Advertisement

ಕಾಂಗ್ರೆಸ್‌ ನಾಯಕರಿಂದ ಅಕ್ರಮ ಕೆರೆ ಒತ್ತುವರಿ

02:40 PM Oct 27, 2020 | Suhan S |

ಕನಕಪುರ: ತಾಲೂಕಿನಲ್ಲಿ ಕಾಂಗ್ರೆಸ್‌ ನಾಯಕರಿಂದ ನಡೆದಿರುವಷ್ಟು ಅಕ್ರಮ ಕೆರೆ ಒತ್ತುವರಿ ಇಡೀ ರಾಜ್ಯದಲ್ಲಿ ಎಲ್ಲೂ ನಡೆದಿಲ್ಲ ಎಂದು ರೈತ ಸಂಘದ ಗೌರವ ಅಧ್ಯಕ್ಷ ಸಂಪತ್‌ ಕುಮಾರ್‌ ಆರೋಪ ಮಾಡಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ರೈತ ಸಂಘ ಹಾಗೂ ಬಿಜೆಪಿ ಪಕ್ಷದ ವತಿಯಿಂದ ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರು ಹಾಗೂ ಮುಖಂ ಡರು ಹಲವಾರು ವರ್ಷಗಳಿಂದ ಕೆರೆ ಗಳನ್ನುಒತ್ತುವರಿ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾಲೂಕಿ ನಲ್ಲಿ ಇವರ ವಿರುದ್ಧ ಯಾರು ಮಾತ ನಾಡುವುದಿಲ್ಲ. ಅದನ್ನೇ ಬಂಡವಾಳ ಮಾಡಿಕೊಂಡು ತಾಲೂಕಿನ ಕೋಡಿ ಹಳ್ಳಿ ಸಾತನೂರು ದೊಡ್ಡಾಆಲಹಳ್ಳಿ ಸೇರಿದಂತೆ ವಿವಿಧ ಭಾಗದಲ್ಲಿ ಎಲ್ಲ ಕೆರೆಗಳು ಒತ್ತುವರಿಯಾಗಿವೆ ಎಂದು ಹೇಳಿದರು.

ತಾಲೂಕಿನ ರಾಯಸಂದ್ರ ಗ್ರಾಮದ ಸರ್ವೆ ನಂ.48ರಲ್ಲಿದ್ದ ಕೆರೆಯನ್ನು ಕಾಂಗ್ರೆ ಸ್‌ ಜಿಪಂ ಮಾಜಿ ಉಪಾಧ್ಯಕ್ಷೆ ಉಷಾ ಅವರ ಪತಿ ರವಿ ಒತ್ತುವರಿ ಮಾಡಿಕೊಂಡು ನಿವೇಶನಗಳನ್ನಾಗಿ ವಿಂಗಡಿಸಿ ಅಕ್ರಮವಾಗಿ ಖಾತೆ ಮಾಡಿ, ಹೆದ್ದಾರಿ ಪ್ರಾಧಿಕಾರದಿಂದ ಬಂದ ಕೋಟ್ಯಂತರ ಹಣ ನುಂಗಿ ಹಾಕಿದ್ದಾರೆ ಎಂದರು.

ಕೋರ್ಟ್‌ ಆದೇಶವನ್ನು ಗಾಳಿಗೆ ತೂರಿ 7ಎಕರೆಯ ಕೆರೆಯನ್ನು ಮಾತ್ರ ಅಭಿವೃದ್ಧಿಪಡಿಸಿ, ಸರ್ಕಾರ ಮತ್ತುನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇವರಿಗೆ ತಾಲೂಕಿನ ಕಾಂಗ್ರೆಸ್‌ ನಾಯಕರ ಕೃಪಾಕಟಾಕ್ಷ ಇದ್ದು, ಅನೇಕ ಕೆರೆ ಗಳನ್ನು ಮುಚ್ಚಿಹಾಕಿ  ದ್ದಾರೆ. ಈ ವಿಚಾರದಲ್ಲಿ ಜಿಲ್ಲಾಡಳಿತಹಾಗೂ ಸರ್ಕಾರ ಒತ್ತುವರಿಯಾಗಿ ರುವ ಸರ್ಕಾರದ ಭೂಮಿಯನ್ನು ವಶಕ್ಕೆ ಪಡೆದು ದುರ್ಬಳಕೆಯಾಗಿರುವ ಹಣವನ್ನು ಹಿಂಪಡಿಯಬೇಕು ಎಂದು ಆಗ್ರಹಿಸಿದರು.

Advertisement

ತಿಗಳರಹಳ್ಳಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ರಾಮಲಿಂಗೇಗೌಡ ಮಾತನಾಡಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಅವರಪತಿ ರವಿ ಅವರು, ಈ ವಿಚಾರದ ಬಗ್ಗೆ ಪ್ರಶ್ನೆ ಮಾಡಿದ್ದ ನಮಗೆ ಧಮ್ಕಿಹಾಕಿದ್ದಾರೆ. ಆದರೂ ಇವರ ಅಕ್ರಮಗಳನ್ನು ಬಯಲಿಗೆ ಎಳೆಯದೇ ಬಿಡುವುದಿಲ್ಲ ಎಂದು ಕಿಡಿಕಾರಿದರು.

ತಮ್ಮ ನಾಯಕರ ಬೆಂಬಲವಿದೆ ಎಂದು ರಾಯ ಸಂದ್ರ ರವಿ ಅವರುಪಂಚಾಯ್ತಿ ಅಧಿಕಾರಿಗಳ ಅನುಮತಿ ಇಲ್ಲದಿದ್ದರೂ, ಆಕ್ರಮವಾಗಿ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಿದ್ದಾರೆ. ಕೋಟ್ಯಂತರ ರೂ. ಸರ್ಕಾರದ ಹಣವನ್ನು ಲೂಟಿ ಮಾಡಿದ್ದಾರೆ. ಇವರ ದರ್ಪ ದೌರ್ಜನ್ಯದಿಂದ ತಾಲೂಕಿನಲ್ಲಿ ಅಕ್ರಮಗಳು ಸಾಗುತ್ತಿವೆ. ಈ ವಿಚಾರದಲ್ಲಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಕಾದು ನೋಡಿ ನಂತರ ಮುಂದಿನಹೋರಾಟ ಮಾಡುತೇವೆ ಎಂದರು.

ಬಿಜೆಪಿ ನಗರ ಮಾಜಿ ಅಧ್ಯಕ್ಷ ನಾಗಾನಂದ್‌ ಮಾತನಾಡಿ, ಅಧಿಕಾರಿಗಳ ಸಮ್ಮುಖದಲ್ಲಿ ಮತ ದಾರರ ಪಟ್ಟಿ ಲೋಪ ಸರಿಪಡಿಸಲು ಮುಂದಾದ ನಮ್ಮ ಪಕ್ಷದಕಾರ್ಯಕರ್ತ ರಾಯಸಂದ್ರ ಮರಿಗೌಡ ಅವರಿಗೆ ರವಿಯವರು ಧಮ್ಕಿ ಹಾಕಿದ್ದಾರೆ. ವಿನಾಕಾರಣ ಅವರಿಗೆ ತೊಂದರೆ ಕೊಡುತ್ತಿದ್ದಾರೆ. ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ,

ನಾವು ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವುದಿಲ್ಲ. ನಿಮ್ಮ ಹಣ ಬಲ, ತೋಳ್‌ ಬಲದ ಪ್ರಯೋಗ ನಿಮ್ಮ ಹಿಂಬಾಲಕರಿಗೆ ಮಾತ್ರ ಸೀಮಿತವಾಗಿರಲಿ. ನಾವು ಎಲ್ಲದಕ್ಕೂಸಿದ್ಧ ಎಂದು ಎಚ್ಚರಿಕೆ ನೀಡಿದರು.

ರೈತಸಂಘದ ರಾಜ್ಯ ಕಾರ್ಯದರ್ಶಿ ಮರಿಗೌಡ, ಮಳ್ಳಹಳ್ಳಿ ಮಂಜುನಾಥ್‌, ಮುಖಂಡ ರಾದ ದೇವರಾಜು, ಮಂಜುನಾಥ್‌, ಗಂಜೇಂದ್ರ ಸಿಂಗ್‌, ಶಿವಣ್ಣ, ಬಿಜೆಪಿ ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷ ಮುರುಳಿಧರ್‌, ಮಂಜುನಾಥ್‌, ಗೋಪಿ, ಮೋಹನ್‌, ತಹಸೀನಾಖಾನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next