Advertisement
ಅವರು ಸೋಮವಾರ ಧರ್ಮಸ್ಥಳದ ಮಹೋತ್ಸವ ಸಭಾಂಗಣಲ್ಲಿ 19ನೇ ವರ್ಷದ ಭಜನ ತರಬೇತಿ ಕಮ್ಮಟವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ, ಸಮರ್ಥ ನಾಯಕರು ಹಳ್ಳಿ ಹಳ್ಳಿಗಳಲ್ಲಿ ಇರಬೇಕೆಂದು ಭಜನ ಕಮ್ಮಟ ನಡೆಸಲಾಗುತ್ತಿದೆ. ಭಜನೆಯಿಂದ ಮಾನವೀಯ ಮೌಲ್ಯಗಳು ಉದ್ದೀಪನಗೊಂಡು, ಪ್ರೀತಿ-ವಿಶ್ವಾಸದ ಸಾಮರಸ್ಯದ ಬದುಕಿನೊಂದಿಗೆ ದುಶ್ಚಟ ಮುಕ್ತ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಶ್ರದ್ಧೆಯಿದ್ದರೆ ಎಲ್ಲವೂ ಸಾಧ್ಯ. ನಮ್ಮ ದೈನಂದಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವುದೇ ದೇವರ ಪೂಜೆ. ಸಿಕ್ಕಿದ ಅವಕಾಶದ ಸದುಪಯೋಗ ಮಾಡಿ ಸಾಧ್ಯವಾದಷ್ಟು ಪರೋಪಕಾರ ಮಾಡಬೇಕು ಎಂದು ಹೇಳಿದರು.
Related Articles
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಗ್ರಾಮಸ್ವಾಸ್ಥ éವೇ ಭಜನ ಕಮ್ಮಟದ ಪ್ರಮುಖ ಉದ್ದೇಶ. ಜಾತಿ ಮತ ಭೇದ ವಿಲ್ಲದೆ ಎಲ್ಲರೂ ಪ್ರೀತಿ-ವಿಶ್ವಾಸದಿಂದ ಭಜನ ಮಂದಿರ ದಲ್ಲಿ ಸೇರಿ ಭಜನೆ ಮಾಡುವ ಮೂಲಕ ಊರಿನ ಸ್ವಾಸ್ಥ é ಕಾಪಾಡ ಬೇಕು. ದೇವರ ಅನುಗ್ರಹ ಪ್ರಾಪ್ತಿಗೆ ಭಜನೆ ಸರಳ ಮಾಧ್ಯಮವಾಗಿದೆ. ಭಜನೆ ಮೂಲಕ ಸತ್ಯ, ಸದಾಚಾರಗಳೊಂದಿಗೆ ಸಂಸ್ಕಾರ ಯುತ ಜೀವನ ನಡೆಸ ಬೇಕು. ಭಜನ ಮಂಡಳಿ ಗಳ ಮೂಲಕ ಊರಿನಲ್ಲಿ ಸಾಮರಸ್ಯ, ಸಂಘಟನೆ ಮತ್ತು ನಾಯಕತ್ವ ಬೆಳೆಯಬೇಕು ಎಂದರು.
Advertisement
ಧರ್ಮಸ್ಥಳದ ಡಿ. ಹಷೇìಂದ್ರ ಕುಮಾರ್ ಉಪಸ್ಥಿತರಿದ್ದರು. ಭಜನ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಮಮತಾ ರಾವ್ ವಂದಿಸಿದರು. ಶ್ರೀನಿವಾಸ ರಾವ್ ನಿರ್ವಹಿಸಿದರು.ಶಂಕರ್ ಶ್ಯಾನುಭಾಗ್ ಬೆಂಗಳೂರು, ಬಿ.ಕೆ. ಸುಮಿತ್ರಾ ಬೆಂಗಳೂರು, ರಾಮಕೃಷ್ಣ ಕಾಟುಕುಕ್ಕೆ ಕಾಸರಗೋಡು, ಉಷಾ ಹೆಬ್ಟಾರ್ ಮಣಿಪಾಲ, ಮನೋರಮಾ ತೋಳ್ಪಾಡಿತ್ತಾಯ ಧರ್ಮಸ್ಥಳ, ದೇವದಾಸ ಪ್ರಭು ಬಂಟ್ವಾಳ, ಮೋಹನದಾಸ ಶೆಣೆೈ ಮಂಗಳೂರು, ಮಂಗಲದಾಸ್ ಗುಲ್ವಾಡಿ ಮಂಗಳೂರು, ಈರಪ್ಪ ಕೆ. ಪತ್ತಾರ್ ಬೈಲಹೊಂಗಲ, ರಮೇಶ್ ಕಲ್ಮಾಡಿ, ಶಂಕರ್ ಉಡುಪಿ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲಿದ್ದಾರೆ.