ಈಗ ಕಾಲ ಬದಲಾಗಿದೆ. ಸಂತೆಯಲ್ಲಿ ತರಕಾರಿ ಬೀಜಗಳು ಮಾತ್ರ ಸಿಗುತ್ತಿದ್ದವು. ಆದರೆ ಈಗ ಕೃಷಿಕರಿಗೆ ಅನುಕೂಲವಾಗುವಂತೆ ಸಸಿಗಳೇ ಸಂತೆಯಲ್ಲಿ ಲಭ್ಯವಾಗುತ್ತಿವೆ. ಇದರಿಂದ ಸುಲಭ ಹಾಗೂ ಬೇಗ ತರಕಾರಿ ಬೆಳೆಯಬಹುದೆಂಬ ಲೆಕ್ಕಾಚಾರ ಜನರದ್ದು.
Advertisement
ಕೆಲವು ಸಂದರ್ಭದಲ್ಲಿ ಬೀಜ ಹಾಕಿ ಮೊಳಕೆ ಬಾರದೇ ಕಷ್ಟಕ್ಕೆ ಸಿಲುಕಿ ಹಾಕಿಕೊಳ್ಳುವುದಕ್ಕಿಂತ ಗಿಡಗಳನ್ನೇ ಕೊಳ್ಳುವವರು ಹೆಚ್ಚಾಗಿದ್ದಾರೆ. ಅದಕ್ಕೆ ತಕ್ಕಂತೆ ಕೃಷಿಕರು ಎಕ್ರೆಗಟ್ಟಲೆ ಜಮೀನಿನಲ್ಲಿ ಸಸಿಗಳನ್ನು ತಯಾರು ಮಾಡುವುದರಲ್ಲಿ ತೊಡಗಿದ್ದಾರೆ. ಬಜಪೆ ಸುಂಕದಕಟ್ಟೆ, ಹಳೆ ವಿಮಾನ ನಿಲ್ದಾಣ, ಅಡ್ಕಬಾರೆಗಳಲ್ಲಿ ಕೃಷಿಕರಿಗೆ ಇದೇ ಕೆಲಸ. ನರ್ಸರಿಯಂತೆ ಸಸಿಗಳನ್ನು ಸಿದ್ಧಪಡಿಸಿ ಸಂತೆಗೆ ತಂದು ಮಾರುವುದು. ಇದರೊಂದಿಗೆ ರೈತರಿಂದ ಈ ಸಸಿಗಳನ್ನು ಪಡೆದು ಮಾರುವವರೂ ಆರಂಭವಾಗಿದ್ದಾರೆ.
ಬೀಜವನ್ನು ಮಾರಿದರೆ ರೈತರಿಗೆ ಲಾಭ ಸಿಗದು. ಅದಕ್ಕಿಂತ ಸಸಿ ಮಾಡಿ ಮಾರಿದರೆ ಹೆಚ್ಚು ಲಾಭಗಳಿಸಲು ಸಾಧ್ಯ. ಜನರಿಗೂ ಸಮಯ ಉಳಿಯಲಿದೆ ಎನ್ನುತ್ತಾರೆ ಸ್ಥಳೀಯ ರೈತರೊಬ್ಬರು. ಇದು ಹೇಗೆ?
ತರಕಾರಿ ಕೃಷಿಕರು ಎಕ್ರೆಗಟ್ಟಲೆ ಪ್ರದೇಶಕ್ಕೆ ಬೀಜ ಬಿತ್ತುತ್ತಾರೆ. ಬೀಜ ಮೊಳಕೆಯೊಡೆದು ಸಸಿಯಾಗುತ್ತಿದ್ದಂತೆಯೇ ಪರಸ್ಪರ ಸಸಿಗಳ ಮಧ್ಯೆ ಅಂತರ ಕಾಯ್ದುಕೊಳ್ಳಲು ಮಧ್ಯ ಸಾಲಿನಲ್ಲಿರುವ ಸಸಿಗಳನ್ನು ಕಿತ್ತು ಮಾರುತ್ತಿದ್ದಾರೆ.
Related Articles
ಈಗಾಗಲೇ ಬೆಂಡೆ ಬೀಜಕ್ಕೆ ಕೀಟಗಳ ಕಾಟ ಶುರುವಾಗಿದೆ. ಮಳೆ ಕಡಿಮೆಯಾದರೂ ಕೀಟ ಬಾಧೆ ಕಾಣುತ್ತಿದೆ. ಬೆಂಡೆ ಗಿಡದ ಎಲೆಗಳನ್ನು ಕೀಟಗಳು ತಿನ್ನುತ್ತಿದ್ದು, ಕಳೆದ ಬಾರಿಯ ಹಳದಿ ರೋಗದ ಭೀತಿ ಕಾಡುತ್ತಿದೆ. ಕೆಲವೆಡೆ ಬೆಂಡೆಯ ಬದಲು ಬೇರೆ ತರಕಾರಿಗಳನ್ನು ರೈತರು ಬೆಳೆದಿದ್ದು, ಬಜಪೆ ಬೆಂಡೆಗೆ ಭಾರೀ ಬೇಡಿಕೆ ಇದೆ.
Advertisement
ಹೇಗಿದೆ ದರ?ಬೆಂಡೆ ಸಸಿ ಒಂದು ಕಟ್ಟು 20 ರಿಂದ 30 ರೂ. ಇದ್ದರೆ, ಮೆಣಸಿನ ಗಿಡಕ್ಕೆ 50 ರೂ. ಗಳು. ಬೆಂಡೆ ಗಿಡದ 20 ರೂ.ಕಟ್ಟಿನಲ್ಲಿ 13 ಹಾಗೂ 30 ರೂ. ಕಟ್ಟಿನಲ್ಲಿ 22 ಸಸಿಗಳಿವೆ. ಹಾಗೆಯೇ ಮೆಣಸಿನ ಕಟ್ಟಿನಲ್ಲಿ ಸಸಿಗಳಿವೆ. ಮುಳ್ಳು ಸೌತೆ ಕಟ್ಟಿಗೆ 40 ರೂ., ಬದನೆ ಗಿಡದ ಕಟ್ಟಿಗೆ 40 ರೂ. ದರವಿದೆ.