Advertisement

ಆಟಿಸಂ ಮಕ್ಕಳು ಸಮಾಜದ ಆಸ್ತಿಯಾಗಬಲ್ಲರು : ಬಿಷಪ್‌ ಐಸಾಕ್‌ ಲೋಬೋ

07:18 PM May 31, 2022 | Team Udayavani |

ಶಿರ್ವ:ಆಟಿಸಂ ಸಾಮಾಜಿಕ ಸಮಸ್ಯೆಯಾಗಿದ್ದು,ರೋಗದ ಬಗ್ಗೆ ಜನರಲ್ಲಿದ್ದ ತಪ್ಪು ಕಲ್ಪನೆ ಮತ್ತು ಮೂಢನಂಬಿಕೆ ತೊಡೆದು ಹಾಕಿ ಜಾಗೃತಿ ಮೂಡಿಸುವಂತಾಗಬೇಕು. ದೇಶದಲ್ಲಿ ಸುಮಾರು 5 ಮಿಲಿಯ ಮಕ್ಕಳು ಆಟಿಸಂನಿಂದ ಬಳಲುತ್ತಿದ್ದು, ಮಕ್ಕಳಿಗೆ ಪ್ರೋತ್ಸಾಹ,ಸಹಕಾರ ನೀಡಿ ಪ್ರತಿಭೆ ಬಳಸಿಕೊಂಡರೆ ಅವರು ಸಮಾಜಕ್ಕೆ ಹೊರೆಯಾಗದೆ ಆಸ್ತಿಯಾಗಬಲ್ಲರು ಎಂದು ಉಡುಪಿ ಕೆಥೋಲಿಕ್‌ ಧರ್ಮಪ್ರಾಂತ್ಯದ ಬಿಷಪ್‌ ರೈ|ರೆ|ಡಾ|ಜೆರಾಲ್ಟ್ ಐಸಾಕ್‌ ಲೋಬೋ ಹೇಳಿದರು.

Advertisement

ಅವರು ಮಂಗಳವಾರ ಬಂಟಕಲ್ಲು ಸಮೀಪದ ಪಾಂಬೂರು ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ರಜತ ಮಹೋತ್ಸವ ಕಟ್ಟಡ ಮತ್ತು ಆಟಿಸಂ ಸೆಂಟರ್‌ನ್ನು ಉದ್ಘಾಟಸಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿ ಆಶೀರ್ವಚನ ನೀಡಿದರು. ರಜತ ಮಹೋತ್ಸವ ಕಟ್ಟಡದ ನಾಮ ಫಲಕವನ್ನು ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಅನಾವರಣಗೊಳಿಸಿದರು. ಆಟಿಸಂ ಸೆಂಟರ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರೆ|ಫಾ| ಕ್ಷೇವಿಯರ್‌ ಗೋಮ್ಸ್‌ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತ‌ನಾಡಿ ಕೇಂದ್ರದಲ್ಲಿ ಬೇರೆ ಬೇರೆ ಸಮುದಾಯಕ್ಕೆ ಸೇರಿದ ಮಕ್ಕಳು ಕಲಿಯುತ್ತಿದ್ದು, ವಿಶೇಷ ಪ್ರತಿಭೆಗಳಿರುವ ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಮುಖ್ಯವಾಹಿನಿಗೆ ತಂದು ಸುಸಂಸðತ ಜೀವನ ನಡೆಸಲು ಪ್ರಯತ್ನ ನಡೆಸುತ್ತಿರುವ ಸಂಸ್ಥೆಯ ಸಮಾಜಮುಖೀ ಸೇವೆಗೆ ದೇವರು ಶಕ್ತಿ ಸಾಮರ್ಥ್ಯ ನೀಡಲಿ ಎಂದು ಹೇಳಿದರು.

