ಭುವನೇಶ್ವರ: ಕೊಲೆ ಆರೋಪಕ್ಕೆ ಗುರಿಯಾಗಿರುವ ಒಡಿಶಾ ಗೃಹ ಖಾತೆ ಸಹಾಯಕ ಸಚಿವ ದಿವ್ಯಶಂಕರ್ ಮಿಶ್ರಾ ಅವರನ್ನು ಸಂಪುಟದಿಂದ ವಜಾ ಮಾಡುವ ವರೆಗೆ ಸಿಎಂ ನವೀನ್ ಪಟ್ನಾಯಕ್ ಅವರ ಮೇಲೆ ಮೊಟ್ಟೆ ಎಸೆಯಲು ಬಿಜೆಪಿ ಯುವ ಮೋರ್ಚಾ ಈಗಾಗಲೇ ನಿರ್ಧರಿಸಿದೆ. ಅದಕ್ಕೆ ಕಾಂಗ್ರೆಸ್ ಕೂಡ ಜತೆ ಸೇರಲು ಮುಂದಾಗಿದೆ.
ಹೀಗಾಗಿ, ಒಡಿಶಾದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮೊಟ್ಟೆ ಎಸೆಯುವ ನಿಟ್ಟಿನಲ್ಲಿ ಮೈತ್ರಿ ಮಾಡಿಕೊಂಡಿವೆ. ಬುಧವಾರ ನಡೆದಿದ್ದ ಬೆಳವಣಿಗೆಯಲ್ಲಿ ಪುರಿಯಲ್ಲಿ ಸಿಎಂ ನವೀನ್ ಪಟ್ನಾಯಕ್ ಮೇಲೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಲಾಗಿತ್ತು.
ಗುರುವಾರ ಭುವನೇಶ್ವರ ಸಂಸದೆ, ಬಿಜೆಡಿ ನಾಯಕಿ ಅಪರಾಜಿತಾ ಸಾರಂಗಿ ಕಾರಿನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ನಿನ್ನೆ ಬಿಜೆಪಿ ಅಭ್ಯರ್ಥಿ, ಇಂದು ಕಾಂಗ್ರೆಸ್ ಅಭ್ಯರ್ಥಿಯಿಂದ ಸಂಸದೆ ಸುಮಲತಾ ಭೇಟಿ