Advertisement
ಕಾರ್ಯಕಾರಿಣಿ ಮುಗಿದ ತತ್‌ಕ್ಷಣ ಸಂಪುಟ ವಿಸ್ತರಣೆ ಅಥವಾ ಪುನಾ ರಚನೆ ಖಚಿತ ಎಂದು ಹೇಳಿದ್ದ ರಿಂದ ಮತ್ತು ಸೋಮವಾರ ಬೆಳಗ್ಗೆ ಹೊಸ ಪೇಟೆಯಿಂದ ಬೆಂಗಳೂರಿಗೆ ಬರಬೇಕಿದ್ದ ಸಿಎಂ ರವಿವಾರ ರಾತ್ರಿಯೇ ವಾಪಸಾದ್ದರಿಂದ ರಾಜಕೀಯ ವಲಯಗಳಲ್ಲಿ ಗುಸುಗುಸು ಪ್ರಾರಂಭವಾಗಿದೆ.
Related Articles
Advertisement
ಸಚಿವರ ಕಚೇರಿಗಳಲ್ಲಿಯೂ ಸಂಪುಟ ಪುನಾರಚನೆ ವಿಚಾರದ ಚರ್ಚೆ ಹೆಚ್ಚು ಮಹತ್ವ ಪಡೆದುಕೊಂಡಿತ್ತು. ಎಷ್ಟು ಜನ ಸಚಿವರು ಅಧಿಕಾರ ಕಳೆದುಕೊಳ್ಳುತ್ತಾರೆ, ಯಾರನ್ನು ಯಾವ ಕಾರ ಣಕ್ಕೆ ಸಂಪುಟದಿಂದ ಕೈಬಿಡಬಹುದು ಎಂಬ ಲೆಕ್ಕಾಚಾರಗಳು ನಡೆದಿವೆ. ಕೆಲವು ಸಚಿವರು ತಮ್ಮನ್ನು ಎಲ್ಲಿ ಕೈ ಬಿಡುತ್ತಾರೋ ಎಂಬ ಆತಂಕದಲ್ಲಿದ್ದು, “ವಿಸ್ತರಣೆ ಸಾಕು’ ಎಂಬ ವಾದ ಮಂಡಿ ಸುತ್ತಿದ್ದಾರೆ. ಮುಖ್ಯಮಂತ್ರಿ ಬಳಿಯೂ ಈ ಬಗ್ಗೆ ಪ್ರಸ್ತಾವಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಮಲ್ಟಿ ಲೆವೆಲ್ ಮಾರ್ಕೆಟಿಂಗ್:ಇಡಿಯಿಂದ ಆ್ಯಮ್‌ವೇ ಇಂಡಿಯಾಗೆ ಸೇರಿದ 757 ಕೋ. ರೂ ಆಸ್ತಿ ಜಪ್ತಿ
ಯಾವ ಸೂತ್ರ?ಒಂದೊಮ್ಮೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಾದರೆ ಯಾವ ಸೂತ್ರ ಅನುಸರಿಸಲಾಗುವುದು ಎಂಬ ಬಗ್ಗೆ ಆಕಾಂಕ್ಷಿಗಳು ಮತ್ತು ಹಾಲಿ ಸಚಿವರು ತಲೆಕೆಡಿಸಿಕೊಂಡಿದ್ದಾರೆ. ಹಿರಿಯರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಿ ಯುವಕರಿಗೆ ಅವಕಾಶ ಕೊಡಬೇಕು ಎಂಬ ಬೇಡಿಕೆ ಇದ್ದು, ಆ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂಬುದು ಆಕಾಂಕ್ಷಿಗಳ ಬೇಡಿಕೆ. ಆದರೆ ಹಿರಿಯರನ್ನು ಸಂಪುಟದಿಂದ ಕೈ ಬಿಟ್ಟರೆ ಚುನಾವಣೆ ಹತ್ತಿರ ಇರುವಾಗ ಬೇರೆ ರೀತಿಯ ಸಮಸ್ಯೆಗೆ ಕಾರಣವಾಗಬಹುದು. ಹಾಲಿ ಸಚಿವ ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಇದ್ದು, ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಿದರಷ್ಟೇ ಸಾಕೆಂಬ ಮಾತುಗಳೂ ಕೇಳಿಬಂದಿವೆ. ಆಂಧ್ರ ಮಾದರಿ?
ಸಂಪುಟ ಪುನಾರಚನೆಯೇ ಆಗಲಿದ್ದು, ಬಹುತೇಕ ಹೊಸ ಮುಖಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಎಂ ಬೊಮ್ಮಾಯಿ ಹೊರತುಪಡಿಸಿ ಉಳಿದ ಎಲ್ಲ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಕಾಮರಾಜ್ ಸೂತ್ರದಡಿ ಇತ್ತೀಚೆಗೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಅನುಸರಿಸಿದಂತೆ ಸಂಪೂರ್ಣವಾಗಿ ಹೊಸ ಸಚಿವ ಸಂಪುಟ ರಚಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ. ಮುಂದಿನ ವಾರ ದಿಲ್ಲಿಗೆ?
ಮುಖ್ಯಮಂತ್ರಿಗಳು ಎಪ್ರಿಲ್ 23ರ ವರೆಗೆ ಕೈಗೊಳ್ಳುವ ರಾಜ್ಯ ಪ್ರವಾಸದ ಕಾರ್ಯ ಕ್ರಮ ಗಳ ಅಧಿಕೃತ ಪಟ್ಟಿಯನ್ನು ಸಿಎಂ ಕಚೇರಿ ಈಗಾಗಲೇ ಬಿಡುಗಡೆ ಮಾಡಿದೆ. ಎ. 24 ಮತ್ತು ಎ. 25ರಂದು ಸಿಎಂ ಬೆಂಗಳೂರಿನಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಆದರೆ ಪಕ್ಷದ ವರಿಷ್ಠರು ಸೂಚನೆ ನೀಡಿದರೆ ನಿಗದಿತ ಕಾರ್ಯಕ್ರಮ ರದ್ದುಗೊಳಿಸಿ ದಿಲ್ಲಿಗೆ ಹೋಗ ಬೇಕಾಗುತ್ತದೆ ಎನ್ನಲಾಗುತ್ತಿದೆ. ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಹೊಸದಿಲ್ಲಿಯಲ್ಲಿ ವಿಶೇಷ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಸಭೆಯ ಅನಂತರ ದಿಲ್ಲಿಗೆ ಬರುವಂತೆ ಅವರು ತಿಳಿಸಿದ್ದಾರೆ. ಸಂಪುಟ ವಿಸ್ತ ರಣೆ ಅಥವಾ ಪುನಾರಚನೆ ಬಗ್ಗೆ ಅಲ್ಲಿಯೇ ತೀರ್ಮಾನವಾಗಲಿದೆ.
– ಬಸವರಾಜ ಬೊಮ್ಮಾಯಿ, ಸಿಎಂ