Advertisement

ಕ್ರಿಪ್ಟೋ ಕರೆನ್ಸಿ ಹೊಂದಿದವರಿಗೆ ಹತ್ತು ವರ್ಷ ಜೈಲು ಶಿಕ್ಷೆ : ಕರಡು ಮಸೂದೆ

02:45 PM Jun 11, 2019 | Sathish malya |

ಹೊಸದಿಲ್ಲಿ: ಬಿಟ್‌ಕಾಯಿನ್‌ ಮತ್ತು ಇತರ ಕ್ರಿಪ್ಟೋ ಕರೆನ್ಸಿಗಳನ್ನು ಹೊಂದುವುದು, ಮಾರುವುದು ಮತ್ತು ಅದರ ವಹಿವಾಟಿನಲ್ಲಿ ತೊಡಗಿರುವುದು ಕಂಡು ಬಂದಲ್ಲಿ ಅದರ ಬಳಕೆದಾರರಿಗೆ ಶೀಘ್ರವೇ 10 ವರ್ಷಗಳ ಜೈಲು ಶಿಕ್ಷೆಗೆ ಆಗಲಿದೆ.

Advertisement

ಕ್ರಿಪ್ಟೋ ಕರೆನ್ಸಿ ನಿಷೇಧ ಮತ್ತು ನಿಯಂತ್ರಣದ 2019ರ ಅಧಿಕೃತ ಡಿಜಿಟಲ್‌ ಕರೆನ್ಸಿಯ ಕರಡು ಮಸೂದೆಯಲ್ಲಿ ಕ್ರಿಪ್ಟೋ ಕರೆನ್ಸಿ ಸೃಷ್ಟಿಸುವವರಿಗೆ, ಹೊಂದಿರುವವರಿಗೆ, ಮಾರುವವರಿಗೆ, ವರ್ಗಾಯಿಸುವವರಿಗೆ ಮತ್ತು ವಿಲೇವಾರಿ ಮಾಡುವವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಲ್ಪಿಸಲಾಗಿದೆ.

ಕ್ರಿಪ್ಟೋ ಕರೆನ್ಸಿಯನ್ನು ಸಂಪೂರ್ಣವಾಗಿ ಕಾನೂನುಬಾಹಿರಗೊಳಿಸುವುದು ಈ ಮಸೂದೆಯ ಉದ್ದೇಶವಾಗಿದೆ. ಅಂತೆಯೇ ಅದನ್ನು ಹೊಂದಿರುವುದು ಜಾಮೀನು ರಹಿತ ಅಪರಾಧವನ್ನಾಗಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next