ರಾಯಬಾಗ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ತಾಲೂಕಿನ 2 ಪುರಸಭೆ, 2 ಪ.ಪಂ. 3 ಗ್ರಾ.ಪಂ. 4 ಗ್ರಾ.ಪಂ. ಉಪಚುನಾವಣೆ ಮತ ಎಣಿಕೆಯು ಅತ್ಯಂತ ಶಾಂತ ರೀತಿಯಿಂದ ನಡೆಯಿತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕತರು ಗುಲಾಲ್ ಎರಚಿ ವಿಜಯೋತ್ಸವ ಆಚರಿಸಿದರು.
ಹಾರೂಗೇರಿ, ಮುಗಳಖೋಡ ಪುರಸಭೆ ಹಾಗೂ ಕಂಕಣವಾಡಿ ಪ.ಪಂ.ಗಳಲ್ಲಿ ಬಿಜೆಪಿ ಪಕ್ಷ ಜಯಭೇರಿ ಬಾರಿಸಿತು. ಚಿಂಚಲಿ ಪ.ಪಂ.ಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜಯಿಯಾದರು. ಚಿಂಚಲಿ ಪ.ಪಂ. ಒಟ್ಟು 19 ಸ್ಥಾನಗಳಲ್ಲಿ ಬಿಜೆಪಿ 5, ಕಾಂಗ್ರೆಸ್ 9, ಪಕ್ಷೇತರರು 5 ಸ್ಥಾನಗಳನ್ನು ಪಡೆದುಕೊಂಡರು.
ಕಂಕಣವಾಡಿ ಪ.ಪಂ. ಒಟ್ಟು 17 ಸ್ಥಾನಗಳಲ್ಲಿ ಬಿಜೆಪಿ 12, ಕಾಂಗ್ರೆಸ್ 5 ಸ್ಥಾನಗಳನ್ನು ಪಡೆದುಕೊಂಡವು. ಕಂಕಣವಾಡಿ ಪ.ಪಂ.ಗೆ ಒಂದೇ ಮನೆತನದ 3 ಜನ ಆಯ್ಕೆಯಾಗಿದ್ದಾರೆ. ಅದರಲ್ಲಿ ತಾಯಿ ಮತ್ತು ಮಗ ಆಯ್ಕೆಗೊಂಡಿರುವುದು ವಿಶೇಷವಾಗಿದೆ.
ಚಿಂಚಲಿ ಪ.ಪಂ.ಗೆ ಆಯ್ಕೆಯಾದವರು: ವಾರ್ಡ 1: ಜಿತೇಂದ್ರ ಜಾಧವದೇಸಾಯಿ, 2: ಈರಗಾರ ಸಾಂವಕ್ಕ ಅಜೀತ (ಬಿಜೆಪಿ), 3: ಮಾಹಬೂಬಿ ಜಾಕೀರಹುಸೆನ ತರಡೆ (ಪಕ್ಷೇತರ), 4: ಫಿರೋಜ ಗುಡುಸಾಬ ಮಕಾಂದಾರ (ಕಾಂಗ್ರೆಸ್), 5: ಮಂದಾಕಿನಿ ಪ್ರಭಾಕರ ಪಟ್ಟೇಕರ (ಪಕ್ಷೇತರ), 6: ರಾಜು ಸದಾಶಿವ ಪೋಳ (ಬಿಜೆಪಿ), 7: ಅರಬಾಜ ಅಬ್ಟಾಸ ಮುಲ್ಲಾ (ಕಾಂಗ್ರೇಸ್), 8: ಸಂಭಾಜಿ ಮಲ್ಲು ಸಿಂದೆ (ಕಾಂಗ್ರೆಸ್), 9. ಫರಿದಾ ಅಬ್ಟಾಸ ಮುಲ್ಲಾ (ಕಾಂಗ್ರೆಸ್), 10: ತುಳಸಿಗೇರಿ ರುಕ್ಮವ್ವಾ ಲಕ್ಷ್ಮಣ (ಪಕ್ಷೇತರ), 11: ಗಾಣಿಗೇರ ಯಲ್ಲವ್ವಾ ಮಹಾದೇವ (ಬಿಜೆಪಿ),
