Advertisement

ಮುಂಬಯಿ: ಬಿಜೆಪಿ 14 ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟ

09:59 AM Oct 04, 2019 | Sriram |

ಮುಂಬಯಿ: ಮೈತ್ರಿಯಲ್ಲಿ ಶಿವಸೇನೆಗೆ 124 ಹಾಗೂ 164 ಸೀಟನ್ನು ಹಂಚಿಕೊಂಡ ಬಿಜೆಪಿಯು ರಾಜ್ಯ ವಿಧಾನಸಭಾ ಚುನಾವಣೆಗೆ 14ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದೆ.

Advertisement

ಈ ಪಟ್ಟಿಯಲೂ ಬಿಜೆಪಿಯ ಹಿರಿಯ ಮುಖಂಡರಾದ ಏಕನಾಥ್‌ ಖಡ್ಸೆ, ಶಿಕ್ಷಣ ಸಚಿವ ವಿನೋದ್‌ ತಾಬ್ಡೆ ಮತ್ತು ಚಂದ್ರಶೇಖರ್‌ ಭಾವಂಕುಲೆ ಅವರನ್ನು ಹೊರಗಿಡಲಾಗಿದೆ. ಈ ನಾಯಕರನ್ನು ಮೊದಲೆರಡು ಪಟ್ಟಿಯಿಂದ ಹೊರಗಿಟ್ಟಿರುವ ಬಗ್ಗೆ ಪಕ್ಷದಲ್ಲಿ ಬಲವಾದ ಚರ್ಚೆ ನಡೆಯುತ್ತಿದೆ.

ಬಹುಜನ ವಂಚಿತ ಆಘಾಡಿಯಿಂದ ಬಿಜೆಪಿಗೆ ಸೇರಿದ ಗೋಪಿಚಂದ್‌ ಪಡಲ್ಕರ್‌ ಅವರನ್ನು ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ವಿರುದ್ಧ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ. ಮತ್ತೂಂದೆಡೆ, ಟಿಕೆಟ್‌ ಘೋಷಣೆಯ ನಂತರ ಎನ್‌ಸಿಪಿಯಿಂದ ಹೊರ ನಡೆದು ಬಿಜೆಪಿಗೆ ಸೇರಿದ ನಮಿತಾ ಮುಂದಢಾ ಅವರಿಗೆ ಬಿಜೆಪಿಯು ಕೇಜ್‌ ಕ್ಷೇತ್ರದ ಟಿಕೆಟು ನೀಡಿದೆ.

ಮೈತ್ರಿ ಘೋಷಣೆಯ ನಂತರ ಮೊದಲ ಪಟ್ಟಿಯನ್ನು ಬಿಜೆಪಿ ಘೋಷಿಸಿತು. ಬಿಜೆಪಿಯ ಮೊದಲ ಪಟ್ಟಿಯಲ್ಲಿ 125 ಅಭ್ಯರ್ಥಿಗಳ ಘೋಷಣೆ ಮಾಡಿತ್ತು. ಪುಣೆಯ ಕೊಥ್ರೂಡ್‌ ಕ್ಷೇತ್ರದಿಂದ ಬಿಜೆಪಿ ರಾಜ್ಯ ಅಧ್ಯಕ್ಷ ಚಂದ್ರಕಾಂತ್‌ ದಾದಾ ಪಾಟೀಲ…, ಕಾಸ್ಬಾ ಪೇಟ್‌ನಿಂದ ಮುಕ್ತಾ ತಿಲಕ್‌, ಕರಾಡ್‌ ದಕ್ಷಿಣದ ಅತುಲ್‌ , ಸತಾರಾ ಕ್ಷೇತ್ರದ ಶಿವೇಂದ್ರ ರಾಜೇ ಭೋಸ್ಲೆ ಅವರ ಹೆಸರನ ಪಟ್ಟಿ ಪ್ರಕಟಿಸಿತ್ತು. ಆದರೆ ಮೊದಲ ಪಟ್ಟಿಯಲ್ಲಿ ಬಿಜೆಪಿಯು ಹಿರಿಯ ನಾಯಕ ಏಕನಾಥ್‌ ಖಡ್ಸೆ, ಶಿಕ್ಷಣ ಸಚಿವ ವಿನೋದ್‌ ತಾಬ್ಡೆ ಮತ್ತು ಚಂದ್ರಶೇಖರ್‌ ಭಾವಂಕುಲೆ, ಮುಲುಂಡ್‌ ಶಾಸಕ ಸರ್ದಾರ ತಾರಾ ಸಿಂಗ್‌ ಅವರ ಹೆಸರು ಪ್ರಕಟಿಸಲಿಲ್ಲ. ಬಿಜೆಪಿಯ ಮೊದಲ ಮತ್ತು ಎರಡನೆಯ ಪಟ್ಟಿಯನ್ನು ಘೋಷಿಸಿದ ನಂತರ, ಬಿಜೆಪಿಯ ಮೂರನೇ ಮತ್ತು ಅಂತಿಮ ಪಟ್ಟಿಯಲ್ಲಿ ಖಡ್ಸೆ, ತಾಬ್ಡೆ ಮತ್ತು ಬಾವಂಕುಲೆ ಅವರ ಹೆಸರುಗಳು ಸೇರಿವೆಯೋ ಅಥವಾ ಅವರನ್ನು ಮತ್ತೆ ಹೊರಗಿಡಲಿದೆಯೋ ನೋಡಬೇಕಾಗಿದೆ. ಏಕನಾಥ್‌ ಖಡ್ಸೆ ಅವರಿಗೆ ಬಿಜೆಪಿಯ ಎರಡೂ ಪಟ್ಟಿಯಲ್ಲಿ ಹೆಸರು ಪ್ರಕಟಿಸದಿದ್ದರೂ, ಅವರು ಈಗಾಗಲೇ ಸ್ವತಂತ್ರರಾಗಿ ತಮ್ಮ ಅರ್ಜಿಯನ್ನು ಸಲ್ಲಿಸಿದ್ದಾರೆ.

ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಸಕ್ರಿ ವಿಧಾನಸಭಾ ಕ್ಷೇತ್ರದಿಂದ ಮೋಹನ್‌ ಸೂರ್ಯವಂಶಿ, ಧಮನ್‌ಗಾಂವ್‌ ರೈಲ್ವೆ ವಿಧಾನಸಭಾ ಕ್ಷೇತ್ರದಿಂದ ಪ್ರತಾಪ್‌ ದಾದಾ ಅಡಾÕಢ್‌, ಮೆಲಾ^ಟ್‌ ವಿಧಾನಸಭಾ ಕ್ಷೇತ್ರದಿಂದ ರಮೇಶ್‌ ಮಾವಸ್ಕರ್‌, ಗೊಂಡಿಯಾ ವಿಧಾನಸಭಾ ಕ್ಷೇತ್ರದಿಂದ ಗೋಪಾಲ್‌ದಾಸ್‌ ಅಗರ್‌ವಾಲ್‌, ಅಹೆರಿ ವಿಧಾನಸಭಾ ಕ್ಷೇತ್ರದಿಂದ ಅಮರಿಶ್‌ ರಾಜೇ ಆತ್ರಾಮ್‌, ಪುಸಾದ್‌ ವಿಧಾನಸಭಾ ಕ್ಷೇತ್ರದಿಂದ ನೀಲಯ ನಾೖಕ್‌, ಉಮರ್‌ಖೇಡ್‌ ವಿಧಾನಸಭಾ ಕ್ಷೇತ್ರದಿಂದ ನಾಮದೇವ್‌ ಸಸಾಣೆ, ಬಾಗಲಾನ್‌ ವಿಧಾನಸಭಾ ಕ್ಷೇತ್ರದಿಂದ ದಿಲೀಪ್‌ ಬೋರೇಸ್‌, ಉಲ್ಲಾಸ್‌ನಗರ ವಿಧಾನಸಭಾ ಕ್ಷೇತ್ರದಿಂದ ಕುಮಾರ್‌ ಆಯಲಾನಿ, ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಗೋಪಿಚಂದ್‌ ಪಡಲ್ಕರ್‌, ಮಾವಳ್‌ ವಿಧಾನಸಭಾ ಕ್ಷೇತ್ರದಿಂದ ಸಂಜಯ್‌ ಭೆಗಡ್‌, ಕೇಜ್‌ ವಿಧಾನಸಭಾ ಕ್ಷೇತ್ರದಿಂದ ನಮಿತಾ ಮುಂದಢಾ, ಲಾತೂರ್‌ ನಗರ ವಿಧಾನಸಭಾ ಕ್ಷೇತ್ರದಿಂದ ಶೈಲೇಶ್‌ ಲಾಹೋಟಿ, ಉದ್ಗೀರಿ ವಿಧಾನಸಭಾ ಕ್ಷೇತ್ರದಿಂದ ಡಾ|ಅನಿಲ್‌ ಕಾಂಬ್ಳೆ ಅವರಿಗೆ ಟಿಕೆಟು ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next