ಜೋಹಾನ್ಸ್‌ಬರ್ಗ್: ಪೋರ್ಟ್ ಎಲಿಜಬೆತ್ ಎಂದು ಕರೆಯಲಾಗುತ್ತಿದ್ದ ಗ್ಕೆಬರ್ಹಾ ನಗರದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಮನೆಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಗುಂಡು ಹಾರಿಸಿ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಪೊಲೀಸರು ವಾರಾಂತ್ಯದಲ್ಲಿ ನಡೆದ ಗುಂಡಿನ ದಾಳಿಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ವಕ್ತಾರ ಪ್ರಿಸ್ಸಿಲ್ಲಾ ನಾಯ್ಡು ಅವರ ಪ್ರಕಾರ, ಅಪರಿಚಿತ ಬಂದೂಕುಧಾರಿಗಳು ಕ್ವಾಜಖೆಲೆ ಟೌನ್‌ಶಿಪ್‌ನಲ್ಲಿರುವ ವಸತಿಗ್ರಹಕ್ಕೆ ನುಗ್ಗಿ ಭಾನುವಾರ ಮಧ್ಯಾಹ್ನ ಜನರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು.ಮೃತರಲ್ಲಿ ಮನೆಯ ಮಾಲಕನೂ ಸೇರಿದ್ದು, ಪೊಲೀಸರ ಪ್ರಕಾರ ಗುಂಡಿನ ದಾಳಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.
ಕ್ವಾಜಖೆಲೆಯ ಮಕಾಂದ ಸ್ಟ್ರೀಟ್‌ನಲ್ಲಿ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಅಂಗಳಕ್ಕೆ ಪ್ರವೇಶಿಸಿ ಅತಿಥಿಗಳ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದಾಗ ಮನೆಯ ಮಾಲಕರು ತಮ್ಮ ಜನ್ಮದಿನವನ್ನು ಆಚರಿಸುತ್ತಿದ್ದರು ಎಂದು ಈ ಹಂತದಲ್ಲಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ನಾಯ್ಡು ಹೇಳಿದರು.