Advertisement

ದೇಶಾದ್ಯಂತ ಬಿಜೆಪಿ ಸಂಭ್ರಮಾಚರಣೆ

01:48 AM May 24, 2019 | Team Udayavani |

ಲೋಕಸಭೆ ಚುನಾವಣೆಯಲ್ಲಿ ಬಹುದೊಡ್ಡ ಗೆಲುವು ಸಾಧಿಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ, ದೇಶಾದ್ಯಂತ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಇದು 2014ರ ಚುನಾವಣೆ ಗೆಲುವಿಗಿಂತಲೂ ದೊಡ್ಡ ಗೆಲುವು ಎಂದು ಪ್ರಮುಖ ನಾಯಕರು ಬಣ್ಣಿಸಿದ್ದಾರೆ. ಸತತವಾಗಿ 2ನೇ ಅವಧಿಗೆ ಬಿಜೆಪಿ ಗೆಲುವಿಗೆ ಕಾರಣವಾದ ನರೇಂದ್ರ ಮೋದಿ ಮತ್ತು ಅಮಿತ್‌ ಶಾಗೆ ವಿವಿಧ ರಾಜ್ಯಗಳ ಪ್ರಮುಖ ನಾಯಕರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಧಾನಿ ನರೇಂದ್ರ ನೇತೃತ್ವದ ಬಿಜೆಪಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

Advertisement

ಈ ಗೆಲುವಿನ ಹಿನ್ನಲೆಯಲ್ಲಿ ದೇಶಾದ್ಯಂತ ಇರುವ ಬಿಜೆಪಿ ಕಚೇರಿಗಳಲ್ಲಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸಂಭ್ರಮಾಚರಣೆಯಲ್ಲಿ ಮಹಿಳಾ ಕಾರ್ಯಕರ್ತರೂ ಹಿಂದೆ ಬಿದ್ದಿಲ್ಲ. ‘ಹರ್‌ ಹರ್‌ ಮೋದಿ’ ಎಂದು ಘೋಷಣೆ ಕೂಗುತ್ತ್ತಾ, ಮೋದಿಯ ಬ್ಯಾನರ್‌ ಮತ್ತು ಕಟೌಟ್‌ಗಳನ್ನು ಹಿಡಿದು ಕುಣಿದಾಡಿದ್ದಾರೆ. ಅಲ್ಲದೆ ಕೆನ್ನೆಯ ಮೇಲೆ ಬಿಜೆಪಿ ಚಿಹೆØಗಳನ್ನು ಬಿಡಿಸಿಕೊಂಡು ಸಂಭ್ರಮಿಸಿದ್ದಾರೆ. ಕಾರ್ಯಕರ್ತರು ತಮ್ಮ ತಮ್ಮ ಕಚೇರಿಗಳಲ್ಲಿ ನಾಯಕರ ಕಟೌಟ್‌ಗಳನ್ನು ಹಿಡಿದು ಮೆರವಣಿಗೆ ನಡೆಸಿದ್ದಾರೆ.

ಮತಗಟ್ಟೆ ಸಮೀಕ್ಷೆ ಹೊರಬೀಳುತ್ತಿದ್ದಂತೆಯೇ ಎನ್‌ಡಿಎ ಗೆಲುವು ನಿಚ್ಚಳ ಎಂಬುದು ತಿಳಿದುಬಂದಾಗಲೇ ದೇಶಾದ್ಯಂತ ಹಲವು ಬಿಜೆಪಿ ನಾಯಕರು, ಕೆಜಿಗಟ್ಟಲೆ ಲಡ್ಡು, ಕೇಕ್‌ ಮತ್ತಿತರ ಸಿಹಿತಿಂಡಿಗಳಿಗೆ ಆರ್ಡರ್‌ ಕೊಟ್ಟಿದ್ದರು. ಅವರ ನಿರೀಕ್ಷೆಯಂತೆಯೇ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿರುವುದು ಸಂಭ್ರಮ ಇಮ್ಮಡಿಸಿದೆ. ಇತ್ತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಕಾಂಗ್ರೆಸ್‌, ಬಿಎಸ್ಪಿ ಮತ್ತು ಸಮಾಜವಾದಿ ಪಕ್ಷಗಳ ಕಚೇರಿಗಳು ಕಾರ್ಯಕರ್ತರು ಮತ್ತು ಸಂಭ್ರಮವಿಲ್ಲದೆ ಭಣಗುಟ್ಟಿದವು.

Advertisement

Udayavani is now on Telegram. Click here to join our channel and stay updated with the latest news.

Next