Advertisement

ಇಂದಿನಿಂದ ಬರ ಅಧ್ಯಯನ ಪ್ರವಾಸ​​​​​​​

06:50 AM Dec 02, 2018 | |

ಬೆಂಗಳೂರು: ರಾಜ್ಯದಲ್ಲಿ ಬರ ನಿರ್ವಹಣೆ, ನೆರೆ ಪರಿಹಾರ ಕಾರ್ಯ, ರೈತರ ಸ್ಥಿತಿಗತಿ, ಸಂಕಷ್ಟ ಅರಿಯಲು ಬಿಜೆಪಿ ನಾಯಕರ ನೇತೃತ್ವದಲ್ಲಿ ಆರು ಪ್ರತ್ಯೇಕ ತಂಡಗಳು ಪ್ರವಾಸ ಅಧ್ಯಯನ ಕೈಗೊಳ್ಳಲಿದೆ.

Advertisement

ಒಂದು ತಂಡ ಭಾನುವಾರದಿಂದ ಪ್ರವಾಸ ಆರಂಭಿಸಿದರೆ, ಮೂರು ತಂಡಗಳು ಸೋಮವಾರದಿಂದ ಅಧ್ಯಯನ ಪ್ರವಾಸ ಕೈಗೊಳ್ಳಲಿವೆ. ಡಿ.6ಕ್ಕೆ ಎರಡು ತಂಡಗಳು ಪ್ರವಾಸ ಕೈಗೊಳ್ಳಲಿದೆ. ತಂಡದಲ್ಲಿ ಬಿಜೆಪಿ ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಮುಖಂಡರಿದ್ದು, ವಿವರ ಹೀಗಿದೆ.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ನೇತೃತ್ವದಲ್ಲಿ ಗೋವಿಂದ ಕಾರಜೋಳ, ಎನ್‌.ರವಿಕುಮಾರ್‌, ಭಗವಂತ ಖೂಬಾ, ಲಕ್ಷ್ಮಣ ಸವದಿ, ಬಾಬೂರಾವ್‌ ಚೌಹಾಣ್‌, ನರಸಿಂಹ ನಾಯಕ (ರಾಜುಗೌಡ) ಹಾಗೂ ದತ್ತಾತ್ರೇಯ ಪಾಟೀಲ ರೇವೂರ ಅವರನ್ನು ಒಳಗೊಂಡ ಸಮಿತಿ ಡಿ.2ರಂದು ಬೀದರ್‌ನಲ್ಲಿ ಅಧ್ಯಯನ ಪ್ರವಾಸ ಕೈಗೊಳ್ಳಲಿದೆ. ಡಿ. 3ರಂದು ಕಲಬುರ್ಗಿ, ಡಿ.4ಕ್ಕೆ ರಾಯಚೂರು ಮತ್ತು ಯಾದಗಿರಿ ಹಾಗೂ ಡಿ.5ರಂದು ವಿಜಯಪುರ, ಬಾಗಲಕೋಟೆಯಲ್ಲಿ ಅಧ್ಯಯನ ನಡೆಸಲಿದೆ.

ಕೇಂದ್ರ ಸಚಿವ ರಮೇಶ್‌ ಜಿಗಜಿಣಗಿ ನೇತೃತ್ವದಲ್ಲಿ ಪಿ.ಸಿ.ಮೋಹನ್‌, ಜಿ.ಎಚ್‌.ತಿಪ್ಪಾರೆಡ್ಡಿ, ತೇಜಸ್ವಿನಿ ಗೌಡ, ಪೂರ್ಣಿಮಾ ಶ್ರೀನಿವಾಸ್‌, ಬಿ.ಸುರೇಶ್‌ಗೌಡ ಅವರನ್ನೊಳಗೊಂಡ ತಂಡವು ಡಿ. 3ರಂದು ಚಿಕ್ಕಬಳ್ಳಾಪುರ ಹಾಗೂ ಡಿ.4ರಂದು ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಅಧ್ಯಯನ ಪ್ರವಾಸ ಕೈಗೊಳ್ಳಲಿದೆ.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ನೇತೃತ್ವದ ತಂಡದಲ್ಲಿ ಪ್ರಹ್ಲಾದ್‌ ಜೋಶಿ, ನಳಿನ್‌ ಕುಮಾರ್‌ ಕಟೀಲು, ಪ್ರತಾಪ ಸಿಂಹ, ಎಸ್‌.ಜಿ.ಮೇದಪ್ಪ, ಮನು ಮುತ್ತಪ್ಪ ಅವರು ಡಿ.6ರಂದು ಕೊಡಗು ಜಿಲ್ಲೆಯ ನೆರೆಪೀಡಿತ ಪ್ರದೇಶಗಳಲ್ಲಿ ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲಿದೆ.

Advertisement

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ನೇತೃತ್ವದಲ್ಲಿ ಬಿ.ಶ್ರೀರಾಮುಲು, ಕರಡಿ ಸಂಗಣ್ಣ, ಸುರೇಶ್‌ ಅಂಗಡಿ, ಹಾಲಪ್ಪ ಆಚಾರ್‌, ಶಂಕರಗೌಡ ಪಾಟೀಲ್‌, ಈಶ್ವರಚಂದ್ರ ಹೊಸಮನಿ ಅವರನ್ನು ಒಳಗೊಂಡ ತಂಡವು ಡಿ.3ರಂದು ಗದಗ, ಕೊಪ್ಪಳ, ಡಿ.4ರಂದು ಬಳ್ಳಾರಿ, ಧಾರವಾಡ ಹಾಗೂ ಡಿ.5ರಂದು ಬೆಳಗಾವಿಯಲ್ಲಿ ಅಧ್ಯಯನ ನಡೆಸಲಿದೆ.

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ನೇತೃತ್ವದ ತಂಡದಲ್ಲಿ ವಿ.ಸೋಮಣ್ಣ, ಬಿ.ಸೋಮಶೇಖರ್‌, ಸಿ.ಪಿ.ಯೋಗೇಶ್ವರ್‌, ಎಸ್‌.ಎ.ರಾಮದಾಸ್‌, ಎಂ.ಜಯದೇವ್‌, ಎಂ.ರಾಜೇಂದ್ರ ಅವರನ್ನು ಒಳಗೊಂಡ ತಂಡವು ಡಿ.6ರಂದು ಚಾಮರಾಜನಗರ, ಮಂಡ್ಯ ಹಾಗೂ ಡಿ.7ರಂದು ಕೋಲಾರ ಮತ್ತು ರಾಮನಗರ ಜಿಲ್ಲೆಯಲ್ಲಿ ಅಧ್ಯಯನ ಪ್ರವಾಸ ಕೈಗೊಳ್ಳಲಿದೆ.

ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಬಸವರಾಜ ಬೊಮ್ಮಾಯಿ, ಆಯನೂರು ಮಂಜುನಾಥ್‌, ಆರಗ ಜ್ಞಾನೇಂದ್ರ, ಪವಿತ್ರಾ ರಾಮಯ್ಯ ಅವರ ತಂಡ ಡಿ.3ರಂದು ಹಾಸನ, ಚಿಕ್ಕಮಗಳೂರು, ದಾವಣಗೆರೆ ಹಾಗೂ ಡಿ.4ರಂದು ಹಾವೇರಿಯಲ್ಲಿ ಅಧ್ಯಯನ ಪ್ರವಾಸ ಕೈಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next