Advertisement

ಹೈಟೆಕ್‌ ಸ್ಪೀಡ್‌ : ಬರಲಿದೆ ಸ್ವದೇಶಿ ‘ಹೈಪರ್‌ಲೂಪ್‌’

09:50 AM Jul 28, 2017 | Team Udayavani |

ಹೊಸದಿಲ್ಲಿ: ಮುಂಬಯಿ- ಅಹಮದಾಬಾದ್‌ ನಡುವೆ ಪ್ರಸ್ತಾವಿತ ಬುಲೆಟ್‌ ರೈಲು ಗಂಟೆಗೆ 320-350 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ಇದಕ್ಕೆ ಎರಡು ನಗರಗಳನ್ನು ಸಂಪರ್ಕಿಸಲು 2 ಗಂಟೆ ಬೇಕು. ಅಂಥದ್ದರಲ್ಲಿ ಗಂಟೆಗೆ 1,200 ಕಿ.ಮೀ.ಯಂತೆ ಕೇವಲ 40 ನಿಮಿಷದಲ್ಲಿ ಈ ದೂರವನ್ನು ಕ್ರಮಿಸುವಂತಾದರೆ? ಇಂಥದ್ದೊಂದು ಹೊಸ ಆಲೋಚನೆಯನ್ನು ಬಿಐಟಿಎಸ್‌ (ಬಿಟ್ಸ್‌) ಪಿಲಾನಿಯ ವಿದ್ಯಾರ್ಥಿಗಳು ಹೊರತಂದಿದ್ದಾರೆ. ಈಗಾಗಲೇ ಹೊಸ ಮಾದರಿಯ ಸಾರಿಗೆ ತಂತ್ರಜ್ಞಾನವೆಂದು ಹೆಸರು ಪಡೆದಿರುವ ‘ಹೈಪರ್‌ ಲೂಪ್‌’ ಮಾದರಿಯಲ್ಲೇ ನಿರ್ವಾತ ಟ್ಯೂಬ್‌ನಲ್ಲಿ ಚಲಿಸುವ ಪಾಡ್‌ ಮಾದರಿಯ ಕಲ್ಪನೆಯನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ್ದಾರೆ. 

Advertisement

ಶತಕೋಟ್ಯಧೀಶ ಉದ್ಯಮಿ ಇಲೋನ್‌ ಮಸ್ಕ್ ಅವರು ಹೈಪರ್‌ಲೂಪ್‌ ಹಿಂದಿದ್ದು, ಅವರು ಆಯೋಜಿಸಿರುವ ಹೈಪರ್‌ಲೂಪ್‌ ಜಾಗತಿಕ ಸ್ಪರ್ಧೆಗೆ ಬಿಐಟಿಎಸ್‌ ವಿದ್ಯಾರ್ಥಿಗಳೂ ಸ್ಪರ್ಧಿಸಿದ್ದು, ಹೊಸ ಬಗೆಯ ಆಲೋಚನೆಯನ್ನು ಮುಂದಿಟ್ಟಿದ್ದಾರೆ. ಇದು ಗಂಟೆಗೆ 1,200 ಕಿ.ಮೀ. ವೇಗವನ್ನು ತಲುಪಬಲ್ಲದು. ‘ಹೈಪರ್‌ಲೂಪ್‌ ಇಂಡಿಯಾ’ ಎಂದು ಇದಕ್ಕೆ ಹೆಸರಿಡಲಾಗಿದ್ದು, ಭಾರತದಿಂದ 3 ತಂಡಗಳು ಪಾಲ್ಗೊಂಡಿವೆ. ಅಂತಿಮವಾಗಿ 24 ತಂಡಗಳು ಪಟ್ಟಿಯಲ್ಲಿವೆ.

ಬಿಐಟಿಎಸ್‌ ವಿದ್ಯಾರ್ಥಿಗಳು ಹೇಳುವ ಪ್ರಕಾರ ಇಲೋನ್‌ ಮಸ್ಕ್ ಅವರ ಹೈಪರ್‌ ಲೂಪ್‌ಗಿಂತಲೂ ಇಂಡಿಯಾ ಹೈಪರ್‌ಲೂಪ್‌ ಶೇ.40ರಷ್ಟು ಕಡಿಮೆ ವೆಚ್ಚದ್ದು. ಮಸ್ಕ್ ಅವರ ಹೈಪರ್‌ಲೂಪ್‌ ಕಾರ್ಬನ್‌ ಫೈಬರ್‌ನಿಂದ ಮಾಡಿದ್ದಾಗಿದೆ. ಇದರಲ್ಲಿ ಎಲೆಕ್ಟ್ರೋಮ್ಯಾಗ್ನೆಟಿಕ್‌ (ನಿರಂತರ ವಿದ್ಯುತ್‌ ಬಯಸುತ್ತದೆ) ಬದಲಿಗೆ ನಿಷ್ಕ್ರಿಯ ಅಯಸ್ಕಾಂತಗಳು ಒಳಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next