ಕುಂಬಳೆ: ಕಯ್ನಾರು ಜೋಡುಕಲ್ಲು ನಿವಾಸಿ ಸಂಘಪರಿವಾರದ ಕಾರ್ಯಕರ್ತ ಲೋಕೇಶ್ ನೋಂಡ ಪತ್ನಿ ಭಾಗ್ಯ ಲಕ್ಷ್ಮೀ ದಂಪತಿಗೆ ಕಳೆದ ವರ್ಷ ಮೇ 23ರಂದು ಹೆಣ್ಣು ಶಿಶು ಜನಿಸಿದ ಸಂಭ್ರಮದಲ್ಲಿ ಮಗುವಿಗೆ ಪ್ರದಾನ ಮಂತ್ರಿನರೇಂದ್ರ ಮೋದಿಯವರ ಮತ್ತು ಬಿ.ಜೆ.ಪಿ. ಅಧ್ಯಕ್ಷ ಅಮಿತ್‌ಶಾ ಜೋಡಿ ಅವರ ಅಭಿಮಾನದಿಂದ ಇವರಿಬ್ಬರ ಹೆಸರು ಸೇರಿಸಿ ಈ ಬಾಲೆಗೆ ಮೋದಿಶಾ ಎಂಬುದಾಗಿ ನಾಮಕರಣ ಮಾಡಿದ್ದರು.ಕಾಕತಾಳಿಯೋ ಎಂಬಂತೆ ಮೇ 23ರಂದು ಲೋಕಸಭಾ ಚುನಾವಣೆಯ ಮತ ಎಣಿಕೆಯಾಗುವ ದಿನದಂದೇ ಈ ಕಂದಮ್ಮನಿಗೆ ವರ್ಷ ತುಂಬಿದ ಹುಟ್ಟುಹಬ್ಬದ ಆಚರಣೆಯದಿನ ಮತ್ತು ಮತಣಿಕೆಯ ದಿನ ಒಂದೇ ಆಗಿದೆ.ಮತ ಎಣಿಕೆಯ ಫಲಿತಾಂಶದ ಸಂಭ್ರಮದಲ್ಲಿ ಮಗುವಿನ ಬರ್ತ್‌ಡೇಯನ್ನು ಆಚರಿಸಿದ ಸಮಾರಂಭದಲ್ಲಿ ಮತ್ತೂಮ್ಮೆ ಕೇಂದ್ರದಲ್ಲಿ ಪ್ರದಾನಿಯಾಗಲಿರುವ ನರೇಂದ್ರಮೋದಿಯವರಿಗೆ ಮತ್ತು ಕೇಂದ್ರ ಸಚಿವರಾಗಲಿರುವ ಅಮಿತ್‌ಶಾ ಭಲೇಜೋಡಿಗೆ ಶುಭ ಹಾರೈಕೆಯೊಂದಿಗೆ ಪುತ್ರಿಯ ಜನ್ಮದಿನವಾದ ಮೇ 23 ರಂದು ಮೋದಿಶಾಳ ಬರ್ತ್‌ಡೇಯನ್ನು ಮನೆಯಲ್ಲಿ ಬಂಧುಮಿತ್ರರೊಂದಿಗೆ ಆಚರಿಸಲಾಯಿತು.ಸಮಾರಂಭದಲ್ಲಿ ಬಿ.ಜೆ.ಪಿ.ನಾಯಕರು ಉಪಸ್ಥಿತರಿದ್ದರು.