Advertisement

ಜೆಡಿಎಸ್‌ ಕೋಟೆಯಲ್ಲಿ”ಕಮಲ ಕಂಪು’

06:55 AM Mar 23, 2019 | Team Udayavani |

ಕ್ಷೇತ್ರದ ವಸ್ತುಸ್ಥಿತಿ: ಮಹಾಲಕ್ಷ್ಮೀ ವಿಧಾನ ಸಭಾ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ. ಒಕ್ಕಲಿಗ ಸಮುದಾಯ ಹೆಚ್ಚಿರುವ ಕ್ಷೇತ್ರದ ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಸತತ 2 ಬಾರಿ ಜೆಡಿಎಸ್‌ ಬೆಂಬಲಿಸಿದ್ದಾರೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯತ್ತ ಒಲವು ತೋರಿರುವುದನ್ನು ಅಂಕಿ-ಅಂಶಗಳು ಹೇಳುತ್ತಿವೆ.

Advertisement

2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇ.57.1ರಷ್ಟು ಮತದಾತರು ಹಾಲಿ ಸಂಸಸದ ಸದಾನಂದಗೌಡ ಪರ ಒಲವು ತೋರಿದ್ದರು. ಆಗ ಚಲಾವಣೆಯಾಗಿದ್ದ 2,79,265 ಮತಗಳ ಪೈಕಿ 85,973 ಮತಗಳು ಬಿಜೆಪಿ ಪಾಲಾಗಿದ್ದವು. ಕಾಂಗ್ರೆಸ್‌ನ ಸಿ.ನಾರಾಯಣಸ್ವಾಮಿ 40,139 ಮತ, ಜೆಡಿಎಸ್‌ನ ಅಬ್ದುಲ್‌ ಅಜೀಂ 20,340 ಮತಗಳನ್ನು ಪಡೆದಿದ್ದರು.

ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸದಾನಂದಗೌಡರ ವಿರುದ್ಧ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಣಕ್ಕಿಳಿಯುವ ಸಾಧ್ಯತೆಯಿದ್ದು, ಕದನ ಕಣ ಕೌತುಕ ಹುಟ್ಟು ಹಾಕಿದೆ. ಇನ್ನು ಪಾಲಿಕೆ ವಿಚಾರಕ್ಕೆ ಬಂದಾಗ ಏಳು ವಾರ್ಡ್‌ಗಳ ಪೈಕಿ 4ರಲ್ಲಿ ಜೆಡಿಎಸ್‌ ಪ್ರಾಬಲ್ಯ ಮೆರೆದಿದೆ.ಕಾಂಗ್ರೆಸ್‌ ಪಕ್ಷ 2 ಮತ್ತು ಬಿಜೆಪಿ 1 ಸ್ಥಾನ ಪಡೆದಿವೆ.ಒಕ್ಕಲಿಗ, ಹಿಂದುಳಿದ ವರ್ಗ ಮತ್ತು ಲಿಂಗಾಯಿತ ಮತಗಳು ಈ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.  

ಸಂಸದರಿಂದ ಬಂದ ಪ್ರಮುಖ ಕೊಡುಗೆಗಳು 
-ನಂದಿನಿ ಲೇಔಟ್‌ನ ಕಂಠೀರವ ನಗರದಲ್ಲಿ ಬಸ್‌ ತಂಗುದಾಣ ನಿರ್ಮಾಣ 
-ಉದ್ಯೋಗ ಮೇಳ ಹಮ್ಮಿಕೊಂಡು ಯುವ ಸಮುದಾಯಕ್ಕೆ ಉದ್ಯೋಗ

ನಿರೀಕ್ಷೆಗಳು 
-ರಸ್ತೆ ಅಭಿವೃದ್ಧಿಗೆ ಮತ್ತಷ್ಟು ಅನುದಾನ

Advertisement

-ವಾರ್ಡ್‌ಗಳು- 7 
-ಬಿಜೆಪಿ -1 
-ಕಾಂಗ್ರೆಸ್‌ – 2 
-ಜೆಡಿಎಸ್‌ -4  

-ಜನಸಂಖ್ಯೆ -4,58,047 
-ಮತದಾರರ ಸಂಖ್ಯೆ -2,79,265 
-ಪುರುಷರು -1,44,219 
-ಮಹಿಳೆಯರು-1,35,046 

2014ರ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು- 1,50,605 (57.1%)
-ಬಿಜೆಪಿ ಪಡೆದ ಮತಗಳು -85,973 (57.1%) 
ಕಾಂಗ್ರೆಸ್‌ ಪಡೆದ ಮತಗಳು – 40,139 (26.7%) 
–ಜೆಡಿಎಸ್‌ ಪಡೆದ ಮತಗಳು – 20,340 (13.5%) 

2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಗೋಪಾಲಯ್ಯ ಜೆಡಿಎಸ್‌ ಶಾಸಕ  
-ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು-1 
-ಕಾಂಗ್ರೆಸ್‌ ಸದಸ್ಯರು-3 
-ಜೆಡಿಎಸ್‌-3  

ಮಾಹಿತಿ: ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next