Advertisement
ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಸೋಮವಾರ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಕಣಕ್ಕಿಳಿಯದಂತೆ ತಡೆಯಲು ಬಿಜೆಪಿ ನಾಯಕರು, ಚುನಾವಣ ಉಸ್ತುವಾರಿಗಳು ಇನ್ನಿಲ್ಲದ ಕಸರತ್ತು ಮುಂದು ವರಿಸಿದ್ದಾರೆ. ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡ ಕೆಲವರೊಂದಿಗೆ ಯಡಿ ಯೂರಪ್ಪ ಖುದ್ದಾಗಿ ಮಾತುಕತೆ ನಡೆಸಿ ಮನವೊಲಿಸುತ್ತಿದ್ದು, ಕೆಲವೆಡೆ ಫಲ ನೀಡಿದೆ. ಆದರೆ ಮೂರ್‍ನಾಲ್ಕು ಕ್ಷೇತ್ರಗಳಲ್ಲಿ ಸಮಸ್ಯೆ ನಿವಾರಣೆಯಾಗಿಲ್ಲ. ಬಂಡಾಯ ಉಪಶಮನದ ಜತೆಗೆ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರಕ್ಕೂ ಬಿಜೆಪಿ ಸಿದ್ಧತೆ ನಡೆಸಿದ್ದು, ಸೋಮವಾರದಿಂದ ಯಡಿ ಯೂರಪ್ಪ ಆದಿಯಾಗಿ ಹಿರಿಯ ನಾಯಕರು ಪ್ರಚಾರ ಕಣಕ್ಕೆ ಧುಮುಕಲಿದ್ದಾರೆ.
ವಿಜಯಪುರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಸಹಿತ ಹಿರಿಯ ನಾಯಕರು ಮನವೊಲಿಕೆ ನಡೆಸಿದರೂ ಕವಿರಾಜ್ ಮುನಿಸು ಶಮನವಾಗಿಲ್ಲ. ರವಿವಾರ ನಾಮಪತ್ರ ಸಲ್ಲಿಕೆಗೆ ಅವಕಾಶವಿಲ್ಲದ ಕಾರಣ ಮತ್ತೂಂದು ಸುತ್ತಿನ ಮಾತುಕತೆ ಮೂಲಕ ಮನವೊಲಿಕೆಗೆ ಪ್ರಯತ್ನ ಮುಂದುವರಿಸಿದ್ದಾರೆ.
Related Articles
ಗೋಕಾಕ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಶೋಕ್ ಪೂಜಾರಿ ಟಿಕೆಟ್ ಪಡೆಯಲು ಕೊನೆಯ ಹಂತದ ಪ್ರಯತ್ನ ನಡೆಸಿದಂತಿದೆ. ಅವರನ್ನೂ ಮನವೊಲಿಸಿ ವಿಶ್ವಾಸದಲ್ಲಿರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಮನವೊಲಿಕೆಗೆ ಮುಂದುವರಿದ ಯತ್ನ ಹೊಸಕೋಟೆ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿ ಯಾಗಿ ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಸಿರು ವುದು ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ಹೊಸಕೋಟೆ ಚುನಾವಣ ಉಸ್ತುವಾರಿ ಡಿಸಿಎಂ ಡಾ| ಅಶ್ವತ್ಥ ನಾರಾಯಣ ಮಾತುಕತೆ ನಡೆಸಿದ್ದಾರೆ.
