Advertisement

ವರ್ಚುವಲ್‌ ಕರೆನ್ಸಿ ವಿರುದ್ಧ ಕಠಿಣ ನಿಲುವು ಇಲ್ಲ :ಮಧ್ಯಮ ಪ್ರಮಾಣದ ನಿಲುವು ಹೊಂದಲು ಚಿಂತನೆ

08:31 PM Nov 08, 2021 | Team Udayavani |

ನವದೆಹಲಿ : ವರ್ಚುವಲ್‌ ಕರೆನ್ಸಿ ಎಂದು ಕರೆಯಿಸಿಕೊಳ್ಳುವ ಬಿಟ್‌ ಕಾಯಿನ್‌ ವಿರುದ್ಧ ಕೇಂದ್ರ ಸರ್ಕಾರ ಕಠಿಣ ನಿಲುವು ತಾಳುವುದು ಅಸಂಭವ ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದೇಶವಾಸಿಗಳು ಬಿಟ್‌ಕಾಯಿನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆ ಮಾಡುತ್ತಿರುವುದರಿಂದ ಒಂದು ರೀತಿಯ ಸಮತೋಲಿತ ನಿಲುವು ಅನುಸರಿಸಲು ಯೋಚಿಸುತ್ತಿದೆ ಸರ್ಕಾರ. ಬಿಟ್‌ ಕಾಯಿನ್‌ ಕ್ಷೇತ್ರದ ನಿಯಂತ್ರಣಕ್ಕೆ ಕರಡು ವಿಧೇಯಕ ಸಿದ್ಧಗೊಂಡಿದ್ದು, ಅದನ್ನು ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳುವುದು ಕೇಂದ್ರ ಇರಾದೆಯಾಗಿದೆ.

Advertisement

ಡಿಜಿಟಲ್‌ ಕರೆನ್ಸಿಗೆ ಯಾವ ರೀತಿ ತೆರಿಗೆ ವಿಧಿಸಬೇಕು, ಅದರ ಮೇಲೆ ನಿಯಂತ್ರಣ ಅಥವಾ ಕಠಿಣ ನಿಲುವು ತಾಳುವುದರಿಂದ ಪ್ರತಿಕೂಲ ಪರಿಣಾಮ ಏನು, ಇತರ ದೇಶಗಳಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಈಗಾಗಲೇ ಒಂದು ಸುತ್ತಿನ ಸಮಾಲೋಚನೆಯನ್ನು ಕೇಂದ್ರ ವಿತ್ತ ಸಚಿವಾಲಯ ಪೂರ್ತಿಗೊಳಿಸಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಆರ್‌ಬಿಐ ಮತ್ತು ಸಂಬಂಧಿತ ಇಲಾಖೆಗಳ ಜತೆಗೆ ಸರ್ಕಾರ ಶೀಘ್ರದಲ್ಲಿಯೇ 2ನೇ ಸುತ್ತಿನ ಸಮಾಲೋಚನೆ ನಡೆಸಲಿದೆ.

ಇದನ್ನೂ ಓದಿ : ವಿಜಯಪುರ : ಜಗತ್ತಿನ ಅದ್ಭುತ ಗೋಲಗುಮ್ಮಟ ಕಂಡು ನಿಬ್ಬೆರಗಾದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್

ಹಿಂದೆ ಸಿದ್ಧಪಡಿಸಲಾಗಿದ್ದ ಕರಡು ವಿಧೇಯಕದಲ್ಲಿ ಬಿಟ್‌ ಕಾಯಿನ್‌ಗೆ ಪೂರ್ಣ ಪ್ರಮಾಣದ ನಿಷೇಧ ಹೇರುವ ಬಗ್ಗೆ ಸಲಹೆ ಮಾಡಲಾಗಿತ್ತು. ಆದರೆ, ದೇಶವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅದರ ಮೇಲೆ ಹೂಡಿಕೆ ಮಾಡುತ್ತಿರುವುದರಿಂದ ಮತ್ತು ಡಿಜಿಟಲ್‌ ಕರೆನ್ಸಿ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬದಲಾವಣೆ ಲಕ್ಷಿಸಿಕೊಂಡು, ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕಾನೂನು ರೂಪಿಸಲಾಗುತ್ತದೆ. ಪರಾಮರ್ಶೆ ಪೂರ್ತಿಗೊಂಡ ನಂತರ ಕರಡು ವಿಧೇಯಕವನ್ನು ಕೇಂದ್ರ ಸಂಪುಟಕ್ಕೆ ಸಲ್ಲಿಸಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖೀಸಿ ” ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next