Advertisement

ಪರೇಶ್‌ ರಾವಲ್‌ ಬದಲಿಗೆ ಎಚ್‌.ಎಸ್‌.ಪಟೇಲ್‌ಗೆ ಟಿಕೆಟ್‌ ನೀಡಿದ ಬಿಜೆಪಿ

09:20 AM Apr 05, 2019 | Team Udayavani |

ಅಹಮದಾಬಾದ್‌ : ಹಾಲಿ ಸಂಸದ, ಖ್ಯಾತ ನಟ ಪರೇಶ್‌ ರಾವಲ್‌ ಅವರು ಪ್ರತಿನಿಧಿಸುವ ಅಹಮದಾಬಾದ್‌ ಪೂರ್ವ ಕ್ಷೇತ್ರದಲ್ಲಿ ಎಚ್‌.ಎಸ್‌.ಪಟೇಲ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

Advertisement

2014 ರಲ್ಲಿ ಪರೇಶ್‌ ರಾವಲ್‌ ಅವರು ಸಂಸದರಾಗಿ ಆಯ್ಕೆಯಾಗಿದ್ದರು. ಈ ಬಾರಿ ನಾನು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಅಭ್ಯರ್ಥಿಯಾಗಿರುವ ಪಟೇಲ್‌ ಅವರು 2012 ಮತ್ತು 2017 ರಲ್ಲಿ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಪಟೇಲ್‌ ಸಮುದಾಯದ ಮತಗಳನ್ನು ಸೆಳೆಯುವ ಲೆಕ್ಕಾಚಾರದಲ್ಲಿ ಎಚ್‌.ಎಸ್‌.ಪಟೇಲ್‌ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next