Advertisement
2 ಕ್ಷೇತ್ರಗಳಲ್ಲಿ ಬಂಡಾಯ ಉಪಶಮನಯಶವಂತಪುರ ಕ್ಷೇತ್ರದಿಂದ ಎಸ್.ಟಿ. ಸೋಮಶೇಖರ್ ಅವರಿಗೆ ಟಿಕೆಟ್ ನೀಡಿರುವುದರಿಂದ ಬೇಸರಗೊಂಡಿದ್ದ ಜಗ್ಗೇಶ್ ಮತ್ತು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಟಿಕೆಟ್ ಅನ್ನು ಕೆ.ಗೋಪಾಲಯ್ಯ ಅವರಿಗೆ ನೀಡಿರುವುದರಿಂದ ಅಸಮಾಧಾನಗೊಂಡಿದ್ದ ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು ಅವರೊಂದಿಗೆ ಯಡಿಯೂರಪ್ಪ ಅವರೇ ಖುದ್ದಾಗಿ ಮಾತುಕತೆ ನಡೆಸಿದ್ದು, ಬಂಡಾಯ ಉಪಶಮನಗೊಂಡಂತಾಗಿದೆ. ಕ್ರಮಕ್ಕೆ ಹಿಂದೇಟು
ಹಲವೆಡೆ ಪಕ್ಷದ ಮುಖಂಡರು, ಪರಾಜಿತ ಅಭ್ಯರ್ಥಿಗಳು, ಮಾಜಿ ಶಾಸಕರು ಬಂಡಾಯವೆದ್ದಿದ್ದರೂ ಬಿಜೆಪಿ ಶಿಸ್ತು ಕ್ರಮ ಜರುಗಿಸಲು ಸದ್ಯಕ್ಕೆ ಮುಂದಾಗಿಲ್ಲ. ಪ್ರತಿ ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿ ಗೆಲ್ಲುವುದು ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕ್ಕಿಂತ ಮನವೊಲಿಕೆಗೆ ರಾಜ್ಯ ನಾಯಕರು ಒತ್ತು ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ಅನಂತರ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿಜೆಪಿ ಸಮನ್ವಯ ಸಭೆ
ಒಂದೆಡೆ ಯಡಿಯೂರಪ್ಪ ಬಂಡಾಯ ವೆದ್ದಿರುವ ನಾಯಕರು, ಮುಖಂಡರ ಮನ ವೊಲಿಸುತ್ತಿದ್ದರೆ, ಮತ್ತೂಂದೆಡೆ ಸಂಘಟನ ಪ್ರಮುಖರು, ಹಿರಿಯ ನಾಯಕರು ಅನರ್ಹ ಶಾಸಕರ ಬೆಂಬಲಿಗರು ಮತ್ತು ಪಕ್ಷದ ಕಾರ್ಯ ಕರ್ತರ ನಡುವೆ ಸಮನ್ವಯ ಸಾಧಿಸುವ ಪ್ರಯತ್ನ ನಡೆಸಿದ್ದಾರೆ. ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಶುಕ್ರವಾರ, ಶನಿವಾರ ಪಕ್ಷದ ಕಾರ್ಯಕರ್ತರು, ಅನರ್ಹ ಶಾಸಕರ ಬೆಂಬಲಿಗರ ಸಭೆ ನಡೆಸಿ ಒಟ್ಟುಗೂಡಿಸುವ ಕಾರ್ಯ ನಡೆದಿದೆ. ರವಿವಾರವೂ ಕೆಲವು ಕ್ಷೇತ್ರಗಳಲ್ಲಿ ಸಭೆ ನಡೆಸಿ ಸಂಘಟಿಸಲಾಗುವುದು. ಆ ಮೂಲಕ ಸೋಮವಾರದಿಂದ ಉಪ ಚುನಾ ವಣೆ ನಡೆಯಲಿರುವ ಎಲ್ಲ 15 ಕ್ಷೇತ್ರ ಗಳಲ್ಲೂ ಪಕ್ಷದ ಕಾರ್ಯಕರ್ತರು, ಅನರ್ಹ ಶಾಸಕರ ಬೆಂಬಲಿಗರು ಒಟ್ಟಾಗಿ ಪ್ರಚಾರಕ್ಕಿಳಿಯಲು ವೇದಿಕೆ ಸಜ್ಜುಗೊಳಿಸಿ ದಂತಾಗುತ್ತದೆ. ಸರಕಾರ ವನ್ನು ಸುಭದ್ರ ವಾಗಿಸುವ ನಿಟ್ಟಿನಲ್ಲಿ ಸಂಘ ಟನೆಯು ಸಂಪೂರ್ಣ ತೊಡಗಿಸಿ ಕೊಂಡಿದ್ದು, ಬಂಡಾಯವನ್ನು ಬಹುತೇಕ ಉಪ ಶಮನ ಗೊಳಿಸುವ ವಿಶ್ವಾಸವಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೊಬ್ಬರು ತಿಳಿಸಿದರು.