ರಜತ ಮಹೋತ್ಸವ ಕಟ್ಟಡ ನಿರ್ಮಾಣದ ಎಂಜಿನಿಯರ್‌ ದೀಪಕ್‌ ಫೆರ್ನಾಂಡಿಸ್‌ ಮತ್ತು ಗುತ್ತಿಗೆದಾರ ಇಲಿಯಾಸ್‌ ಡಿಸೋಜಾ ಅವರನ್ನು ಸಂಸ್ತೆಯ ವತಿಯಿಂದ ಸಮ್ಮಾನಿಸಲಾಯಿತು.
ಆಧ್ಯಾತ್ಮಿಕ ನಿರ್ದೇಶಕ ರೆ|ಫಾ| ಫರ್ಡಿನಾಂಡ್‌ ಗೋನ್ಸಾಲ್ವಿàಸ್‌, ನಿವೃತ್ತ ಪ್ರಾಂಶುಪಾಲ ರೆ|ಫಾ| ಕ್ಷೇವಿಯರ್‌ ಗೋಮ್ಸ್‌ ,ಜಿಲ್ಲಾ ವಿಕಲಚೇತನ ಅಧಿಕಾರಿ ರತ್ನಾ ಮತ್ತು ಮುಂಬಯಿ ಕೆಥೋಲಿಕ್‌ ಸಭಾದ ಅಧ್ಯಕ್ಷ ರಫಾಯಿಲ್‌ ಡಿಸೋಜಾ ಮಾತನಾಡಿದರು. ವಿಶೇಷ ಮಕ್ಕಳ ತರಬೇತಿ ಮತ್ತು ವಸತಿ ಶಾಲೆಯ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

Advertisement

ಇದನ್ನೂ ಓದಿ : ಒಂದೇ ವರ್ಷದಲ್ಲಿ ಫಸಲು ಕೊಡುವ ಹಲಸು. ಏನಿದು?

ರಜತ ಮಹೋತ್ಸವ ಸಮಿತಿಯ ಸಂಚಾಲಕ ಎಲ್ರಾಯ್‌ ಕಿರಣ್‌ ಕ್ರಾಸ್ತಾ ,ಕೆಥೋಲಿಕ್‌ ಸಭಾ ಮಂಗಳೂರು ಪ್ರದೇಶ್‌ನ ಅಧ್ಯಕ್ಷ ಸ್ಟಾನಿ ಲೋಬೋ, ಕೆಥೋಲಿಕ್‌ ಸಭಾ ಉಡುಪಿ ಪ್ರದೇಶ್‌ನ ಅಧ್ಯಕ್ಷೆ ಮೇರಿ ಡಿ‡ ಸೋಜಾ ಮತ್ತು ಸಂಸ್ಥೆಯ ಪ್ರಾಂಶುಪಾಲೆ ಸಿ| ಅನ್ಸಿಲ್ಲಾ ಫೆರ್ನಾಂಡಿಸ್‌ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಮಾನಸ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ವಿವಿಧ ವಿಕಲ ಚೇತನ ಸಂಸ್ಥೆಗಳ ಮುಖ್ಯಸ್ಥರು, ಕೆಥೋಲಿಕ್‌ ಸಭಾ ಉಡುಪಿ ಮತ್ತು ಮಂಗಳೂರು ಪ್ರದೇಶ್‌ನ ಪದಾಧಿಕಾರಿಗಳು, ಶಾಲೆಯ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು, ಹೆತ್ತವರು,ಶಿಕ್ಷಕ ವೃಂದ ಮತ್ತುವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಾನಸ ಸಂಸ್ಥೆಯ ಅಧ್ಯಕ್ಷ ಹೆನ್ರಿ ಮೆನೇಜಸ್‌ಸ್ವಾಗತಿಸಿದರು. ಶಿಕ್ಷಕಿ ಅನಿತಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಕಾರ್ಯದರ್ಶಿ ಜೋಸೆಫ್‌ ನೊರೊನ್ಹಾ, ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next