Advertisement

ಬ್ರೆಜಿಲ್‌ನಲ್ಲಿ ಧ್ವಜ ಹಾರಿಸಿದ ಬಿಸಿಲೂರು ದಂಪತಿ

11:45 PM Aug 15, 2019 | Team Udayavani |

ರಾಯಚೂರು: 73ನೇ ಸ್ವಾತಂತ್ರ್ಯ ದಿನವನ್ನು ದೇಶದ ಮೂಲೆ ಮೂಲೆಯಲ್ಲೂ ಆಚರಿಸುವುದು ಸಾಮಾನ್ಯ. ಆದರೆ, ಬ್ರೆಜಿಲ್‌ ದೇಶದಲ್ಲೂ ತಿರಂಗಾ ಹಾರಿಸುವ ಮೂಲಕ ದೇಶ ಪ್ರೇಮ ಮೆರೆದಿದ್ದಾರೆ ರಾಯಚೂರು ಮೂಲದ ದಂಪತಿ. ತಾಲೂಕಿನ ಕಾಡ್ಲೂರು ಗ್ರಾಮದ ರಂಗಾರಾವ್‌ ದೇಸಾಯಿ ಹಾಗೂ ಅಶ್ವಿ‌ನಿ ದಂಪತಿ ಬ್ರೆಜಿಲ್‌ನಲ್ಲಿ ನೆಲೆಸಿದ್ದಾರೆ.

Advertisement

ಅವರ ಮಗಳು ಲಹರಿ ಗುರುವಾರ ಶಾಲೆಗೆ ತೆರಳಿ ಇಂದು ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆ ಇದ್ದು, ಧ್ವಜಾರೋಹಣಕ್ಕೆ ಅನುವು ಮಾಡಿಕೊಡುವಂತೆ ಕೋರಿದ್ದಾರೆ. ಇದಕ್ಕೆ ಬ್ರೆಜಿಲ್‌ನ ಕ್ಯುರಿಟಿಬಾದ ಕೊಲಿಗಿಯೋ ಪಾಸಿಟಿವೊ ಇಂಟರ್‌ ನ್ಯಾಷನಲ್‌ ಸ್ಕೂಲ್‌ ಅನುವು ಮಾಡಿಕೊಟ್ಟಿದೆ.

ಧ್ವಜಾರೋಹಣ ನೆರೆವೇರಿಸಲು ಸಹಕರಿಸಿದ ಶಾಲಾ ಆಡಳಿತ ಮಂಡಳಿಗೆ ರಂಗಾರಾವ್‌ ದಂಪತಿ ಧನ್ಯವಾದ ತಿಳಿಸಿದ್ದಾರೆ. ಜತೆಗೆ ರಕ್ಷಾ ಬಂಧನವಿದ್ದ ಹಿನ್ನೆಲೆಯಲ್ಲಿ ರಾಖಿ ಹಬ್ಬವನ್ನೂ ಆಚರಿಸಿ ಮಕ್ಕಳಿಗೆ ಸಿಹಿ ಹಂಚಿದ್ದಾರೆ. ಕಳೆದ ಒಂದು ವರ್ಷದಿಂದ ಬ್ರೆಜಿಲ್‌ನಲ್ಲಿ ನೆಲೆಸಿರುವ ದೇಸಾಯಿ ರಾಬರ್ಟ್‌ ಬಾಷ್‌ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಲೀಡರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next