Advertisement
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ಕೋಟ್ಯಾಂತರ ಹರಗಣವಾಗಿದೆ. ಇದರಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳೂ ಭಾಗಿಯಾಗಿದ್ದಾರೆ. ಲಂಚದ ಹಣವೂ ಬಿಟ್ ಕಾಯಿನ್ ಮೂಲಕ ವರ್ಗಾವಣೆಯಾಗಿದೆ ಎಂದು ಗಂಭೀರ ಆರೋಪ ಮಾಡಿದರು.
Related Articles
Advertisement
ರಾಜ್ಯದಲ್ಲಿ ಹೋಮ್ (ಗೃಹ) ಡಿಪಾರ್ಟ್‌ಮೆಂಟ್ ಗೆ ವಸೂಲಿ ಡಿಪಾರ್ಟ್‌ಮೆಂಟ್ ಅಂತ ಹೆಸರಿಡಬೇಕೆಂದು ಪ್ರಿಯಾಂಕ್ ಖರ್ಗೆ ಹರಿಹಾಯ್ದರು. ಕಲಬುರಗಿಯಲ್ಲಿ ರಕ್ಷಕರೇ ಭಕ್ಷಕರಾಗಿದ್ದಾರೆ. ಬಿಜೆಪಿ ಗೆ ಪೊಲೀಸ್ ಠಾಣೆಗಳು ಕಾಮಧೇನು ಆಗಿದ್ದು, ದುಡ್ಡು ಕೊಟ್ಟವರಿಗೆ ಮಾತ್ರ ಪೋಸ್ಟಿಂಗ್ ಹಾಕಲಾಗುತ್ತದೆ. 701 ಕೋಟಿ ರೂಪಾಯಿ ಹಣವನ್ನು ಕೇವಲ ದಂಡದ ಮೂಲಕ ರಾಜ್ಯ ಸರ್ಕಾರ ಸಂಗ್ರಹಿಸಿದೆ ಎಂದರು.
ಇದನ್ನೂ ಓದಿ: ಚಿಕ್ಕಮಗಳೂರು: ಮಗನ ಪ್ರಿಯತಮೆಯನ್ನು ಬಲವಂತವಾಗಿ ಮನೆಯಲ್ಲಿರಿಸಿ ಅತ್ಯಾಚಾರ ಮಾಡಿದ..!
ಪೊಲೀಸರು ಜೂಜು, ಗಾಂಜಾ, ಕೊಲೆ ಪ್ರಕರಣಗಳನ್ನು ನಿಯಂತ್ರಣ ಮಾಡುತ್ತಿಲ್ಲ. ಆದರೆ, ಸಾಮಾನ್ಯ ಜನರಿಗೆ ದಂಡ ಹೆಸರಲ್ಲಿ ತೊಂದರೆ ಕೊಡುತ್ತಿದ್ದಾರೆ. ಗಾಂಜಾ ಸಾಗಾಟ ಅಗತ್ಯ ವಸ್ತುಗಳಿಗಿಂತ ಸುಲಭವಾಗಿ ನಡೆಯುತ್ತಿದೆ ಎಂದು ದೂರಿದರು.
ಕಲಬುರಗಿ ಜಿಲ್ಲೆಯಲ್ಲಿ ಗಾಂಜಾ ಅವ್ಯಾಹುತವಾಗಿ ಪೂರೈಕೆಯಾಗುತ್ತಿದೆ. ಪ್ರತಿ ಶಾಪ್ ನಿಂದ ಐದು ಸಾವಿರ ಹಪ್ತಾ ವಸೂಲಿ ಮಾಡುತ್ತಿದ್ದಾರೆ. ಬಿಜೆಪಿಗೆ ಸೇರಿದ ರೌಡಿ ಶೀಟರ್ ಗಳನ್ನು ರೌಡಿ ಪಟ್ಟಿಯಿಂದ ಕೈಬಿಡಲಾಗುತ್ತದೆ. ಕಲಬುರಗಿಯಲ್ಲಿ ಕೊಲೆಗಾರರು ಮತ್ತು ಪೊಲೀಸರ ನಡುವೆ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪಿಸಿದರು.