ಪಾಟ್ನಾ:ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಗಳ ವಿರುದ್ಧವೇ ಸ್ಪರ್ಧಿಸಲು ಮುಂದಾಗಿರುವ ಪಕ್ಷದ ಆರು ಮುಖಂಡರನ್ನು ಬಿಜೆಪಿ ಆರು ವರ್ಷಗಳ ಕಾಲ ಉಚ್ಛಾಟಿಸಿರುವುದಾಗಿ ತಿಳಿಸಿದೆ.
ಸ್ಥಳೀಯ ಬಿಜೆಪಿ ಮುಖಂಡರು ಇತ್ತೀಚೆಗಷ್ಟೇ ಬಿಜೆಪಿಯಿಂದ ಲೋಕ್ ಜನಶಕ್ತಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅಲ್ಲದೇ ಎನ್ ಡಿಎ ಅಭ್ಯರ್ಥಿಯ ವಿರುದ್ಧವೇ ಸ್ಪರ್ಧಿಸಲು ಮುಂದಾಗಿರುವುದಾಗಿ ವರದಿ ವಿವರಿಸಿದೆ.
ಬಿಹಾರ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಪಕ್ಷದ ನೀತಿ, ನಿಯಮಗಳನ್ನು ಉಲ್ಲಂಘಿಸಿದ ಒಂಬತ್ತು ಮುಖಂಡರ ವಿರುದ್ಧ ಬಿಜೆಪಿ ಕಠಿಣ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದರು.
ಇದನ್ನೂ ಓದಿ:ಡೆಲ್ಲಿ ಅಂತಿಮ ಸ್ಕೋರ್ ಮೊದಲೇ ನಿಗದಿ?! ಐಪಿಎಲ್ ನಲ್ಲಿ ಮತ್ತೆ ಫಿಕ್ಸಿಂಗ್ ಶಂಕೆ!
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರುಗಳಾದ ರಾಜೇಂದ್ರ ಸಿಂಗ್, ರಾಮೇಶ್ವರ್ ಚೌರಾಸಿಯಾ, ಡಾ.ಉಷಾ ವಿದ್ಯಾರ್ಥಿ, ಹಾಲಿ ಬಿಜೆಪಿ ಶಾಸಕ ರವೀಂದ್ರ ಯಾದವ್, ಶ್ವೇತಾ ಸಿಂಗ್, ಇಂದು ಕಶ್ಯಪ್, ಅನಿಲ್ ಕುಮಾರ್, ಮೃಣಾಲ್ ಶೇಖರ್ ಮತ್ತು ಅಜಯ್ ಪ್ರತಾಪ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ ಎಂದು ವರದಿ ತಿಳಿಸಿದೆ.