Advertisement

2019ರ ಮಹಾ ಚುನಾವಣೆಗೆ ಬಿಜೆಪಿಗೆ ಮಹಿಳಾ ಶಕ್ತಿಯೇ ಆಧಾರ

03:57 PM Mar 09, 2018 | udayavani editorial |

ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಎರಡನೇ ಬಾರಿ ಅಧಿಕಾರದ ಗದ್ದುಗೆ ಏರಲು ಸಕಲ ರೀತಿಯ ಪ್ರಯತ್ನ ನಡೆಸಲಿರುವ ಭಾರತೀಯ ಜನತಾ ಪಕ್ಷ  ಮಹಿಳಾ ಶಕ್ತಿಯನ್ನು ಬಹುವಾಗಿ ಆಧರಿಸುವುದಕ್ಕೆ  ಕಾರ್ಯತಂತ್ರ ರೂಪಿಸಿದೆ. 

Advertisement

ಅಂತೆಯೇ ಬಿಜೆಪಿ ಈಗ ರಾಷ್ಟ್ರಾದ್ಯಂತದ ಮಹಿಳಾ ಮತದಾರರನ್ನು ಓಲೈಸಲು ಅವರನ್ನು ಖುದ್ದಾಗಿ ಭೇಟಿಯಾಗುವ ಯೋಜನೆ ರೂಪಿಸಿದೆ. ಈ ಯೋಜನೆ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮಹಿಳೆಯರೊಂದಿಗೆ ಸಂವಾದ, ಸಂವಹನ ನಡೆಸಿ ಅವರ ಮನಸ್ಸನ್ನು ಅರಿಯುವ ಪ್ರಯತ್ನ ಮಾಡಲಿದ್ದಾರೆ.

ಇದೇ ಮಾರ್ಚ್‌ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರವಾಗಿರುವ ವಾರಾಣಸಿಗೆ ಭೇಟಿ ನೀಡಲಿದ್ದು ಅಲ್ಲಿಂದಲೇ ಮಹಿಳಾ ಸಂಪರ್ಕ, ಸಂವಹನ, ಸಂವಾದ ಯೋಜನೆಯನ್ನು ಆರಂಭಿಸಲಿದ್ದಾರೆ.

ಮಾರ್ಚ್‌ 9ರಿಂದ 12ರ ತನಕ ಭಾರತಕ್ಕೆ ಭೇಟಿ ನೀಡಲಿರುವ ಫ್ರೆಂಚ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್‌ ಅವರೊಂದಿಗೆ ಪ್ರಧಾನಿ ಮೋದಿ ಅವರು ವಾರಾಣಸಿ ಕ್ಷೇತ್ರಕ್ಕೆ ಭೇಟಿ ನೀಡುವರು. 

ಆ ಸಂದರ್ಭದಲ್ಲಿ ಕ್ಷೇತ್ರದ ಮಹಿಳೆಯರನ್ನು ಭೇಟಿಯಾಗಿ ತಾನು ಅಧಿಕಾರಕ್ಕೆ ಬಂದ ಬಳಿಕದಲ್ಲಿ ಅವರ ಅಭ್ಯುದಯಕ್ಕಾಗಿ ಕೈಗೊಳ್ಳಲಾದ ಕಾರ್ಯಕ್ರಮಗಳ ಬಗ್ಗೆ ಅವರಲ್ಲಿ ಯಾವ ಅಭಿಪ್ರಾಯವಿದೆ ಎಂಬುದನ್ನು ಅರಿಯಲು ಪ್ರಧಾನಿ ಮೋದಿ ಸಂವಾದ, ಸಂಪರ್ಕ ಕಾರ್ಯಕ್ರಮ ನಡೆಸುವರು. 

Advertisement

ನೇಕಾರರು, ವಿದ್ಯಾರ್ಥಿನಿಯರು, ಸಣ್ಣ ಉದ್ಯಮ ನಡೆಸುವವರು ಮುಂತಾಗಿ ಸಹಸ್ರಾರು ಮಹಿಳೆಯರನ್ನು ಮೋದಿ ಅವರು ವಾರಾಣಸಿಯ ದಿರೇಕಾ ಮೈದಾನದಲ್ಲಿ ಭೇಟಿಯಾಗಿ ಸಂವಾದ ನಡೆಸುವರು. 

ಮೋದಿ ತಮ್ಮ ಊರಿಗೆ ಭೇಟಿ ನೀಡಲಿದ್ದಾರೆಂಬ ವಿಷಯ ತಿಳಿದಾಕ್ಷಣವೇ ರೋಮಾಂಚಿತರೂ ಕುತೂಹಲಿಗಳೂ ಆಗಿರುವ ಅಸಂಖ್ಯಾತ ಮಹಿಳೆಯರು ಪ್ರಧಾನಿ ಮುಂದೆ ತಮ್ಮ ದೂರು, ದುಮ್ಮಾನ, ಸಮಸ್ಯೆ, ಆವಶ್ಯಕತೆ ಇತ್ಯಾದಿಗಳನ್ನು ಸಾದರಪಡಿಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next