Advertisement

ಜೇವರ್ಗಿಯಲ್ಲಿ ಬಿಜೆಪಿ-ಕಾಂಗ್ರೆಸ್‌ ರೋಡ್‌ ಶೋ

11:56 AM May 11, 2018 | Team Udayavani |

ಜೇವರ್ಗಿ: ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರದ ಕೊನೆದಿನವಾದ ಗುರುವಾರ ಬಿಜೆಪಿ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಬೃಹತ್‌ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದರು.

Advertisement

ಪಟ್ಟಣದ ಚರಚಕ್ರವರ್ತಿ ಷಣ್ಮುಖ ಶಿವಯೋಗಿ ವಿರಕ್ತ ಮಠದಿಂದ ಸಾವಿರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಖಡಕ್‌ ಬಿಸಿಲಿನಲ್ಲಿ ಕಾಲ್ನಡಿಗೆ ಮೂಲಕ ವಿವಿಧ ಭಾಜಾ ಭಜಂತ್ರಿಗೊಂದಿಗೆ ಬಿಜೆಪಿ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ ರೋಡ್‌ ಶೋ ನಡೆಸಿದರು. ಶ್ರೀಮಠದಿಂದ ಬುದ್ಧನಗರ, ಅಖಂಡೇಶ್ವರ ವೃತ್ತ, ರಿಲ್ಯಾಯನ್ಸ್‌ ಪೆಟ್ರೋಲ್‌ ಬಂಕ್‌,
ಅಂಬೇಡ್ಕರ್‌ ಸರ್ಕಲ್‌, ಬಸವೇಶ್ವರ ಸರ್ಕಲ್‌, ಜೋಪಡಪಟ್ಟಿ, ಕನಕದಾಸ ವೃತ್ತ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ರೋಡ್‌ ಶೋ ನಡೆಸಿ ಮತ ಯಾಚನೆ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ದೊಡ್ಡಪ್ಪಗೌಡ ಪಾಟೀಲ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಡವರಿಗಾಗಿ, ರೈತರಿಗಾಗಿ, ಮಹಿಳೆಯರಿಗಾಗಿ ಹಲವಾರು ಜನಪರ ಯೋಜನೆ ಜಾರಿಗೆ ತಂದಿದ್ದಾರೆ. ಮೋದಿ ಸರ್ಕಾರದ ಸಾಧನೆಯೇ ತಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಸಾಯಬಣ್ಣ ದೊಡ್ಮನಿ, ಮುಖಂಡರಾದ ರಮೇಶಬಾಬು ವಕೀಲ, ಎಂ.ಬಿ.ಪಾಟೀಲ, ಮಲ್ಲಿನಾಥಗೌಡ ಯಲಗೋಡ, ಧರ್ಮಣ್ಣ ದೊಡ್ಮನಿ, ಜಿಪಂ ಸದಸ್ಯರಾದ ದಂಡಪ್ಪ ಸಾಹು ಕುರಳಗೇರಾ, ಶಿವರಾಜಪಾಟೀಲ ರದ್ದೇವಾಡಗಿ, ರೇವಣಸಿದ್ದಪ್ಪ ಸಂಕಾಲಿ, ಮಹಾದೇವಪ್ಪ ದೇಸಾಯಿ, ಮಾಜಿ ಸದಸ್ಯೆ ಶೋಭಾ ಬಾಣಿ, ಬಾಬು ಪಾಟೀಲ ಮುತ್ತಕೋಡ, ಶಿವುಗೌಡ ಕೆಲ್ಲೂರ, ಸಂಗನಗೌಡ ಪಾಟೀಲ ಅವರಾದ, ಶ್ರೀಶೈಲಗೌಡ ಕರಕಿಹಳ್ಳಿ, ಅಂಬರೀಶ ರಾಠೊಡ ಇದ್ದರು.

ಶಾಸಕ ಡಾ| ಅಜಯಸಿಂಗ್‌ ರೋಡ್‌ ಶೋ: ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಡಾ| ಅಜಯಸಿಂಗ್‌ ಗುರುವಾರ ರಿಲ್ಯಾಯನ್ಸ್‌ ಪೆಟ್ರೋಲ್‌ ಬಂಕ್‌ ನಿಂದ ತೆರೆದ ಜೀಪ್‌ನಲ್ಲಿ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದರು.

Advertisement

ಮಧ್ಯಾಹ್ನ 12 ಗಂಟೆಗೆ ಪೆಟ್ರೋಲ್‌ ಬಂಕ್‌ನಿಂದ ಬಸವೇಶ್ವರ ವೃತ್ತದ ವರೆಗೆ ಬೃಹತ್‌ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದರು. ದಾರಿಯುದ್ದಕ್ಕೂ ಎರಡು ಬದಿಯ ಜನರತ್ತ ಕೈಮುಗಿದು ಶಾಸಕರು ಮತಯಾಚನೆ ಮಾಡಿದರು. ನಂತರ ಮಾತನಾಡಿದ ಅವರು, ಕಳೆದ 5 ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೈಗೊಂಡ ಉತ್ತಮ ಕಾರ್ಯಗಳು ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ. ಶಾಸಕನಾಗಿ 1500 ಕೋಟಿ ರೂ.ಅನುದಾನ ತಂದು ರಸ್ತೆ, ಸೇತುವೆ, ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಅಲ್ಲದೇ ಜೇವರ್ಗಿ ಕ್ಷೇತ್ರವನ್ನು ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ಗುರಿ ಇಟ್ಟುಕೊಂಡಿದ್ದು, ಮತ್ತೂಮ್ಮೆ ಕಾಂಗ್ರೆಸ್‌ಗೆ ಬೆಂಬಲಿಸುವಂತೆ ಮನವಿ ಮಾಡಿದರು.

ಕಲಬುರಗಿ ಮೇಯರ್‌ ಶರಣಕುಮಾರ ಮೋದಿ, ಮುಖಂಡರಾದ ರಾಜಶೇಖರ ಸೀರಿ, ಇಲಿಯಾಸ್‌ ಸೇಠ ಬಾಗವಾನ, ಅಬ್ದುಲ್‌ ರಹೇಮಾನ ಪಟೇಲ, ಷಣ್ಮುಖಪ್ಪಗೌಡ ಹಿರೇಗೌಡ, ನೀಲಕಂಠ ಅವುಂಟಿ, ಶ್ರೀಮಂತ ಧನಕರ್‌, ಮಹಿಮೂದ್‌ ಪಟೇಲ, ಮಹಿಬೂಬ ಶಾನವಾಲೆ ಮತ್ತಿತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next