Advertisement

ಬಿಜೆಪಿ ಕೋರ್‌ ಕಮಿಟಿ ಸಭೆ 17ಕ್ಕೆ ಮುಂದೂಡಿಕೆ

12:30 AM Mar 15, 2019 | Team Udayavani |

ಬೆಂಗಳೂರು: ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ಶುಕ್ರವಾರ ನಿಗದಿಯಾಗಿದ್ದ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ಮಾ.17ಕ್ಕೆ ಮುಂದೂಡಿಕೆಯಾಗಿದೆ. ಮಾ.15ಕ್ಕೆ ಕೋರ್‌ ಕಮಿಟಿ ಸಭೆ ನಿಗದಿಯಾಗಿತ್ತು. ಆದರೆ ರಾಜ್ಯಾಧ್ಯಕ್ಷರು ಸೇರಿ ಹಿರಿಯ ನಾಯಕರು ಮಾ.18ಕ್ಕೆ ದೆಹಲಿಗೆ ತೆರಳಿರುವ ಹಿನ್ನೆಲೆಯಲ್ಲಿ 17ಕ್ಕೆ ಕೋರ್‌ ಕಮಿಟಿ ಸಭೆ ನಿಗದಿಪಡಿಸಲಾಗಿದೆ. ಜತೆಗೆ ಸಮರ್ಥ, ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗೆ ಇನ್ನಷ್ಟು ಕಾಲಾವಕಾಶ ಸಿಗಲಿದೆ.

Advertisement

ಮಾ.18ಕ್ಕೆ ದೆಹಲಿಯಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿಯಲ್ಲಿ ಕೋರ್‌ ಕಮಿಟಿ ಶಿಫಾರಸು ಮಾಡಿರುವ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದು ಅಂತಿಮಗೊಳ್ಳಲಿದೆ. ಅದೇ ದಿನ 20ರಿಂದ 22 ಕ್ಷೇತ್ರದ ಅಭ್ಯರ್ಥಿಗಳ ಹೆಸರು ಅಖೈರುಗೊಂಡು ಘೋಷಣೆಯಾಗುವ ನಿರೀಕ್ಷೆ ಇದೆ ಎಂದು ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next