ಬೆಂಗಳೂರು: ಸ್ವಾತಂತ್ರ್ಯ ಬಂದಾಗಿನಿಂದಲೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಲೇ ಬಂದಿರುವ ಕಾಂಗ್ರೆಸ್ ಅಥವಾ ದಶಕಗಳ ಇತಿಹಾಸ ಹೊಂದಿರುವ ಜೆಡಿಎಸ್‌ಗೆ ಇದುವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷದ ಕಚೇರಿ ಹೊಂದಲು ಸಾಧ್ಯವಾಗಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಒಂದೊಂದೇ ರಾಜ್ಯಗಳ ಅಧಿಕಾರ ಹಿಡಿಯುತ್ತಾ ಪಕ್ಷದ ಬೇರನ್ನು ಚಾಚಿಕೊಳ್ಳುತ್ತಾ ಸಾಗಿರುವ ಬಿಜೆಪಿ, ಜಿಲ್ಲಾ ಮಟ್ಟದಲ್ಲೂ ಪಕ್ಷಕ್ಕೆ ಸ್ವಂತ ಕಟ್ಟಡ ಹೊಂದಲು ತಯಾರಿ ನಡೆಸಿದೆ.
ಈ ಭವನಗಳ ನಿರ್ಮಾಣಕ್ಕೆ ರಾಷ್ಟ್ರೀಯ ಮಟ್ಟದಿಂದ ಹಣ ಬರುವುದಿಲ್ಲ. ಬದಲಾಗಿ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಸಂಗ್ರಹವಾಗುವ ಹಾಗೂ ಕಾರ್ಯಕರ್ತರು ನೀಡುವ ದೇಣಿಗೆಯಿಂದಲೇ ಕಟ್ಟಡಗಳ ನಿರ್ಮಾಣ ಮಾಡಬೇಕು.
ಪಂಡಿತ್ ದೀನ ದಯಾಳ್ ಉಪಾಧ್ಯಾಯ ಜನ್ಮಶತಾಬ್ದಿ ಸ್ಮರಣಾರ್ಥ ರೂಪಿಸಿದ ಹಲವು ಕಾರ್ಯಕ್ರಮಗಳಲ್ಲಿ ಬಿಜೆಪಿ ಸ್ವಂತ ಕಟ್ಟಡ ಹೊಂದಬೇಕು ಎಂಬುದು ಪ್ರಮುಖವಾಗಿತ್ತು. ಕೇವಲ ರಾಜ್ಯದಲ್ಲಷ್ಟೇ ಅಲ್ಲ, ದೇಶಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಬಿಜೆಪಿ ಸ್ವಂತ ಕಟ್ಟಡ ಹೊಂದಲಿ ಎಂಬುದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆಶಯ ಕೂಡ ಆಗಿದೆ. ಅದರಂತೆ ಎರಡು ವರ್ಷಗಳ ಹಿಂದೆಯೇ ದೇಶಾದ್ಯಂತ ಈ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ನೆರೆಯ ತಮಿಳುನಾಡು, ಕೇರಳದಲ್ಲಿ ಶೇ.75ರಷ್ಟು ಜಿಲ್ಲೆಗಳಲ್ಲಿ ಬಿಜೆಪಿ ಸ್ವಂತ ಕಟ್ಟಡ ನಿರ್ಮಿಸಿರುವುದು ವಿಶೇಷ.