12: ರವಿಚಂದ್ರ ತಮ್ಮಾಣಿ ಬೇಡರ (ಕಾಂಗ್ರೆಸ್), 13: ರುಕ್ಮಿಣಿ ಮಾರುತಿ ಹಾರೂಗೇರಿ (ಬಿಜೆಪಿ), 14: ಕುಮಾರ ಶಂಕರ ಖೋತ (ಬಿಜೆಪಿ), 15: ಕವಿತಾ ಸಹಾದೇವ ಯಡ್ರಾಂವೆ (ಕಾಂಗ್ರೆಸ್), 16: ಬಾಹುಬಲಿ ಪಾರಿಸ ಹಂಡಗೆ (ಕಾಂಗ್ರೆಸ್), 17: ಬಸನಾಯಿಕ ವಿಲಾಸ ಭೀಮರಾವ (ಪಕ್ಷೇತರ), 18. ಸುಭಾಷ ಪರಸು ಮಲಾಜುರೆ (ಕಾಂಗ್ರೆಸ್), 19: ಅಪ್ಪಾಸಾಬ ವಸಂತ ವಡ್ಡರ (ಕಾಂಗ್ರೆಸ್)
ಕಂಕಣವಾಡಿ ಪ.ಪಂ. ವಿಜೇತರು: ವಾರ್ಡ್ 1: ದೇಸಾಯಿ ಕೃಷ್ಣರಾವ ಭೀಮರಾವ (ಬಿಜೆಪಿ), 2. ಕಸ್ತೂರಿ ಸಿದ್ದಪ್ಪ ಹುಕ್ಕೇರಿ (ಬಿಜೆಪಿ), 3.ನಟರಾಜ ಯಲ್ಲಪ್ಪ ಮಾವರಕರ (ಬಿಜೆಪಿ), 4. ಅಣ್ಣಪ್ಪಾ ಹೊಳೆಪ್ಪ ನಾಯಿಕ (ಬಿಜೆಪಿ), 5. ರಂಗವ್ವ ಕೆಂಪಯ್ನಾ ಸಂಗೆ„ಯ್ಯಗೋಳ (ಕಾಂಗ್ರೆಸ್), 6. ರಾಮನಾಯ್ಕ ಹಣಮಂತ ನಾಯ್ಕ (ಬಿಜೆಪಿ), 7. ಅರ್ಜುನ ತಮ್ಮಣ್ಣ ನಾಯಿಕವಾಡಿ (ಕಾಂಗ್ರೆಸ್), 8. ಪಾರ್ವತಿ ಕಾಸಪ್ಪ ಹುಕ್ಕೇರಿ (ಬಿಜೆಪಿ), 9. ಅಪ್ಪಾಸಾಬ ಸಿದ್ದಪ್ಪ ಬ್ಯಾಕೂಡ
(ಬಿಜೆಪಿ), 10. ರಾಜಶ್ರೀ ತಮ್ಮಣ್ಣಾ ನಾಯಿಕವಾಡಿ (ಕಾಂಗ್ರೆಸ್), 11. ಬೆಳಕೂಡ ಲಕ್ಷ್ಮಿ ಶಿವಪ್ಪ (ಬಿಜೆಪಿ), 12. ನಾಯಿಕವಾಡಿ ರುಕ್ಮವ್ವಾ ಭೀಮಪ್ಪ (ಬಿಜೆಪಿ), 13. ಮಂಜುಳಾ ಬಸವರಾಜ ಮರ್ದಿ (ಕಾಂಗ್ರೆಸ್), 14. ಪ್ರಕಾಶ ಸಿದ್ದಪ್ಪ ಹುಕ್ಕೇರಿ (ಬಿಜೆಪಿ), 15. ಅರವಿಂದ ಶಾಬನ ಗದಾಡಿ (ಕಾಂಗ್ರೆಸ್), 16. ಖಣದಾಳೆ ರಾಜಶೇಖರ ಶಂಕರ (ಬಿಜೆಪಿ), 17. ಗದಾಡಿ ಮಹಾದೇವ ಲಕ್ಷ್ಮಣ (ಬಿಜೆಪಿ).