Advertisement

ಪ್ರಬಲರ ವಿರುದ್ಧ ಬಿಜೆಪಿ ಕ್ರಿಮಿನಲ್‌ ಕೇಸ್‌ ಅಸ್ತ್ರ: ಡಿ ಕೆ ಶಿವಕುಮಾರ್

08:31 PM Nov 07, 2022 | Team Udayavani |

ಬೆಳಗಾವಿ: ಬಿಜೆಪಿಯವರು ಸೋನಿಯಾ, ರಾಹುಲ್‌ ಹಾಗೂ ನನ್ನನ್ನು ಕ್ರಿಮಿನಲ್‌ ಮಾಡಿದ್ದಾರೆ. ರಾಜಕೀಯವಾಗಿ ಯಾರ್ಯಾರು ಬೆಳೆಯುತ್ತಾರೆ, ಪ್ರಬಲವಾಗಿ ಇರುವವರನ್ನು ಕ್ರಿಮಿನಲ್‌ ಮಾಡಿದ್ದಾರೆ. ಯಾರನ್ನು ಕಂಡರೆ ಅವರಿಗೆ ಹೆದರಿಕೆ ಇರುತ್ತದೋ ಅವರ ಮೇಲೆ ಕೇಸ್‌ ಹಾಕುವುದು, ತೊಂದರೆ ಕೊಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆರೋಪಿಸಿದರು.

Advertisement

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಪಕ್ಷಕ್ಕೆ ಬರಲು ಬಹಳಷ್ಟು ಜನ ಸಂಪರ್ಕದಲ್ಲಿದ್ದಾರೆ. ಕೆಲವರು ಪಕ್ಷಕ್ಕೆ ಅರ್ಜಿ ಹಾಕುವವರಿದ್ದಾರೆ, ಬಂದಾಗ ಜಿಲ್ಲಾವಾರು ಪಟ್ಟಿ ಬಿಡುಗಡೆ ಮಾಡುತ್ತೇವೆ. ಕಾಂಗ್ರೆಸ್‌ ತತ್ವ, ಸಿದ್ಧಾಂತದಲ್ಲಿ ನಂಬಿಕೆ ಇದ್ದವರು ಅರ್ಜಿ ಹಾಕಲಿ ಎಂದರು.

ಜನಾರ್ದನ ರೆಡ್ಡಿ ಕಾಂಗ್ರೆಸ್‌ ಸೇರುವ ಕುರಿತು ನನ್ನ ಸಂಪರ್ಕ ಮಾಡಿಲ್ಲ. ನಾನು ಇಂಧನ ಸಚಿವನಿದ್ದಾಗ ನಡೆದ ಭ್ರಷ್ಟಾಚಾರ ಬಗ್ಗೆ ತನಿಖೆ ಮಾಡುವುದಾಗಿ ಸಿಎಂ ಕ್ರಮ ಸ್ವಾಗತಿಸುತ್ತೇನೆ. ನಾನೇನೂ ಕಣ್ಣು ಮುಚ್ಚಿ ಕುಳಿತುಕೊಂಡಿಲ್ಲ. ಇಂಧನ ಸಚಿವರು, ಜಲಸಂಪನ್ಮೂಲ ಸಚಿವರು ಬಿಜೆಪಿ ಆಡಳಿತದಲ್ಲಿ ಏನೇನು ಗುತ್ತಿಗೆ ಕೊಟ್ಟಿದ್ದಾರೆ. ಸಾವಿರ ಕೋಟಿ ಇರುವುದನ್ನು ಸಾವಿರದ ಮುನ್ನೂರು ಕೋಟಿ ಮಾಡಿದ್ದಾರೆ. 300 ಕೋಟಿ ಇರುವುದನ್ನು 700 ಕೋಟಿ ರೂ. ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲೂ ಇದರ ಬಗ್ಗೆ ಸಾಕಷ್ಟು ಉದಾಹರಣೆಗಳಿವೆ. ನಾನೇನೂ ಕಣ್ಣು ಮುಚ್ಚಿಕೊಂಡು ರಾಜಕಾರಣ ಮಾಡುತ್ತಿಲ್ಲ. ಜೀಮ್‌ ಸಹಿಗಳು ನಡೆದಿವೆ, ಹತ್ತು ಲಕ್ಷ ಕೋಟಿ ಬಂಡವಾಳ ಹೂಡಿಕೆ ನಡೆದಿದೆ. ಸಮಯ ಬಂದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದರು.

ಪಕ್ಷದ ಸಂಘಟನೆ ದೃಷ್ಟಿಯಿಂದ ಕಾಂಗ್ರೆಸ್‌ ನಾಯಕರು, ಅವರ ಅಭಿಮಾನಿಗಳು, ಕಾರ್ಯಕರ್ತರು ಜನ್ಮದಿನ ಆಚರಿಸುತ್ತಿದ್ದಾರೆ. ವಿನಯ ಕುಲಕರ್ಣಿಗೆ ಧಾರವಾಡಕ್ಕೆ ಹೋಗಲು ಕೋರ್ಟ್‌ ನಿರ್ಬಂಧ ಹೇರಿದೆ. ಹೀಗಾಗಿ ಪಕ್ಕದ ಕ್ಷೇತ್ರದಲ್ಲಿ ಅವರ ಕಾರ್ಯಕ್ರಮ ಮಾಡುತ್ತಿದ್ದಾರೆ. ಜನ್ಮದಿನ ಆಚರಣೆಯಲ್ಲಿ ಒಬ್ಬೊಬ್ಬರದು ಒಂದೊಂದು ಶೈಲಿ ಇರುತ್ತದೆ. ನಾನು ಕೇದಾರನಾಥಕ್ಕೆ ಹೋಗಿದ್ದೆ, ಮತ್ತೊಬ್ಬರು ಆಸ್ಪತ್ರೆಗೆ ಹೋಗಿ ಹಣ್ಣು ಹಂಪಲು ಕೊಟ್ಟು ಆಚರಿಸುತ್ತಾರೆ. ಸಿದ್ದರಾಮಯ್ಯ ಜನ್ಮದಿನ ಅವರ ಅಭಿಮಾನಿಗಳು ಆಚರಿಸಿದರು.

ವಿನಯ ಕುಲಕರ್ಣಿ 2-3 ಬಾರಿ ಶಾಸಕರಾಗಿದ್ದವರು. ಕಾರ್ಯಕರ್ತರ ಭಾವನೆಗೆ ಅನುಗುಣವಾಗಿ ಜನ್ಮದಿನ ಆಚರಿಸಲಾಗುತ್ತಿದೆ. ಅವರ ಮೇಲೆ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿದ್ದರೂ ರಾಜಕೀಯ ದುರುದ್ದೇಶದಿಂದ ಬಿಜೆಪಿಯವರು ಪ್ರಭಾವ ಬೀರಿ ಸಿಬಿಐಗೆ ವಹಿಸಿದ್ದಾರೆ. ಸಿಬಿಐ ಯಾವ ರೀತಿ ಕೆಲಸ ಮಾಡುತ್ತಿದೆ ನಾನೇನು ಬಿಡಿಸಿ ಹೇಳಬೇಕಾಗಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next