Advertisement

ಬಿಜೆಪಿಯಿಂದ ಮಹಿಳಾ ಸಬಲೀಕರಣಕ್ಕೆ  ಒತ್ತು: ಭಾರತಿ

03:25 PM Oct 09, 2017 | Team Udayavani |

ಸುಳ್ಯ: ಮಹಿಳೆಯರಿಗೆ ನೈತಿಕ ಸ್ಥೈರ್ಯ ತುಂಬಿ ಮಹಿಳಾ ಸಬಲೀಕರಣ ಗೊಳಿಸಿದ ಏಕೈಕ ಪಕ್ಷ ಬಿಜೆಪಿ ಮಾತ್ರ.
ಆಡಳಿತದ ಸಹಿತ ಪಕ್ಷದಲ್ಲಿ ಉನ್ನತ ಸ್ಥಾನಗಳನ್ನು ನೀಡಿ ಮಳೆಯರಿಗೆ ನಿಜವಾದ ಗೌರವ ನೀಡಿದೆ ಎಂದು ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ಹೇಳಿದ್ದಾರೆ.

Advertisement

ಸುಳ್ಯ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ವತಿಯಿಂದ ರವಿವಾರ ನಗರದ ದುರ್ಗಾಪರಮೇಶ್ವರೀ ಕಲಾ ಮಂದಿರದಲ್ಲಿ ಜರಗಿದ ಬೃಹತ್‌ ಸಮರ್ಥನ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. 

ಮಹಿಳೆ ಆರೋಗ್ಯವಾಗಿದ್ದಾಗಷ್ಟೇ ಸಮಾಜದ ಆರೋಗ್ಯವೂ ಸಾಧ್ಯವಿದೆ. ಕುಟುಂಬವನ್ನು ಸಲಹುವಷ್ಟೇ ಸಮರ್ಥವಾಗಿ ದೇಶವನ್ನು ಮುನ್ನಡೆಸುವ ಶಕ್ತಿಯಿದೆ. ರಕ್ಷಣಾ ಖಾತೆ, ವಿದೇಶಾಂಗ ಖಾತೆ ನೀಡುವ ಮೂಲಕ ಪಕ್ಷ ಮಳೆಯರನ್ನು
ಉನ್ನತಿಗೇರಿಸಿದೆ ಎಂದರು.

ದೇಶವನ್ನು ಇಂದು ವಿಶ್ವವೇ ಗುರುತಿಸು ವಂತಾಗಿದೆ. ರಾಜಕೀಯ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದೆ. ಅದೇ
ರೀತಿ ರಾಜ್ಯದ ಸಮರ್ಥ ಅಭಿವೃದ್ಧಿಗೆ, ಮಹಿಳಾ ಸಬಲೀಕರಣಕ್ಕಾಗಿ ರಾಜ್ಯದಲ್ಲೂ ಸಮರ್ಥ ಸರಕಾರ, ಪಕ್ಷ ಅಗತ್ಯವಾಗಿದೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ಏರಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಆರ್ಥಿಕವಾಗಿ ಸಬಲರಾಗಿ
ವಿಷಯ ಮಂಡಿಸಿದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೇಖಾ ಹುಲಿಯಪ್ಪ ಗೌಡ, ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾದಾಗ ಎಲ್ಲ ದೌರ್ಜನ್ಯದಿಂದ ಪಾರಾಗಲು ಸಾಧ್ಯವಿದೆ. ಅದಕ್ಕಾಗಿ ಸ್ವಾವಲಂಬಿ ಬದುಕಿಗೆ ಹೆಚ್ಚಿನ
ಒತ್ತು ನೀಡಬೇಕು. ಕೇಂದ್ರ ಸರಕಾರವು ಮಹಿಳಾ ಸಬಲೀಕರಣಕ್ಕೆ ಅನೇಕ ಯೋಜನೆಗಳನ್ನು ರೂಪಿಸಿದ್ದು ಅವುಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕಾರ್ಯವಾಗಬೇಕು ಎಂದರು.

Advertisement

ನೈತಿಕತೆ ಇಲ್ಲ
ಶಾಸಕ ಎಸ್‌. ಅಂಗಾರ ಮಾತನಾಡಿ, ನಾಲ್ಕೂವರೆ ವರ್ಷಗಳಲ್ಲಿ ರಾಜ್ಯ ಸರಕಾರ ಯಾವುದೇ ಅಭಿವೃದ್ಧಿ ಕೈಗೊಂಡಿಲ್ಲ. ಗಿಮಿಕ್‌ನಲ್ಲೇ ಕಾಲ ಕಳೆದಿದೆ. ಕಾಂಗ್ರೆಸ್‌ ಮುಕ್ತವಾಗಿಸಲು ಕಾರ್ಯಕರ್ತರು ಸಂಕಲ್ಪ ತೊಡುವಂತೆ ಕರೆ ನೀಡಿದರು. 

ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪುಲಸ್ಯ ರೈ ಮಾತನಾಡಿ, ಮಹಿಳೆಯರು ಸಮಾವೇಶಗೊಳ್ಳುವ ತಲ್ಲಣದಿಂದ ಉಸ್ತು
ವಾರಿ ಸಚಿವರು ಸಭಾಭವನ ತಪ್ಪಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು. ಸಹ ಸಂಘಟನ ಕಾರ್ಯದರ್ಶಿ ಯತೀಶ್‌ ಆರ್ವಾರ್‌ ಸಂವಾದ ನಡೆಸಿದರು. ಮಂಡಲ ಸಮಿತಿ ಅಧ್ಯಕ್ಷ ವೆಂಕಟ್‌ ವಳಲಂಬೆ, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ, ಪ್ರ.ಕಾ.ಸಂಧ್ಯಾ ವೆಂಕಟೇಶ್‌, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಜಯಂತಿ ನಾಯಕ್‌, ಬಿಜೆಪಿ ಜಿ. ಉಪಾಧ್ಯಕ್ಷೆ ಭಾಗೀರಥಿ ಮುರುಳ್ಯ, ಜಿ.ಪಂ.ಸದಸ್ಯರಾದ ಪುಷ್ಪಾವತಿ ಬಾಳಿಲ, ಪ್ರಮೀಳಾ ಜನಾರ್ದನ್‌, ತಾ.ಪಂ. ಉಪಾಧ್ಯಕ್ಷೆ ಶುಭಧಾ ಎಸ್‌.ರೈ, ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಉಪಾಧ್ಯಕ್ಷ ಹರಿಣಾಕ್ಷಿ ನಾರಾಯಣ, ಎಪಿಎಂಸಿ ಉಪಾಧ್ಯಕ್ಷೆ ಸುಕನ್ಯಾ ಭಟ್‌, ಭಾಗ್ಯಪ್ರಸನ್ನ, ಗುಣವತಿ ಕೊಲ್ಲಂತ್ತಡ್ಕ ಮತ್ತಿತರರಿದ್ದರು. ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಶೋಭಾ ನಲ್ಲೂರಾಯ ಸ್ವಾಗತಿಸಿ, ಪ್ರ. ಕಾರ್ಯದರ್ಶಿ ಜಯಂತಿ ಜನಾರ್ದನ ಅಜ್ಜಾವರ ವಂದಿಸಿ, ಸರೋಜಿನಿ, ದಿವ್ಯಾ ಯೋಗಾನಂದ ನಿರೂಪಿಸಿದರು.

ಕೈಕೊಟ್ಟ  ವಿದ್ಯುತ್ 
ಪದೇ ಪದೇ ವಿದ್ಯುತ್‌ ಕೈಕೊಟ್ಟಾಗ ಭಾರತೀ ಶೆಟ್ಟಿ ಅವರು ವಿಪಕ್ಷದವರು ಬಹಳ ಜಾಣರು ಎಂದು ಟೀಕಿಸಿದರೆ, ಮಾತನಾಡಿದ ಪ್ರಮುಖರೆಲ್ಲರೂ ಸಭಾಭವನಕ್ಕೆ ಅನುಮತಿ ನೀಡದ ಬಗ್ಗೆ ತರಾಟೆ ತೆಗೆದುಕೊಂಡರು. ಮಂಡಲ
ಅಧ್ಯಕ್ಷ ವೆಂಕಟ್‌ ವಳಲಂಬೆ ಮಾತನಾಡಿ, ದೊಡ್ಡ ಸಂಖೆಯಲ್ಲಿ ಪಾಲ್ಗೊಳ್ಳುವ ಮೂಲಕ ಮಹಿಳಾ ಸಮಾವೇಶ ಯಶಸ್ವಿಗೊಂಡಿದೆ. ಸಮಾವೇಶಕ್ಕೆ ಅಡ್ಡಿಪಡಿಸಲು ಯತ್ನಿಸಿದದವರಿಗೆ ದೇವರು ಸದ್ಬುದ್ಧಿ ಕೊಡಲಿ ಎಂದು
ಪ್ರಾರ್ಥಿಸುವುದಾಗಿ ತಿಳಿಸಿದರು.

2,500ಕ್ಕೂ ಅಧಿಕ ಮಂದಿ
ಕಾರ್ಯಕ್ರಮವನ್ನು ಪಂಜ ದೇವಸ್ಥಾನದ ಸಾರ್ವಜನಿಕ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿತ್ತು. ಕೊನೆಯ ಹಂತದಲ್ಲಿ ನಿರಾಕರಿಸಲಾಗಿತ್ತು. ಇದಕ್ಕೆ ಧೃತಿಗೆಡದ ಬಿಜೆಪಿ ನಾಯಕರು ಪರ್ಯಾಯವಾಗಿ ಸುಳ್ಯ ನಗರದಲ್ಲಿ ಆಯೋಜಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವುದಾಗಿ ತಿಳಿಸಿದ್ದರು. ಸಭಾಭವನಕ್ಕೆ 2,300 ಆಸನಗಳನ್ನು ತರಿಸಿ, ಹೊರಗಡೆ ಪೆಂಡಾಲ್‌ ಹಾಕಿ ಜತೆಗೆ ಭೋಜನದ ಹಾಲ್‌ನಲ್ಲೂ ಆಸನ ಹಾಕಲಾಗಿತ್ತು. ಇವೆಲ್ಲವೂ ಪೂರ್ಣಗೊಂಡು ಸಭಾಭವನ ತುಂಬಿ ತುಳುಕಿತ್ತು. 2500ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next