Advertisement
ಪಟ್ಟಣದಲ್ಲಿ ಗುರುವಾರ ಶಾಸಕ ಪ್ರಭು ಚವ್ಹಾಣ ಜನ್ಮದಿನ ನಿಮಿತ್ತ ಆಯೊಜಿಸಿದ್ದ 2 ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತಾಡಿದ ಅವರು, ಪಟ್ಟಣದಲ್ಲಿ 2 ಲಕ್ಷ ಸಸಿಗಳನ್ನು ನೆಡುವುದರಿಂದ ಬೇಸಿಗೆಯಲ್ಲಿ ನೆರಳು ಹಾಗೂ ಸಕಾಲಕ್ಕೆ ಮಳೆ ಬಂದು ರೈತರು ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಅವುಗಳ ಪೋಷಣೆ ಮಾಡಲು ಮುಂದಾಗಬೇಕು ಎಂದರು.
ಮತ್ತು ತಾಲೂಕು ಆರೋಗ್ಯ ಇಲಾಖೆಯಿಂದ ವಿವಿಧ ರೋಗಿಗಳ ಉಚಿತ ತಪಾಷಣೆ ಮಾಡಿ, ಔಷಧ ವಿತರಿಸಲಾಯಿತು.
ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ತಾಲೂಕಿನ ಸಾವಿರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ
ಅವರ ಪಾಲಕರಿಗೆ ಶಾಸಕ ಪ್ರಭು ಚವ್ಹಾಣ ಸನ್ಮಾನಿಸಿದರು. ತಾಲೂಕಿನ ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳಿಗೆ ಶಾಸಕರು ತಲಾ ಎರಡು ನೋಟ್‌ಬುಕ್ ವಿತರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ
ಡಾ| ಶೈಲೇಂದ್ರ ಬೆಲ್ದಾಳೆ, ಬಾಬುರಾವ್ ಮದಕಟ್ಟಿ, ದತ್ತು ತುಗಾಂವಕರ್, ಡಾ|ಕಲ್ಲಪ್ಪ ಉಪ್ಪೆ, ಭಾಲ್ಕಿ ಹಿರೇಮಠ ಸಂಸ್ಥಾನದ
ಡಾ| ಬಸವಲಿಂಗ ಪಟ್ಟದೇವರು, ತಮಲೂರಿನ ಶಿವಾನಂದ ಶಿವಾಚಾರ್ಯರು, ಜಿಪಂ ಸದಸ್ಯ ಅನೀಲ ಗುಂಡಪ್ಪ, ಮಾರುತಿ ಚವ್ಹಾಣ, ಜಿಪಂ ಮಾಜಿ ಸದಸ್ಯ ಕಾಶಿನಾಥ ಜಾಧವ, ಅರಹಂತ ಸಾವಳೆ, ಶರಣಬಸವ ಪಾಟೀಲ, ಪ್ರಕಾಶ ಅಲ್ಮಾಜೆ, ಬಂಡೆಪ್ಪ ಕಂಟೆ ಇದ್ದರು.