Advertisement

ಆಂಧ್ರ ವ್ಯಕ್ತಿ ಆತ್ಮಹತ್ಯೆಗೆ ಬಿಟ್‌ ಕಾಯಿನ್‌ ದಂಧೆ ಲಿಂಕ್‌

02:02 PM Dec 22, 2020 | sudhir |

ಹುಬ್ಬಳ್ಳಿ: ಇಲ್ಲಿನ ಕಿತ್ತೂರ ಚನ್ನಮ್ಮ ವೃತ್ತ ಬಳಿಯ ಶ್ರೀ ವಿನಾಯಕ ರೆಸಿಡೆನ್ಸಿ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದ ಆಂಧ್ರಪ್ರದೇಶ
ಮೂಲದ ವ್ಯಕ್ತಿ ಸಾವಿಗೆ ಬೀಟ್‌ ಕ್ವಾಯಿನ್‌ ದಂಧೆ ಕಾರಣ ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಆಂಧ್ರಪ್ರದೇಶ ಚಿತ್ತೂರ ಜಿಲ್ಲೆ ರೇಣುಗುಂಟಂನ ಡಿ. ರಾಜೇಂದ್ರ (42) ಎಂಬುವರು ಡಿ.18ರಂದು ವಿನಾಯಕ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದರು.

ಈ ವೇಳೆ “ನನ್ನ ಸಾವಿಗೆ ಹುಬ್ಬಳ್ಳಿಯ ಶಿವಾ, ಬೆಂಗಳೂರಿನ ರಾಜೇಶ, ಚೆನ್ನೈ ನ ಹರಿನಾರಾಯಣ, ಜುನೇದ ಕಾರಣ’
ಎಂದು ಡೆತ್‌ನೋಟ್‌ ಬರೆದಿಟ್ಟಿದ್ದು ಪತ್ತೆಯಾಗಿದ್ದು, ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಸ್ಟ್‌ ಮರ್ಚಂಟ್‌ ಪೇ ಎಂಬ ವ್ಯಾಲೆಟ್‌ನಲ್ಲಿ ಡಮ್ಮಿ ಖಾತೆ ತೆರೆದು ಅದರ ಕಾರ್ಡ್‌ ಬಳಸಿ ಡಿ.ರಾಜೇಂದ್ರ ಹಣವನ್ನು ಚೈನ್‌ ಸಿಸ್ಟಮ್‌ ಅಡಿ ಒಬ್ಬರಿಂದ ಇನ್ನೊಬ್ಬರಿಗೆ ಪಾಸ್‌ ಮಾಡುತ್ತಿದ್ದರು. ಇವರಿಗೆ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡಿಕೊಂಡಿರುವ ಬೆಂಗಳೂರಿನ ರಾಜೇಶ ಪರಿಚಿತರಾಗಿದ್ದರು.

ಇದನ್ನೂ ಓದಿ:ದೇಹದ ತೂಕ ಹೆಚ್ಚಾಗುತ್ತಿದೆಯೇ…ಎಚ್ಚರ ನಿದ್ರೆಯ ನಿರ್ಲಕ್ಷ್ಯ ಅಪಾಯಕಾರಿ

ರಾಜೇಶಗೆ ಮೂಲತಃ ಹಾನಗಲ್ಲ ತಾಲೂಕ ಅರಳೇಶ್ವರ ಗ್ರಾಮದ ಇಲ್ಲಿನ ಅಮರಗೋಳದ ಶಿವಪ್ಪ ಐ. ಗಣಪ್ಪನವರ
ಪರಿಚಿತರಾಗಿದ್ದರು. ರಾಜೇಶ ಅವರು ಶಿವಪ್ಪಗೆ ಕರೆ ಮಾಡಿ, ಡಿ.ರಾಜೇಂದ್ರ ಎಂಬುವರು ಹುಬ್ಬಳ್ಳಿಗೆ ಬರುತ್ತಾರೆ. ಯಾವ ಗ್ರಾಹಕರು ನಿಮ್ಮ ಬಳಿ ಬರುತ್ತಾರೋ ಅವರಿಗೆ ಈಸ್ಟ್‌ ಮರ್ಚಂಟ್‌ ಪೇ ಕಾರ್ಡ್ ನಿಂದ ಹಣ ಹಾಕು, ಅಂದರೆ ನಿನಗೆ ಲಾಭವಾಗಿ ಕಮಿಷನ್‌
ಸಿಗುತ್ತದೆ ಎಂದು ಹೇಳಿ ರಾಜೇಂದ್ರರನ್ನು ಡಿ.11ರಂದು ನಗರಕ್ಕೆ ಕಳುಹಿಸುತ್ತಾನೆ.

Advertisement

ಡಿ.12ರಂದು ರಾಜೇಶ ಅವರು ಶಿವಪ್ಪನ ಬದಲು ಗೋವಾದ ಪ್ರವೀಣನಿಂದ ಚೆನ್ನೈ ನ ಹರಿನಾರಾಯಣಗೆ ಕಾರ್ಡ್‌ ಹಾಕಿಸುತ್ತಾನೆ.
ನಾರಾಯಣ ಅವರು ಡಿ.ರಾಜೇಂದ್ರನ ಸ್ನೇಹಿತ ಆಗಿರುತ್ತಾನೆ. ಆ ಹಣವು ರಾತ್ರಿ ಪ್ರವೀಣಗೆ ಬರಬೇಕಾಗಿತ್ತು. ಆದರೆ ಅದು ಬಾರದಿದ್ದಾಗ ಶಿವಪ್ಪನು ತನ್ನ ಸ್ನೇಹಿತ ಪ್ರವೀಣಗೆ ಇನ್ನುವರೆಗೆ ಹಣ ಏಕೆ ಬರಲಿಲ್ಲ. ನೀನು ಹೇಗೆ ವ್ಯವಹಾರ ಮಾಡುತ್ತೀಯಾ. ನನಗೆ 5 ಲಕ್ಷ ರೂ. ಕೊಡಲೇಬೇಕು ಎಂದು ಡಿ. ರಾಜೇಂದ್ರಗೆ ದುಂಬಾಲು ಬೀಳುತ್ತಾನೆ. ಇವರ ಕಿರುಕುಳಕ್ಕೆ ಮನನೊಂದು ರಾಜೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ತಿರುಪತಿಯಲ್ಲಿ ರೈಸ್‌ ಮಿಲ್‌ ಹೊಂದಿದ್ದ ಡಿ.ರಾಜೇಂದ್ರಗೆ ವ್ಯವಹಾರದಲ್ಲಿ 30 ಲಕ್ಷ ರೂ. ನಷ್ಟವಾಗಿತ್ತು. ಅಲ್ಲದೆ ಕೈಗಡವಾಗಿ
20 ಲಕ್ಷ ರೂ. ಸಾಲ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ವ್ಯಾಲೆಟ್‌ ದಂಧೆ ಮಾಡಲು ಶುರು ಮಾಡಿದ್ದ. ಅದರಲ್ಲೂ
ವೈಫಲ್ಯವಾಗಿದ್ದರಿಂದ ಮನನೊಂದಿದ್ದ ಎನ್ನಲಾಗುತ್ತಿದೆ. ಡಿ. ರಾಜೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಪನಗರ
ಪೊಲೀಸರು ಶಿವಪ್ಪ ಎಂಬಾತನನ್ನು ಬಂಧಿಸಿ, ಇನ್ನುಳಿದವರ ಪತ್ತೆಗೆ ಮುಂದಾಗಿದ್ದಾರೆ. ಪ್ರಕರಣ ಕುರಿತು ತನಿಖೆ ಮುಂದುವರೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next