Advertisement
ಮುಂಬೈ ಮೂಲದ ಮೀನಾ ಮುಕೇಶ ಬಾಳಿಕ್ ಅವರು ನೆಹರು ನಗರದ ಹೊಟೆಲ್‌ವೊಂದರಲ್ಲಿ ತಮ್ಮ 60ನೇ ಜನ್ಮದಿನವನ್ನು ವಿಶೇಷವಾಗಿ ಆಚರಿಸಿಕೊಂಡರು. ಮುಂಬೈದಿಂದ ಬೆಳಗಾವಿಯ ಅನಗೋಳದಲ್ಲಿರುವ ಹರಿ ಮಂದಿರದ ಶ್ರೀ ಕಲಾವತಿ ಆಯಿ ದರ್ಶನ ಪಡೆದು ಜನ್ಮದಿನ ಆಚರಿಸಿಕೊಂಡರು. ಬುಧವಾರ ಬೆಳಗ್ಗೆ ವಿಶೇಷವಾಗಿ ಆಚರಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ನವೆಂಬರ್‌ನಲ್ಲಿಯೇ ಪ್ರಧಾನಿ ಮೋದಿ ನೋಟ್ ಬ್ಯಾನ್ ಮಾಡಿದ್ದು ಹಾಗೂ ಮೀನಾ ಅವರ ಜನ್ಮದಿನ ಇದೇ ತಿಂಗಳಿನಲ್ಲಿ ಇರುವುದರಿಂದ ಇದನ್ನು ವಿಶೇಷವಾಗಿ ಆಚರಿಸಿಕೊಂಡರು. ಅನಗೋಳದ ಕಲಾವತಿ ಆಯಿ ಮಂದಿರಕ್ಕೆ ನಾವು ಆಗಾಗ ಬರುತ್ತಿರುತ್ತೇವೆ. ಬೆಳಗಾವಿಗೂ ನಮಗೂ ಅತ್ಯಂತ ನಿಕಟ ಸಂಬಂಧವಿದೆ. ಕಲಾವತಿ ಆಯಿ ದೇವಿ ದರ್ಶನ ಪಡೆದ ಕೂಡಲೇ ಮೀನಾ ಅವರ ಜನ್ಮದಿನ ಆಚರಿಸುವ ಬಗ್ಗೆ ನಿರ್ಧರಿಸಿ 60 ನೋಟುಗಳ ಸರ ಮಾಡಿ ಅವರಿಗೆ ಕೊಡುಗೆ ನೀಡಲಾಯಿತು ಎಂದು ಇವರ ಸಂಬಂಧಿಕ ಅರವಿಂದ ಅಮೃತೇಶ ತಿಳಿಸಿದರು.