ಎಂಟು ಕಡೆ ಸ್ವಂತ ಕಾರ್ಯಾಲಯ: ರಾಜ್ಯದಲ್ಲಿನ 30 ಜಿಲ್ಲೆ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸ್ವಂತ ಕಾರ್ಯಾಲಯಕ್ಕೆ ಬಿಜೆಪಿ ಮುಂದಾಗಿತ್ತು. •13ನೇ ಪುಟಕ್ಕೆ
Advertisement
ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಾಲಯ ಭವನ ನಿರ್ಮಾಣ ಮಾಡಬೇಕು ಎಂಬ ಗುರಿ ಬಿಜೆಪಿಯದ್ದು. ಇದು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆಲೋಚನೆ. ಜಿಲ್ಲಾ ಮಟ್ಟದಲ್ಲೇ ಕಟ್ಟಡಗಳನ್ನು ಹೊಂದುವ ಮೂಲಕ ಪಕ್ಷವನ್ನು ಬೇರುಮಟ್ಟದಲ್ಲೇ ಗಟ್ಟಿಯಾಗಿ ಬೆಳೆಸುವ ಇರಾದೆ ಶಾ ಅವರದ್ದು ಎಂದು ವಿಶ್ಲೇಷಿಸಲಾಗಿದೆ.
Related Articles
13 ಜಿಲ್ಲೆಗಳಲ್ಲಷ್ಟೇ ಕಾಂಗ್ರೆಸ್‌ಗೆ ಸ್ವಂತ ಕಟ್ಟಡ
ನೂರಾ ಮೂವತ್ಮೂರು ವರ್ಷ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಬೆಂಗಳೂರು ಸೇರಿದಂತೆ 13 ಜಿಲ್ಲೆಗಳಲ್ಲಿ ಸ್ವಂತ ಕಟ್ಟಡ ಹೊಂದಿದೆ. 10 ಜಿಲ್ಲೆಗಳಲ್ಲಿ ಪಕ್ಷ ಜಮೀನು ಹೊಂದಿದ್ದು, ಉಳಿದ ಕಡೆ ಬಾಡಿಗೆ ಕಟ್ಟಡಗಳಲ್ಲಿ ಕಚೇರಿ ಹೊಂದಲಾಗಿದೆ. ಡಾ.ಜಿ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಐದಾರು ಜಿಲ್ಲೆಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನಲ್ಲಿಯೇ ನಾಲ್ಕು ಕಡೆಗಳಲ್ಲಿ ಕಾಂಗ್ರೆಸ್ ಸ್ವಂತ ಕಟ್ಟಡಗಳನ್ನು ಹೊಂದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಜಿಲ್ಲೆಗಳಲ್ಲಿ ಪಕ್ಷದ ಕಟ್ಟಡ ನಿರ್ಮಾಣಕ್ಕಾಗಿ ಸ್ವಂತ ಜಮೀನು ಹೊಂದುವಂತೆ ಸೂಚನೆ ನೀಡಿದ್ದರು. ಆದರೂ, ಕೆಲವು ಜಿಲ್ಲೆಗಳಲ್ಲಿ ಇನ್ನೂ ಸ್ವಂತ ಜಮೀನು ಪಡೆದುಕೊಂಡಿಲ್ಲ.
ದೇಣಿಗೆಗಳಿಂದ ನಿರ್ಮಾಣ ವಾಗುವ ಭವನಗಳನ್ನು ಕಾರ್ಯಕರ್ತರ ಎಲ್ಲ ಚಟುವಟಿಕೆ ಗಳು ನಡೆಯುವ ಶ್ರದ್ಧಾ ಕೇಂದ್ರ ವಾಗಿ ರೂಪಿಸುವುದು ನಮ್ಮ ಆಶಯ.
-ಪ್ರೊ.ಮ. ನಾಗರಾಜ್, ಬಿಜೆಪಿ ಜಿಲ್ಲಾ ಕಾರ್ಯಾಲಯ ಭವನ ನಿರ್ಮಾಣ ಉಸ್ತುವಾರಿ
-ಪ್ರೊ.ಮ. ನಾಗರಾಜ್, ಬಿಜೆಪಿ ಜಿಲ್ಲಾ ಕಾರ್ಯಾಲಯ ಭವನ ನಿರ್ಮಾಣ ಉಸ್ತುವಾರಿ
-ಎಂ. ಕೀರ್ತಿಪ್ರಸಾದ್
Advertisement