Advertisement

ಜನನ, ಮರಣ ನೋಂದಣಿ: ಶೇ. 100ರಷ್ಟು ದಾಖಲಿಸಲು ಡಿಸಿ ಸೂಚನೆ

11:34 PM Oct 31, 2022 | Team Udayavani |

ಮಂಗಳೂರು: ಜನನ ಮರಣ ನೋಂದಣಿ ಕಡ್ಡಾಯವಾಗಿ ಶೇ. 100ರಷ್ಟು ದಾಖಲಾಗುವಂತೆ ಹಾಗೂ ಈ ಪ್ರಕ್ರಿಯೆಯಲ್ಲಿ ಯಾವುದೇ ನೋಂದಣಿ ಬಿಟ್ಟು ಹೋಗದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್‌ನ ಸಿಇಓ ಡಾ| ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ದ.ಕ. ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜನನ ಮರಣ ನೋಂದಣಿ ಕುರಿತ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮರಣದ ನೋಂದಣಿ ಮಾಡುವಾಗ ಮರಣ ಕಾರಣವನ್ನು ನಿಖರವಾಗಿ ದಾಖಲಿಸಬೇಕು ಹಾಗೂ ಮರಣ ನೋಂದಣಿ ಮಾಡುವಾಗ ನಮೂನೆ-4ಅನ್ನು ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಬೇಕು. ಕೃಷಿ ಅಂಕಿ ಅಂಶ ಸಮನ್ವಯ ಸಮಿತಿಗೆ ಸಂಬಂಧಿಸಿದಂತೆ 2022-23ನೇ ಸಾಲಿನ ಮುಂಗಾರು ಋತುವಿನ ಬೆಳೆ ಅಂದಾಜು ಸಮೀಕ್ಷೆ ಯೋಜನೆಯಡಿ ಬೆಳೆ ಕಟಾವು ಪ್ರಯೋಗಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಮುಖ್ಯವಾಗಿ ಯಾವುದೇ ಪ್ರಯೋ ಗಗಳು ವ್ಯತ್ಯಯವಾಗದಂತೆ ಕ್ರಮ ವಹಿಸುವಂತೆ ಅವರು ತಿಳಿಸಿದರು.

11ನೇ ಕೃಷಿ ಗಣತಿ ಕಾರ್ಯಕ್ಕೆ ಜಿಲ್ಲಾಧಿಕಾರಿಯವರು ಚಾಲನೆ ನೀಡಿ, ಮೂಲಕಾರ್ಯಕರ್ತರಾದ ಗ್ರಾಮಕರಣೀಕರು ಯಾವುದೇ ಸರ್ವೆ/ಸಬ್‌ ಸರ್ವೆ ನಂಬ್ರಗಳು ಬಿಟ್ಟು ಹೋಗದ ರೀತಿಯಲ್ಲಿ ಗಣತಿ ಕಾರ್ಯವನ್ನು ನಡೆಸಿ ಡಿ.31ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.

ಎಡಿಸಿ ಕೃಷ್ಣಮೂರ್ತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೀತಾ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ನಾಯಕ್‌, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಪ್ರವೀಣ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಕಿಶೋರ್‌ ಕುಮಾರ್‌ ಸಭೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next