Advertisement

ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಮತ್ತು ಶಿವಸೇನೆ ಮೈತ್ರಿ? ಠಾಕ್ರೆ ಬಣದ ಷರತ್ತುಗಳೇನು?

08:10 AM Jul 06, 2021 | Team Udayavani |

ನವದೆಹಲಿ/ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮತ್ತೂಮ್ಮೆ ಮೈತ್ರಿ ಮಾಡಿಕೊಳ್ಳುವ ವದಂತಿಗಳ ನಡುವೆಯೇ ಹೊಸ ಮಾಹಿತಿಯೊಂದು ಸೋಮವಾರ ಬಹಿರಂಗವಾಗಿದೆ.

Advertisement

ಸದ್ಯ ಮಹಾರಾಷ್ಟ್ರದಲ್ಲಿ ಪ್ರತಿಪಕ್ಷ ನಾಯಕ, ಮಾಜಿ ಸಿಎಂ ದೇವೇಂದ್ರ ಫ‌ಡ್ನವಿಸ್‌ ಅವರನ್ನು ಕೇಂದ್ರ ಸಂಪುಟಕ್ಕೆ ಸಚಿವರನ್ನಾಗಿ ಮಾಡಬೇಕು. ಶಿವಸೇನೆ ಬಳಿಯೇ ಮುಖ್ಯಮಂತ್ರಿ ಹುದ್ದೆ ಇರಬೇಕು ಎಂಬ ಷರತ್ತನ್ನು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬಿಜೆಪಿ ವರಿಷ್ಠರಿಗೆ ಹಾಕಿದ್ದರು. ಶೀಘ್ರದಲ್ಲಿಯೇ ಕೇಂದ್ರ ಸಚಿವ ಸಂಪುಟ ಪುನಾರಚನೆ ನಡೆಯಲಿದೆ ಎಂಬ ಚರ್ಚೆಗಳ ನಡುವೆಯೇ ಇಂಥ ಬೆಳವಣಿಗೆ ನಡೆದಿದೆ.

 ಇದನ್ನೂ ಓದಿ:ಮುಂದಿನ ತಿಂಗಳಲ್ಲೇ ಕೋವಿಡ್ 3ನೇ ಅಲೆ : ಸೆಪ್ಟಂಬರ್‌ ನಲ್ಲಿ ಉತ್ತುಂಗಕ್ಕೆ : ವರದಿ

ಒಂದು ವೇಳೆ, ದೇವೇಂದ್ರ ಫ‌ಡ್ನವಿಸ್‌ ಕೇಂದ್ರ ಸಂಪುಟಕ್ಕೆ ಸೇರ್ಪಡೆ ಗೊಂಡರೆ, ಬಿಜೆಪಿಗೆ ಎರಡು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ನೀಡಲಾಗುತ್ತದೆ ಎಂದೂ ಸಿಎಂ ಉದ್ಧವ್‌ ಬಿಜೆಪಿ ವರಿಷ್ಠರಿಗೆ ಮನವರಿಕೆ ಮಾಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖೀಸಿ “ಎನ್‌ ಡಿಟಿವಿ’ ವರದಿ ಮಾಡಿದೆ. ಆದರೆ, ಬಿಜೆಪಿ ಈ ಅಂಶಗಳನ್ನೆಲ್ಲ ನಿರಾಕರಿಸಿದೆ. ಜತೆಗೆ ಫ‌ಡ್ನವಿಸ್‌ ಕಾರಣಕ್ಕಾಗಿ ಕೇಂದ್ರ ಸಂಪುಟ ಪುನಾರಚನೆ ವಿಳಂಬವಾಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿಗೇ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂಬ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

ಆಮೀರ್‌-ಕಿರಣ್‌ ಇದ್ದಂತೆ: ಬಿಜೆಪಿ ಮತ್ತು ಶಿವಸೇನೆ ನಡುವಿನ ಸಂಬಂಧ ಇತ್ತೀಚೆಗೆ ವಿವಾಹ ವಿಚ್ಛೇದನ ಪ್ರಕಟಿಸಿದ ಬಾಲಿವುಡ್‌ ನಟ ಆಮೀರ್‌ ಖಾನ್‌- ಕಿರಣ್‌ ರಾವ್‌ ನಡುವಿನ ಸಂಬಂಧ ಇದ್ದಂತೆ ಎಂದು ರಾಜ್ಯಸಭಾ ಸದಸ್ಯ ಸಂಜಯ ರಾವುತ್‌ ಬಣ್ಣಿಸಿದ್ದಾರೆ. ಎರಡೂ ಪಕ್ಷಗಳ ನಡುವಿನ ಬಾಂಧವ್ಯ ಭಾರತ ಪಾಕಿಸ್ತಾನ ನಡುವಿನಂತೆ ಅಲ್ಲ. ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಇದ್ದರೂ, ಮಿತ್ರತ್ವ ಮುಂದುವರಿದೇ ಇರುತ್ತದೆ ಎಂದುಹೇಳಿದ್ದಾರೆ.

Advertisement

ಅಂಗೀಕಾರ: ಇತರ ಹಿಂದುಳಿದ ವರ್ಗ (ಒಬಿಸಿ)ಕ್ಕೆ ವ್ಯವಸ್ಥೆಗಳನ್ನು ಕಲ್ಪಿಸಲು ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗಕ್ಕೆ ಅನುಕೂಲ ವಾಗುವಂತೆ 2011ರ ಜನಗಣತಿಯ ವಿವರಗಳನ್ನು ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುವ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next