Advertisement

ಬಿಜೆಪಿ ಸುಳ್ಳು ಭರವಸೆಯಿಂದ ಜನತೆಗೆ ಮೋಸ: ಅಶೋಕ

01:15 PM Sep 08, 2018 | |

ಸೊಲ್ಲಾಪುರ: ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ಸುಳ್ಳು ಭರವಸೆಗೆ ಸಾಮಾನ್ಯ ಜನರು ಮೋಸ ಹೋಗಿದ್ದಾರೆ. ನೋಟು ಬ್ಯಾನ್‌ನಿಂದ ದೇಶ ಮತ್ತಿಷ್ಟು ಸಂಕಷ್ಟದಲ್ಲಿ ಸಿಲುಕ್ಕಿದೆ. ಇಂಥ ಸರಕಾರ ಜನತೆಗೆ ಬೇಡವಾಗಿದೆ.

Advertisement

ಆದ್ದರಿಂದ ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಅಶೋಕ ಚವ್ಹಾಣ ವಿಶ್ವಾಸ ವ್ಯಕ್ತಪಡಿಸಿದರು.

ಅಕ್ಕಲಕೋಟ ನಗರದ ವಾಗದರಿ ರಸ್ತೆಯಲ್ಲಿರುವ ಟಿನವಾಲಾ ಮಂಗಲ ಕಾರ್ಯಾಲಯ ಆವರಣದಲ್ಲಿ ನಡೆದ ಜನ
ಸಂಘರ್ಷ ಯಾತ್ರೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನೋಟು ಬಂದಿಯಿಂದ ದೇಶ ಮತ್ತಿಷ್ಟು ಸಂಕಷ್ಟದಲ್ಲಿ ಸಿಲುಕಿದೆ. ಕಪ್ಪು ಹಣ ಬಿಳಿಯಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಲಕ್ಷಾಂತರ ಯುವಕರು ನೌಕರಿಗಾಗಿ ಅಲೆದಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಸುಳ್ಳು ಭರವಸೆಗೆ ಜನರು ಮೋಸ ಹೋಗಿದ್ದಾರೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯದಲ್ಲಿ ಸಂಪೂರ್ಣ ವಿಫಲಗೊಂಡಿದೆ. ಬಿಜೆಪಿಗೆ ಸುಳ್ಳು ಹೇಳುವುದೇ ದೊಡ್ಡ ಸಾಧನೆಯಾಗಿದೆ.

ಬಿಜೆಪಿ ಶಾಸಕ ರಾಮ ಕದಂ ಸ್ತ್ರೀಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ. ಮುಖ್ಯಮಂತ್ರಿಗಳಿಗೆ ತಾಕತ್ತಿದ್ದರೆ ಕೂಡಲೇ ಅವರನ್ನು ಪಕ್ಷದಿಂದ ವಜಾಗೊಳಿಸಲಿ ಎಂದು ಸವಾಲು ಹಾಕಿದರು. ಇಂತಹ ಸರ್ಕಾರ ಜನರಿಗೆ ಬೇಡವಾಗಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ಜನರು ಬೆಂಬಲ ನೀಡಲು ಸಜ್ಜಾಗಿದ್ದಾರೆ ಎಂದು ಕಾಂಗ್ರೆಸ್‌
ರಾಜ್ಯಾಧ್ಯಕ್ಷ ಅಶೋಕ ಚವ್ಹಾಣ ಹೇಳಿದರು.

Advertisement

ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ ಚವ್ಹಾಣ ಮಾತನಾಡಿ, ಬಿಜೆಪಿ ಧರ್ಮ-ಧರ್ಮಗಳ ಮಧ್ಯೆ ಜಗಳ ಹಚ್ಚುತ್ತಿದೆ. ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ ಮತ್ತು ಸಂಶೋಧಕ ಡಾ| ಎಂ.ಎಂ.ಕಲಬುರಗಿ ಅವರನ್ನು ಹತ್ಯೆ ಮಾಡಿದ್ದು ಸನಾತನ ಧರ್ಮದವರು. ಇಂತಹ ಸನಾತನ ಸಂಘಟನೆಯನ್ನು ರದ್ದುಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಬರೀ ನಾಲ್ಕು ವರ್ಷಗಳಲ್ಲಿ ಸಾಮಾನ್ಯ ಜನರಿಗೆ ಬಿಜೆಪಿ ಸರ್ಕಾರ ಬೇಡವಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಬಾಳಾಸಾಹೇಬ ಥೋರಾತ್‌ ಮಾತನಾಡಿದರು. ಅಕ್ಕಲಕೋಟ ಶಾಸಕ ಸಿದ್ಧರಾಮ ಮೇತ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಕಲಕೋಟ ತಾಲೂಕು ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಶಂಕರ ಮೆತ್ರೆ ನೇತೃತ್ವದಲ್ಲಿ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚಿನ ಬೈಕ್‌ ರ್ಯಾಲಿ ನಗರದ ಎಂಎಸ್‌ಇಬಿಯಿಂದ ಮುಖ್ಯ ರಸ್ತೆಗಳ ಮುಖಾಂತರ ಟಿನವಾಲಾ ಮಂಗಲ ಕಾರ್ಯಾಲಯದಲ್ಲಿ ಸಮಾಪ್ತಿಗೊಳಿಸಲಾಯಿತು.

ಕಾಂಗ್ರೆಸ್‌ ನಾಯಕ ಸಾತಲಿಂಗಪ್ಪ ಮೇತ್ರೆ, ಶಾಸಕ ರಾಮಹರಿ ರೂಪನವರು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪ್ರಕಾಶ ಪಾಟೀಲ, ಜಿಪಂ ಕೃಷಿ ಸಭಾಪತಿ ಮಲ್ಲಿಕಾರ್ಜುನ ಪಾಟೀಲ, ತಾಪಂ ಅಧ್ಯಕ್ಷ ಸುರೇಖಾ ಕಾಟಗಾವ, ಸುನೀತಾ ಹಡಲಗಿ, ಮಂಗಲಾ ಪಾಟೀಲ, ಮಾಜಿ ನಗರಾಧ್ಯಕ್ಷೆ ಅನೀತಾ ಖೋಬರೆ, ಭೀಮಾ ಕಾಪಸೆ, ಶಿವು ಸ್ವಾಮಿ, ಅರುಣ ಜಾಧವ, ಪಿಂಟು ಪಾಟೀಲ, ಸಾತಲಿಂಗ ಶಟಗಾರ, ರಾಮಚಂದ್ರ ಗದ್ದಿ, ವಿಶ್ವನಾಥ ಹಡಲಗಿ, ಸುಭಾಶ ಪರಮಶೆಟ್ಟಿ, ರಾಜಶೇಖರ ಧೋಶಿ, ಶಂಕರ ಭಾಂಜಿ, ಗುರುಶಾಂತ ಧಂಗೆ, ಉಮರ್ಷಾ ಮಕಾಂದರ, ರಯಿಸ್‌ ಟಿನವಾಲಾ
ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next