Advertisement
ಉಭಯ ಪಕ್ಷಗಳು ಕೇಸರಿ ಪಕ್ಷಗಳು ತಮ್ಮ ಸಂಬಂಧಗಳ ನಡುವೆ ಸೃಷ್ಟಿಯಾಗಿದ್ದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಚುನಾವಣ ಪೂರ್ವ ಮೈತ್ರಿ ಮಾಡಿಕೊಳ್ಳಲು ನಿರ್ಣಯಿಸಿದವು ಎಂದವರು ತಿಳಿಸಿದ್ದಾರೆ.
Related Articles
Advertisement
ಲೋಕಸಭಾ ಚುನಾವಣೆಗೆ ಮುಂಚಿತ ವಾಗಿ ವಿಪಕ್ಷಗಳು ಹೇಗೆ ಒಟ್ಟಿಗೆ ಸೇರಿವೆಯೋ, ಅದೇ ರೀತಿಯಲ್ಲಿ ಅವು ತುರ್ತು ಪರಿಸ್ಥಿತಿಯ ಬಳಿಕ ಒಟ್ಟಿಗೆ ಸೇರಿ ಜನತಾ ಸರಕಾರ ವನ್ನು ರಚಿಸಿದ್ದವು. ಆದರೆ, ಅದು ಕೇವಲ 22 ತಿಂಗಳ ಕಾಲ ಅಧಿಕಾರ ನಡೆಸಿತು ಎಂದು ಉದ್ಧವ್ ನುಡಿದಿದ್ದಾರೆ.
ಯಾವುದೇ ಮುಖವಿಲ್ಲವಾಸ್ತವವಾಗಿ, ತುರ್ತು ಪರಿಸ್ಥಿತಿಯ ಸಂದರ್ಭ ಸರಕಾರದ ವಿರುದ್ಧ ಜನರಲ್ಲಿ ಅಪಾರ ಆಕ್ರೋಶವಿತ್ತು. ಈ ಹಿಂದೆ ವಿಪಕ್ಷಗಳು ಒಟ್ಟಿಗೆ ಸೇರಿದ್ದಾಗ ಅವು ಜಯಪ್ರಕಾಶ್ ನಾರಾಯಣ್ ಅವರ ನಾಯಕತ್ವವನ್ನು ಹೊಂದಿದ್ದವು. ಆದರೆ, ಇಂದು ಈ ದೇಶದಲ್ಲಿ ವಿಪಕ್ಷಗಳನ್ನು ಒಗ್ಗೂಡಿಸಲು ಯಾವುದೇ ಮುಖವಿಲ್ಲ. ಒಂದೊಮ್ಮೆ ವಿಪಕ್ಷ ಅಧಿಕಾರಕ್ಕೆ ಬಂದರೆ, ಪ್ರಧಾನಮಂತ್ರಿ ಹು¨ªೆಗೆ ಅವರ ನಡುವೆ ಜಗಳ ನಡೆಯಲಿದೆ ಎಂದು ಉದ್ಧವ್ ಹೇಳಿದ್ದಾರೆ. ನಾವು (ಶಿವಸೇನೆ ಮತ್ತು ಬಿಜೆಪಿ) ಹಿಂದುತ್ವದ ಸಿದ್ಧಾಂತವನ್ನು ಹೊಂದಿದ್ದೇವೆ. ಹಿಂದುತ್ವದ ಮೂಲ ಅರ್ಥ ರಾಷ್ಟ್ರೀಯತೆ ಆಗಿದೆ ಎಂದು ಠಾಕ್ರೆ ನುಡಿದಿದ್ದಾರೆ. ಸ್ವಾಭಾವಿಕ ಪ್ರಕ್ರಿಯೆ
ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಉದ್ಧವ್ ಠಾಕ್ರೆ ಅವರು, ಬದಲಾವಣೆಯು ಒಂದು ಸ್ವಾಭಾವಿಕ ಪ್ರಕ್ರಿಯೆ ಆಗಿದೆ ನಿವೃತ್ತಿಯ ಅನಂತರ ಒಬ್ಬರನ್ನು ಮರೆತುಬಿಡುವುದು ಇದರರ್ಥವಲ್ಲ. ನಾವು ಅವರಿಗೆ ಶಾಶ್ವತವಾಗಿ ಕೃತಜ್ಞರಾಗಿರಬೇಕು. ಯಾಕೆಂದರೆ, ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್, ಅಟಲ್‌ಜೀ, ಅಡ್ವಾಣಿಯವರು ಅತ್ಯಂತ ಕಷ್ಟಕರ ಪರಿಸರದಲ್ಲಿ ಬೀಜಗಳನ್ನು ಬಿತ್ತಿ¨ªಾರೆ. ಹಿಂದುತ್ವವನ್ನು ಹರಡಿಸಲು ಅವರು ತಮ್ಮ ಜೀವವನ್ನು ಅಪಾಯಕ್ಕೆ ತಳ್ಳಿದ್ದರು ಎಂದು ತಿಳಿಸಿದ್ದಾರೆ. ಬಿಜೆಪಿಯೊಂದಿಗೆ ಮೈತ್ರಿಯ ಬಳಿಕ ನೀವು ಕೂಡ ಚೌಕಿದಾರ ಆಗುತ್ತೀರೋ ಎಂಬ ಪ್ರಶ್ನೆಗೆ ಉದ್ಧವ್, ನಾನು ಕೇವಲ ಒಬ್ಬ ಸಾಮಾನ್ಯ ವ್ಯಕ್ತಿ ಎಂದು ನುಡಿದಿ ದ್ದಾರೆ. ನಾನು ಓರ್ವ ಶಿವಸೈನಿಕ. ನನ್ನನ್ನು ಪ್ರತ್ಯೇಕವಾಗಿ ಚೌಕಿದಾರ ಎಂದು ಕರೆಯಬೇಕಾಗಿಲ್ಲ ಎಂದರು. ವೈಯಕ್ತಿಕ ವೈರತ್ವ ಹೊಂದಿಲ್ಲ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿಯವರ ನಾಯಕತ್ವದ ಕುರಿತ ಪ್ರಶ್ನೆಗೆ ಉತ್ತರಿಸುತ್ತ ಉದ್ಧವ್, ನಾನು ಯಾರ ವಿರುದ್ಧವೂ ವೈಯಕ್ತಿಕ ವೈರತ್ವ ಹೊಂದಿಲ್ಲ ಎಂದು ತಿಳಿಸಿದ್ದಾರೆ. ಅವರು ನನಗಿಂತ ಚಿಕ್ಕವರಾಗಿರುವುದರಿಂದ, ನಾನು ಅವರನ್ನು ಮಕ್ಕಳು ಎಂಬ ದೃಷ್ಟಿಯಿಂದ ನೋಡುತ್ತೇನೆ. ಈ ಇಬ್ಬರೂ ಮಕ್ಕಳು ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಥಿರತೆ ಕಂಡುಕೊಳ್ಳಲು ಪ್ರಯತ್ನಿಸುತ್ತಿ¨ªಾರೆ. ಅವರ ಯಶಸ್ಸು ಮತ್ತು ವೈಫಲ್ಯದ ಬಗ್ಗೆ ನಮಗೆ ಅನಂತರ ತಿಳಿಯಲಿದೆ. ಆದಾಗ್ಯೂ, ಅವರ (ರಾಹುಲ್ ಗಾಂಧಿ ಅವರ) ನಾಯಕತ್ವದಲ್ಲಿ ನನಗೆ ನಿರ್ದಿಷ್ಟ ಆಕಾರ ಕಾಣುತ್ತಿಲ್ಲ ಎಂದು ಉದ್ಧವ್ ಹೇಳಿದ್ದಾರೆ. ಹಿಂದುತ್ವ ಒಟ್ಟಿಗೆ ಸೇರಿಸುವ ದಾರವಾಗಿದೆ
