Advertisement

ಅಹಿಂದ ವರ್ಗಕ್ಕೆ ಬಿಜೆಪಿ ಕೊಡುಗೆ ಅಪಾರ: ಮುದಿರಾಜ್‌

11:00 AM Nov 30, 2017 | Team Udayavani |

ಕಲಬುರಗಿ: ಕೇಂದ್ರ ಸರಕಾರದಲ್ಲಿ ನರೇಂದ್ರ ಮೋದಿ ಮತ್ತು ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ದಲಿತ ಮತ್ತು ಅಹಿಂದ್‌ ವರ್ಗಕ್ಕೆ ಅಪಾರ ಕೊಡುಗೆಗಳನ್ನು
ನೀಡಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜಗೋಪಾಲರೆಡ್ಡಿ ಮುದಿರಾಜ್‌
ಹೇಳಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಪಕ್ಷದ ಪರಿಶಿಷ್ಟ ಪಂಗಡ ಮೋರ್ಚಾ ನಗರ ಜಿಲ್ಲೆ ಹಾಗೂ ಗ್ರಾಮಾಂತರ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರವು ಪರಿಶಿಷ್ಟ ಪಂಗಡಕ್ಕೆ ಶೇಕಡಾ 7.5ರಷ್ಟು
ಮೀಸಲಾತಿ ಜಾರಿ ಮಾಡಿದೆ. ಆದಾಗ್ಯೂ, ರಾಜ್ಯ ಕಾಂಗ್ರೆಸ್‌ ಸರ್ಕಾರವು ಜಾರಿ ಮಾಡದೇ ಪರಿಶಿಷ್ಟ ಪಂಗಡದವರನ್ನು
ವಂಚಿಸಿದೆ. ಬಿಜೆಪಿ ಕಾರ್ಯಕರ್ತರೆಂದರೆ ದೇಶಕ್ಕಾಗಿ ಒಳ್ಳೆಯದು ಮಾಡುವುದು ಹಾಗೂ ದೇಶಕ್ಕಾಗಿ ಪ್ರಾಣ
ಬಿಡಲು ಸಿದ್ಧರಿದ್ದಾರೆ ಎಂದರು.

ಪ್ರತಿ ಮಂಡಲದಲ್ಲಿ ಕಲಬುರ್ಗಿ ನಗರ ಗ್ರಾಮಾಂತರ ಜಿಲ್ಲೆಯ ಏಳು ಮಂಡಲಗಳಲ್ಲಿ ಬಂದ ತಾಲೂಕು
ಅಧ್ಯಕ್ಷರುಗಳು ತಮ್ಮ ತಂಡಗಳನ್ನು ಕಟ್ಟಿಕೊಂಡ ಸಮಿತಿ ಸದಸ್ಯರನ್ನು ಮನೆ ಮನೆಗೆ ಹೋಗಿ ಕೇಂದ್ರ ಸರ್ಕಾರದ
ಸಾಧನೆ ಹಾಗೂ ಈ ಹಿಂದೆ ಇದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪರಿಶಿಷ್ಟ ಪಂಗಡಕ್ಕೆ ನೀಡಿದ್ದ ಸೌಲತ್ತುಗಳನ್ನು ಜನರ ಮನೆಗೆ ಹೋಗಿ ತಿಳಿಸಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕೆ ಬರುವಂತೆ ಶ್ರಮಿಸಬೇಕು ಎಂದರು.

ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ರಾಜೇಂದ್ರ ವಿಕರಾಬಾದ ಮಾತನಾಡಿ, ಕೇಂದ್ರ ಸರ್ಕಾರವು ಪರಿಶಿಷ್ಟ
ಪಂಗಡದ ಶೇಕಡಾವಾರು ಮೀಸಲಾತಿಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು ಜಾರಿಗೆ ತರದೇ ನಿರ್ಲಕ್ಷ್ಯ ವಹಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಯಕ ಜನಾಂಗದ ನಾಲ್ವರು ಸಚಿವರಾಗಿದ್ದರು. ಆದಾಗ್ಯೂ, ಕಾಂಗ್ರೆಸ್‌ ಅವ 
ಧಿಯಲ್ಲಿ ನಾಯಕ ಜನಾಂಗಕ್ಕೆ ಒಂದು ಸಚಿವ ಸ್ಥಾನ ನೀಡಿ, ಬಿಜೆಪಿ ಸರಕಾರದಲ್ಲಿ ವಾಲ್ಮೀಕಿ ನಿಗಮ ಸ್ಥಾಪಿಸಲಾಯಿತು.
ಇವತ್ತಿನ ಕಾಂಗ್ರೆಸ್‌ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಅನ್ಯಾಯ ಮಾಡಿದೆ ಎಂದು ದೂರಿದರು.

ನಗರ ಜಿಲ್ಲೆಯ ಅಧ್ಯಕ್ಷ ಚನ್ನಪ್ಪ ಸುರಪುರಕರ್‌ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಹೋಗಿ ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಪರಿಶಿಷ್ಟ ಜನಾಂಗಕ್ಕೆ ಅಭಿವೃದ್ಧಿ ಮಾಡಿದ ಬಗ್ಗೆ ಹೇಳಬೇಕು ಎಂದರು.

Advertisement

ರಾಜ್ಯ ಸರ್ಕಾರ ಕೂಡಲೇ ಶೇಕಡಾ 7ರಷ್ಟು ಮಿಸಲಾತಿ ಕೊಡಬೇಕು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮೇಲೆ
ಒತ್ತಡ ಹೇರಲು ಜನೇವರಿಯಲ್ಲಿ ಬೃಹತ್‌ ಪ್ರತಿಭಟನೆ ಮೆರವಣಿಗೆ ನಡೆಸಲಾಗುವುದು. ಜನಜಾಗೃತಿ ಶಿಬಿರವನ್ನು
ಫೆಬ್ರವರಿಯಲ್ಲಿ ನಗರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

ಧರ್ಮಣ್ಣ ಇಟಗಾ, ಶರಣಪ್ಪ ತಳವಾರ, ಅನಿಲಕುಮಾರ ಜಾಧವ್‌, ಸುರೇಶ ವೈದ್ಯರಾಜ್‌, ರಾಘವೇಂದ್ರ ಕುಲಕರ್ಣಿ,
ವಿಜಯಕುಮಾರ ಬಂಗಾರಿ, ರಾಘವೇಂದ್ರ ಭಂಟಿ, ನಾಗರಾಜ ಜನಕೇರಿ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next