Advertisement

Bitcoin: ಮನೆ, ಕಚೇರಿ ಮೇಲೆ ಎಸ್‌ಐಟಿ ದಾಳಿ

11:53 PM Oct 07, 2023 | Team Udayavani |

ಬೆಂಗಳೂರು: ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರಲ್ಲಿ ಆತಂಕ ಸೃಷ್ಟಿಸಿದ್ದ ಬಿಟ್‌ಕಾಯಿನ್‌ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ವಿಶೇಷ ತನಿಖಾ (ಎಸ್‌ಐಟಿ) ತಂಡ ಶನಿವಾರ ನಾಲ್ವರು ಪೊಲೀಸ್‌ ಅಧಿಕಾರಿಗಳು, ಇಬ್ಬರು ಖಾಸಗಿ ವ್ಯಕ್ತಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ, ಕೆಲವು ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ಡಿವೈಎಸ್ಪಿ ಶ್ರೀಧರ್‌ ಪೂಜಾರ್‌ಗೆ ಸೇರಿದ ತುಮಕೂರು ರಸ್ತೆಯ ಖಾಸಗಿ ಅಪಾರ್ಟ್‌ ಮೆಂಟ್‌, ರಾಮಮೂರ್ತಿನಗರದ ಪಿಐ ಚಂದ್ರಾ ಧರ್‌, ಪ್ರಶಾಂತ್‌ಬಾಬು ಮತ್ತು ಲಕ್ಷ್ಮೀಕಾಂತ್‌ ಹಾಗೂ ಸೈಬರ್‌ ಎಕ್ಸ್‌ಪರ್ಟ್‌ ಸಂತೋಷ್‌ ಅವರ ಬೊಮ್ಮನಹಳ್ಳಿಯ ಫ್ಲ್ಯಾಟ್‌ ಹಾಗೂ ಮತ್ತೂಬ್ಬ ವ್ಯಕ್ತಿ ಸಹಿತ ಇಬ್ಬರ ಮನೆಗಳು ಸೇರಿ 9 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ದಾಳಿ ಸಂದರ್ಭ ನಾಲ್ಕು ಲ್ಯಾಪ್‌ಟಾಪ್‌, 8 ಮೊಬೈಲ್‌, 2 ಎನ್‌ಎಎಸ್‌ ಸ್ಟೋರೆಂಜ್‌ ಡಿವೈಎಸ್‌, 10 ಹಾರ್ಡ್‌ ಡ್ರೈವ್‌, 5 ಪೆನ್‌ಡ್ರೈವ್‌, 1 ಮೆಮೊರಿ ಕಾರ್ಡ್‌, ಇತರೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next