ಮತ್ತೂಮ್ಮೆ ಮೈತ್ರಿ ಮಾಡಿಕೊಳ್ಳಲು ನಾವು ಒಪ್ಪಿಕೊಂಡಿರು ವುದು ಯಾಕೆ ಎಂದು ನೀವು ನನ್ನನ್ನು ಕೇಳುತ್ತಿರುವಿರಿ. ಇಡೀ ವಿಶ್ವವು ಸಾಕ್ಷಿಯಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೇವಲ ಒಮ್ಮೆ ನನ್ನ ಬಳಿಗೆ ಬಂದಿಲ್ಲ, ಆದರೆ ಎರಡು ಬಾರಿಗೆ ನನ್ನ ಬಳಿಗೆ ಬಂದಿದ್ದಾರೆ. ಮೈತ್ರಿಕೂಟವನ್ನು ರೂಪಿಸುವ ಸಂದರ್ಭದಲ್ಲಿ ನಾವು ಜನರ ಸಮಸ್ಯೆಗಳನ್ನು ಅವರ ಮುಂದಿರಿಸಿದ್ದೆವು. ಇದೆಲ್ಲ ನಡೆಯುವಾಗ ಮುಖ್ಯಮಂತ್ರಿ ಕೂಡ ಅಲ್ಲಿ ಉಪಸ್ಥಿತರಿದ್ದರು ಎಂದು ಠಾಕ್ರೆ ನುಡಿದಿದ್ದಾರೆ. ಶಾ ಎರಡೂ ಪಕ್ಷಗಳ ನಡುವಿನ ಕಹಿಯನ್ನು ಅಂತ್ಯಗೊಳಿಸಲು ಬಯಸಿದ್ದರು. ಬಿಜೆಪಿ ಅಧ್ಯಕ್ಷರ ಅಭಿಪ್ರಾಯ ನನಗೂ ಸರಿ ಅನಿಸಿತು ಎಂದು ಉದ್ಧವ್ ತಿಳಿಸಿದ್ದಾರೆ. ಇನ್ನೊಂದು ಪ್ರಶ್ನೆಗೆ ಠಾಕ್ರೆ ಅವರು, ಚರ್ಚೆಗಳ ಸಂದರ್ಭದಲ್ಲಿ ಎರಡು ಕೇಸರಿ ಪಕ್ಷಗಳ ನಡುವೆ ಸೃಷ್ಟಿಯಾಗಿದ್ದ ಕಹಿಗಳನ್ನು ಬಗೆಹರಿಸಲಾಗಿದೆ ಎಂದಿದ್ದಾರೆ. ಮೊದಲಿನಂತೆ ಹಿಂದುತ್ವ ಬಿಜೆಪಿ ಮತ್ತು ಶಿವಸೇನೆಯನ್ನು ಒಟ್ಟಿಗೆ ಸೇರಿಸುವ ದಾರವಾಗಿದೆ ಎಂದವರು ಸಮರ್ಥಿಸಿಕೊಂಡಿದ್ದಾರೆ. ದೇಶದಲ್ಲಿ ವಿಪಕ್ಷ ಆವಶ್ಯಕ
ಕಾಂಗ್ರೆಸ್ ಮುಕ್ತ ಭಾರತ ಒಂದೇ ಎಲ್ಲ ಸಮಸ್ಯೆಗಳಿಗೆ ಪರಿಹಾರವೇ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಮುಕ್ತ ಭಾರತದ ವಿಷಯವನ್ನು ಶಿವಸೇನೆ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ, ದೇಶದಲ್ಲಿ ವಿಪಕ್ಷವು ಅಸ್ತಿತ್ವದಲ್ಲಿರುವುದು ಆವಶ್ಯಕವಾಗಿದೆ ಎಂದು ನುಡಿದಿದ್ದಾರೆ. ದೇಶದಲ್ಲಿ ಮುಖ್ಯಮಂತ್ರಿಗೆ ಎಷ್ಟು ಜವಾಬ್ದಾರಿಗಳಿವೆಯೋ, ಅದಕ್ಕಿಂತ ಹೆಚ್ಚು ಜವಾಬ್ದಾರಿ ವಿಪಕ್ಷದ ಬಳಿ ಇರುತ್ತದೆ ಎಂದು ದಿವಂಗತ ಬಾಳಾ ಸಾಹೇಬ್ ಠಾಕ್ರೆ ಅವರು ನನಗೆ ಯಾವಾಗಲೂ ಹೇಳುತ್ತಿದ್ದರು ಎಂದು ಉದ್ಧವ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಜನತೆಗೆ ನ್ಯಾಯ ದೊರಕಿಸುವುದು ವಿಪಕ್ಷದ ಮುಖ್ಯ ಜವಾಬ್ದಾರಿಯಾಗಿದೆ ಎಂದವರು ಹೇಳಿದ್ದಾರೆ.