ನಿಂದ ಮರಳು ಸಾಗಾಟದ ಲಾರಿಗಳು ಸಂಚರಿಸುತ್ತಿರುವ ಪರಿಣಾಮ ರಸ್ತೆ ಪೂರ್ತಿ ಹದಗೆಟ್ಟಿದೆ. ಜತೆಗೆ ರಸ್ತೆ ಪೂರ್ತಿ ಧೂಳಿನಿಂದ ತುಂಬಿದ್ದು, ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿ ಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Advertisement
ವಾಮಂಜೂರಿನಿಂದ ಮೂಡುಶೆಡ್ಡೆಗೆ ತೆರಳುವ ರಸ್ತೆಯ ಕೊನೆಯಲ್ಲಿ ಒಂದು ರಸ್ತೆಯು ಶಾಲೆಪದವಿಗೆ ಸಾಗುತ್ತದೆ. ಇದು ಡಾಮರು ರಸ್ತೆಯಾಗಿದ್ದು, ಸಂಚಾರಕ್ಕೆ ಯೋಗ್ಯವಾಗಿತ್ತು. ಆದರೆ ಇಲ್ಲಿ ಗುರುಪುರ ಡ್ಯಾಮ್ ಬಳಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ಇಲ್ಲಿ ಸಂಗ್ರಹಿಸಿದ ಮರಳನ್ನು ಲಾರಿಗಳ ಮೂಲಕ ಇದೇ ರಸ್ತೆಯಲ್ಲಿ ಸಾಗಿಸಲಾಗುತ್ತಿದೆ.
ಸ್ಥಳೀಯ ಮನೆಗಳು ಧೂಳಿನಿಂದ ಮುಳುಗಿ ಹೋಗಿವೆ. ಈ ಭಾಗದಲ್ಲಿ ಸುಮಾರು 20 ಮನೆಗಳಿವೆ. ನಿತ್ಯ ಸರಾಸರಿ 10 ಲಾರಿಗಳು ಸಾಗಾಟ ನಡೆಸುತ್ತಿವೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.