ಪಿಲಿಕುಳ ತ್ರಿಡಿ ತಾರಾಲಯ ಮಂಜೂರು, ಅನುದಾನ
ಮಂಗಳೂರು ಹೊರವಲಯದ ಪಿಲಿಕುಳದಲ್ಲಿ ಏಷ್ಯಾದಲ್ಲೇ ಅತ್ಯಾಧುನಿಕ ತ್ರಿಡಿ ತಾರಾಲಯ ಯೋಜನೆ ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಮಂಜೂರುಗೊಂಡು ಅನುದಾನ ಬಿಡುಗಡೆಯಾಗಿತ್ತು. ಇತರ ಜತೆಗೆ ಜಿಲ್ಲೆಯ ನಗರಸಭೆ, ಪುರಸಭೆಗಳಿಗೂ ವಿಶೇಷ ಅನುದಾನ ಬಿಡುಗಡೆಯಾಗಿತ್ತು. ಇದಲ್ಲದೆ ಇನ್ನೂ ಹಲವು ಯೋಜನೆಗಳು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಕೊಡುಗೆಗಳಾಗಿವೆ. • ಮಂಗಳಾ ಕಾರ್ನಿಶ್ ವರ್ತುಲ ರಸ್ತೆ ಯೋಜನೆ: ಸಾಧ್ಯತಾ ಅಧ್ಯಯನ ವರದಿಗೆ ಸೂಚನೆ
• ರಥಬೀದಿಯಲ್ಲಿ ಸೀನಿಯರ್ ಗ್ರೇಡ್ ಸರಕಾರಿ ಕಾಲೇಜು ಸ್ಥಾಪನೆ
• ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಇನ್ಪೋಸಿಸ್ ಸಹಭಾಗಿತ್ವದೊಂದಿಗೆ ಅತ್ಯಾಧುನಿಕ ಮಕ್ಕಳ ಚಿಕಿತ್ಸಾ ಘಟಕ ಸ್ಥಾಪನೆ
• ಮಂಗಳಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಯೋಜನೆ ಮಂಜೂರು
• ಮಣ್ಣಗುಡ್ಡೆ-ಲೋವರ್ ಕಾರ್‌ಸ್ಟ್ರೀಟ್ ಮಾದರಿ ರಸ್ತೆ ಯೋಜನೆ ಮಂಜೂರು, ಅನುದಾನ ಬಿಡುಗಡೆ
• ಸುಲ್ತಾನ್‌ಬತ್ತೇರಿ ತಣ್ಣೀರುಬಾವಿ ತೂಗು ಸೇತುವೆ ನಿರ್ಮಾಣ ಯೋಜನೆ ಮಂಜೂರು.
• ಬಲ್ಮಠದಲ್ಲಿ ಸರಕಾರಿ ಮಹಿಳಾ ಕಾಲೇಜು ಉನ್ನತೀಕರಣ