Advertisement
ಶುಕ್ರವಾರ ಕುಸುಗಲ್ಲ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಆಯೋಜಿಸಿದ್ದ ಜನಸ್ವರಾಜ್ಯ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಕೇವಲ ಹಣ, ತೋಳ್ಬಲ, ಧರ್ಮ, ಜಾತಿ ರಾಜಕಾರಣದ ಮೂಲಕ ಚುನಾವಣೆ ಮಾಡಿಕೊಂಡು ಬಂದಿರುವ ಪಕ್ಷ. ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಅಂತಹ ಕೆಟ್ಟ ಸಂಪ್ರದಾಯದ ಪಕ್ಷವನ್ನು ಸಂಪೂರ್ಣವಾಗಿ ಜನರು ತಿರಸ್ಕರಿಸಿದ್ದಾರೆ. ಇನ್ನೂ 20 ವರ್ಷ ಕಳೆದರೂ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುತ್ತದೆ. ಮುಂದಿನ ಬಾರಿಯೂ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿರುತ್ತಾರೆ ಎಂದರು.
Related Articles
Advertisement
ವಿಧಾನಪರಿಷತ್ತು ಸದಸ್ಯ ಪ್ರದೀಪ ಶೆಟ್ಟರ ಮಾತನಾಡಿ, ಜಲಧಾರೆ ಹಾಗೂ ಜಲಜೀವನ ಮಿಷನ್, ರಸ್ತೆಗಳು ಸೇರಿದಂತೆ ಹಲವು ಯೋಜನೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. 176 ಕೋಟಿ ರೂ. ವೆಚ್ಚದಲ್ಲಿ ಅಮೃತ ಯೋಜನೆ ನಡೆದಿದೆ. ವಿಧಾನಪರಿಷತ್ತು ಹಾಗೂ ವಿಧಾನಸಭೆ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಅಡಿಪಾಯ ಎಂದು ಹೇಳಿದರು.
ಬಿಜೆಪಿಗೆ ವಿರೋಧಿ ಅಲೆ ಶುರುವಾಗಿದೆ ಎನ್ನುವ ಆರೋಪವನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಹೇಳುತ್ತಿದ್ದಾರೆ. ಆದರೆ ತಮ್ಮ ಪಕ್ಷಕ್ಕೆ ಅನ್ವಯಿಸುತ್ತಿದೆ ಎನ್ನುವ ಸಾಮಾನ್ಯ ಜ್ಞಾನವೂ ಅವರಿಗೆ ಇಲ್ಲದಂತಾಗಿದೆ. ವಿಧಾನಪರಿಷತ್ತು 25 ಸ್ಥಾನಗಳ ಪೈಕಿ 15 ಸ್ಥಾನಗಳನ್ನು ಗೆಲ್ಲಲಿದ್ದೇವೆ.ಬಿ.ಶ್ರೀರಾಮುಲು, ಸಾರಿಗೆ ಸಚಿವ ರೈತರ ಭಾವನೆಗಳನ್ನು ಅರ್ಥ ಮಾಡಿಕೊಂಡು ಮೂರು ಮಸೂದೆಗಳನ್ನು ವಾಪಸ್ ಪಡೆದಿರುವುದನ್ನು ಅಭಿನಂದಿಸಬೇಕು. ಸ್ವಾತಂತ್ರ್ಯ ಬಂದರೂ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಇರಲಿಲ್ಲ. ಇದನ್ನು ಕೇಂದ್ರ ಸರಕಾರ ಮಾಡಿದೆ. ಆದಿವಾಸಿಗಳು ಹಾಗೂ ದಲಿತರ ಏಳ್ಗೆಗೆ ಹಲವು ಯೋಜನೆಗಳನ್ನು ಪ್ರಧಾನಿಗಳು ಮಾಡಿ ತೋರಿಸಿದ್ದಾರೆ. ಮೊದಲ ಹಂತದಲ್ಲಿ ಶುದ್ಧ ನೀರಿಗಾಗಿ ಕೇಂದ್ರ ಸರಕಾರ 8500 ಕೋಟಿ ರೂ. ನೀಡಿದೆ.
ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ ಗ್ರಾಪಂ ಸದಸ್ಯರ ಗೌರವಧನ 250 ರೂ. ನಿಂದ 1000 ರೂ. ಮಾಡಿದ್ದು ಯಡಿಯೂರಪ್ಪನರು. ಕಾಂಗ್ರೆಸ್ ಅ ಧಿಕಾರದಲ್ಲಿ ಗ್ರಾಪಂಗೆ 5 ಲಕ್ಷ ರೂ. ಬರುತ್ತಿರಲಿಲ್ಲ. ಆದರೆ ಇಂದು 50 ಲಕ್ಷ ರೂ.ನಿಂದ 1 ಕೋಟಿ ರೂ. ಅನುದಾನ ಬರುತ್ತಿದೆ. ಹಿಂದೆ ರಸ್ತೆ ಎನ್ನುವುದು ಕನಸಾಗಿತ್ತು, ಇಂದು ಕಾಂಕ್ರೀಟ್ ರಸ್ತೆಗಳು ಬಂದಿವೆ. ತಂತ್ರಜ್ಞಾನ ಹಳ್ಳಿಗಳಿಗೆ ತಲುಪಿದೆ. ಸರಕಾರದ ಸೌಲಭ್ಯಗಳ ದೊಡ್ಡ ಪಟ್ಟಿಯಿದೆ. ಎಲ್ಲಾ ಸಮಸ್ಯೆಗೂ ಬಿಜೆಪಿ ಪರಿಹಾರ.
ಎನ್.ರವಿಕುಮಾರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