Advertisement

4 ಲಕ್ಷ ರೂ. ನಗದು ಹೊಂದಿದ್ದ ಬ್ಯಾಗ್ ಎತ್ತಿಕೊಂಡು ಮರವೇರಿದ ಕಪಿ…ಮುಂದೇನಾಯ್ತು?

02:34 PM Dec 23, 2020 | Nagendra Trasi |

ಸೀತಾಪುರ್(ಉತ್ತರಪ್ರದೇಶ): ಕಪಿ ಚೇಷ್ಟೆ ಒಂದೆರಡಲ್ಲ ಎಂಬುದಕ್ಕೆ ಉತ್ತರಪ್ರದೇಶದ ಸೀತಾಪುರ್ ಎಂಬಲ್ಲಿ ನಡೆದ ಈ ಘಟನೆಯೂ ಸಾಕ್ಷಿಯಾಗಿದೆ. ದಿಢೀರನೆ ಬಂದು ಹಣ ತುಂಬಿದ್ದ ಬ್ಯಾಗ್ ಅನ್ನು ಎತ್ತಿಕೊಂಡು ಹೋದ ಕಪಿ ರಿಜಿಸ್ಟ್ರಾರ್(ನೋಂದಣಿ ಕಚೇರಿ) ಕಚೇರಿ ಹೊರಗಿನ ಮರವೇರಿ ನೋಟುಗಳನ್ನು ಎಸೆದಿತ್ತು.!

Advertisement

ನೋಡ, ನೋಡುತ್ತಿದ್ದಂತೆಯೇ ಲಕ್ಷಾಂತರ ರೂಪಾಯಿ ನೋಟು ಗಾಳಿಯಲ್ಲಿ ಹಾರಾಡುತ್ತ ನೋಂದಣಿ ಕಚೇರಿ ಸುತ್ತಮುತ್ತ ಬೀಳುತ್ತಿರುವುದನ್ನು ಕಂಡು ಏನಿದು ಎಂದು ಕುತೂಹಲ, ಅಚ್ಚರಿಯಿಂದ ಕಂಡವರಿಗೆ ಕಪಿ ಚೇಷ್ಟೆ ಬೆಳಕಿಗೆ ಬಂದಿತ್ತು.

ಸೀತಾಪುರ್ ನ ವಿಕಾಸ್ ಭವನದ ರಿಜಿಸ್ಟ್ರಿ ಕಚೇರಿ ಹೊರಭಾಗದಲ್ಲಿ ಹಿರಿಯ ವ್ಯಕ್ತಿಯೊಬ್ಬರು 4 ಲಕ್ಷ ರೂಪಾಯಿ ಹೊಂದಿದ್ದ ಬ್ಯಾಗ್ ಅನ್ನು ಪಕ್ಕದಲ್ಲಿಟ್ಟುಕೊಂಡು ಕುಳಿತಿದ್ದರು. ಆಗ ದಿಢೀರ್ ಆಗಿ ಬಂದ ಮಂಗ ಬ್ಯಾಗ್ ಎತ್ತಿಕೊಂಡು ಮರ ಏರಿ ಕುಳಿತುಕೊಂಡು ಬಿಟ್ಟಿತ್ತು. ನಂತರ ಸುಮಾರು 10, 12 ಸಾವಿರ ರೂಪಾಯಿಗಳಷ್ಟು ನೋಟುಗಳನ್ನು ಕೆಳಗೆ ಎಸೆದಿತ್ತು ಎಂದು ವರದಿ ವಿವರಿಸಿದೆ.

ಪುಕ್ಕಟ್ಟೆ ಸಿಕ್ಕ ಹಣ ಎಂದು ಗುಂಪುಗೂಡಿದ ಜನ ಹಣವನ್ನು ತಮ್ಮ ಜೇಬಿಗೆ ಹಾಕಿಕೊಂಡಿದ್ದು, ಕೊನೆಗೂ ಏನೆಲ್ಲಾ ಪ್ರಯತ್ನ ಮಾಡಿದ ನಂತರ ಮಂಗ ಬ್ಯಾಗ್ ಅನ್ನು ಕೆಳಕ್ಕೆ ಎಸೆದಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next