Advertisement

ಪೊಲೀಸ್‌ ಠಾಣೆಯಲ್ಲೇ ವಂಚಕನ ಜನ್ಮದಿನ

08:16 AM Aug 02, 2019 | Suhan S |

ಬೆಂಗಳೂರು: ನಕಲಿ ಪೊಲೀಸ್‌ ಅಧಿಕಾರಿ ಸೋಗಿನಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಜಾಲಹಳ್ಳಿ ಪೊಲೀಸರ ಬಲೆಗೆ ಬಿದ್ದಿರುವ ಅಭಿಷೇಕ್‌ ಅಲಿಯಾಸ್‌ ಅಭಿ, ವರ್ಷದ ಹಿಂದೆ ವಿದ್ಯಾರಣ್ಯಪುರ ಪೊಲೀಸ್‌ ಠಾಣೆಯ ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿ ಜತೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ಫೋಟೋಗಳು ಇದೀಗ ವೈರಲ್ ಆಗಿವೆ.

Advertisement

ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿಯೇ ಆರೋಪಿಯಿಂದ ಕೇಕ್‌ ಕತ್ತಿರಿಸಿ, ಆತನಿಗೆ ತಿನ್ನುಸುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಾಡಿಗೆಗೆ ಪಡೆದ ಕಾರನ್ನು ಅಪಘಾತದಲ್ಲಿ ಜಖಂಗೊಳಿಸಿದ್ದ ಆರೋಪಿ ಅಭಿ, ಅದರ ರಿಪೇರಿಗೆ ಹಣ ಕೇಳಿದ ಕಾರು ಮಾಲೀಕನಿಗೆ, ‘ನಾನು ಪೊಲೀಸ್‌. ಹಣ ಕೇಳಿದರೆ ಪ್ರಕರಣ ದಾಖಲಿಸುತ್ತೇನೆ’ ಎಂದು ಹೇಳಿ ಬೆದರಿಸಿದ್ದ. ಅಷ್ಟೇ ಅಲ್ಲದೆ, ಕಾರು ಮಾಲೀಕನಿಂದಲೇ ಸಾವಿರಾರು ರೂ. ಹಣ ವಸೂಲಿ ಮಾಡಿದ್ದ. ಈ ಸಂಬಂಧ ದಾಸರಹಳ್ಳಿ ನಿವಾಸಿ ಕಾರ್ತಿಕ್‌ ಎಂಬವರು ವಿದ್ಯಾರಣ್ಯಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಅಭಿಷೇಕ್‌ನನ್ನು ಬಂಧಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿರಿಯ ಪೊಲೀಸ್‌ ಅಧಿಕಾರಿ, ಈಗ ವೈರಲ್ ಆಗಿರುವ ವಿಡಿಯೋ ಮತ್ತು ಫೋಟೋಗಳು ಒಂದು ವರ್ಷದ ಹಿಂದಿನವು. ಪೊಲೀಸ್‌ ಭಾತ್ಮಿದಾರನಾಗಿದ್ದ ಅಭಿಷೇಕ್‌, ಠಾಣೆ ಸಿಬ್ಬಂದಿ ಜತೆ ಆತ್ಮೀಯತೆ ಹೊಂದಿದ್ದ. ಅದೇ ಕಾರಣಕ್ಕೆ ವರ್ಷದ ಹಿಂದೆ ಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ವಿಡಿಯೋದಲ್ಲಿರುವ ಪಿಎಸ್‌ಐ ಹಾಗೂ ಸಿಬ್ಬಂದಿ, ನಾಲ್ಕು ತಿಂಗಳ ಹಿಂದೆಯೇ ಬೇರೆಡೆ ವರ್ಗಾವಣೆಗೊಂಡಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next