Advertisement
ಚುನಾವಣೆಯ ಅಧಿಸೂಚನೆ ಹೊರಬೀಳಲು ಇನ್ನು 5 ದಿನ ಬಾಕಿ ಇದೆ. ತಮ್ಮ ಟಿಕೆಟ್ ಪಕ್ಕಾ ಮಾಡಿಕೊಳ್ಳಲು ಆಕಾಂಕ್ಷಿಗಳು ಏನೇನೋ ಲಾಬಿ ಮಾಡುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ಸಿಗರು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರು ಮಾತ್ರ ಈ ಕುರಿತು ತಲೆ ಕೆಡಿಸಿಕೊಂಡಿಲ್ಲ. ಬಹುತೇಕ ಅವರಿಗೆ ಟಿಕೆಟ್ ಪಕ್ಕಾ ಆಗಿರುವಂತಿದೆ. ಹಾಗಾಗಿಯೇ ಸಚಿವ ಮಲ್ಲಿಕಾರ್ಜುನ್ ನಿವಾಸ ಹಾಗೂ ನಗರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗಿದೆ.
Related Articles
Advertisement
ಹರಿಹರದಲ್ಲಿ ಜೆಡಿಎಸ್ ಭರ್ಜರಿ ಪ್ರಚಾರ ನಡೆಸಿದೆ. ಬಿಜೆಪಿಯ ಕಾರ್ಯಕರ್ತರು ಬೂತ್‌ಮಟ್ಟದಲ್ಲಿ ಪ್ರಚಾರ ದಿನನಿತ್ಯ ಮಾಡುವ ಕೆಲಸ ಮಾಡುತ್ತಿದ್ದರು. ಆದರೆ, ಟಿಕೆಟ್ ಅಂತಿಮ ಆಗದ ಹಿನ್ನೆಲೆಯಲ್ಲಿ ನಾಯಕರು ಕಾಣಸಿಗಲಿಲ್ಲ. ಬಹುತೇಕ ರಾಜಕೀಯ ಪಕ್ಷಗಳು ತಮ್ಮ ಹುರಿಯಾಳುಗಳನ್ನು ಅಂತಿಮಗೊಳಿಸಲು ಭರ್ಜರಿ ತಯಾರಿ ನಡೆಸುತ್ತಿವೆ.
ಚುನಾವಣಾ ಅಧಿಸೂಚನೆ ಹೊರಬಿಳುವುದರ ಒಳಗೆ ತಮಗೆ ಟಿಕೆಟ್ ಖಚಿತ ಆದರೆ ತಾಲೀಮು ಮಾಡೋದು ಸುಲಭ ಎಂದು ನಾಯಕರು ಲೆಕ್ಕಹಾಕುತ್ತಿದ್ದಾರೆ. ಇತ್ತ ರ್ಯಕರ್ತರು ತಮ್ಮ ನಾಯಕರಿಗೇ ಟಿಕೆಟ್ ಸಿಗಬೇಕು ಎಂದು ಒತ್ತಾಸೆ ಹೊಂದಿದ್ದಾರೆ. ರಣರಂಗದ ಅಸಲಿ ಗಮ್ಮತ್ತು ಶುರು ಆಗಲು ಇದೀಗ ದಿನಗಣನೆ ಆರಂಭ ಆಗಿದೆ.
ಬಿಜೆಪಿ ತರಬೇತಿ ಕೊಟು ಕಾಂಗ್ರೆಸ್ ಕರ್ಕೂಂತುಮುಸ್ಲಿಂ ಮತದಾರರನ್ನು ಸೆಳೆಯಲು ಬಿಜೆಪಿ ಇನ್ನಿಲ್ಲದ ಕಸರತ್ತು ಮಾಡುತ್ತಲೇ ಇದೆ. ಇದೇ ಕಾರಣಕ್ಕೆ ಚುನಾವಣೆಗಾಗಿ ರಚಿತವಾಗಿದ್ದ ಪಕ್ಷದ ನವಶಕ್ತಿ ಪಡೆ, ಪೇಜ್ ಪ್ರಮುಖ್‌ರ ಹುದ್ದೆಗೆ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಮುಸ್ಲಿಂ ಬಾಹುಳ್ಯ ಇರುವ ಪ್ರದೇಶಗಳ ಮುಸ್ಲಿಂ ಯುವಕರನ್ನು ಸೆಳೆದುಕೊಂಡಿತ್ತು. ಅವರಿಗೆ ಸೂಕ್ತ ತರಬೇತಿ ಸಹ ನೀಡಿತ್ತು. 50 ಜನರ ಪಡೆಯನ್ನು ಸಿದ್ಧಪಡಿಸಿ, ಪ್ರಚಾರದ ಅಖಾಡಕ್ಕೆ ಬಿಟ್ಟಿತ್ತು. ಆದರೆ, ಕಾಂಗ್ರೆಸ್ ನಾಯಕರ ಒಂದೇ ಮಾತಿಗೆ ಈ ಎಲ್ಲಾ ಯುವಕರು ಗುರುವಾರ ಕಾಂಗ್ರೆಸ್ ನಾಯಕ ಎಂ.ಡಿ. ಶೇಖರಪ್ಪ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ ಎನ್ನಲಾಗಿದೆ. ಕೊಟ್ರೇಶ್‌ಗೆ ಟಿಕೆಟ್ ಪಕ್ಕಾ ಅಂತೆ
ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗರಿಗೆ ಟಿಕೆಟ್ ಹಂಚಿಕೆ ಕಗ್ಗಂಟು ಉಂಟಾಗಿರುವ 2 ಕ್ಷೇತ್ರಗಳ ಪೈಕಿ
ಹರಪನಹಳ್ಳಿಯೂ ಒಂದು. ಇಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿ, ಹಿಂದಿನ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಕೊಟ್ರೇಶ್
ನಡುವೆ ಭಾರೀ ಸ್ಪರ್ಧೆ ಇದೆ. ಮೂಲಗಳ ಪ್ರಕಾರ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರೇ ಸ್ವತಃ ಕೊಟ್ರೇಶ್ ಪರ ಬ್ಯಾಟಿಂಗ್ ಮಾಡುತ್ತಿದ್ದರೆ, ಇನ್ನೋರ್ವ ಮುಖಂಡ ಜಗದೀಶ್ ಶೆಟ್ಟರ್ ಕರುಣಾಕರ ರೆಡ್ಡಿ ಪರ ನಿಂತಿದ್ದಾರಂತೆ. ಆದರೆ, ಪಕ್ಷದ ವರಿಷ್ಠರು ಯಾರ ಪರ ನಿಲ್ಲುತ್ತಾರೆ ಎಂಬುದು ಇದೀಗ ಪ್ರಶ್ನೆಯಾಗಿ ಉಳಿದಿದೆ.