Advertisement

ಡಿ.18 ರಂದು ಸು.ರಂ.ಎಕ್ಕುಂಡಿಯವರ ಜನ್ಮ ಶತಮಾನೋತ್ಸವ; ಜಯಂತ ಕಾಯ್ಕಿಣಿಯವರಿಂದ ಉದ್ಘಾಟನೆ

02:49 PM Dec 16, 2022 | Team Udayavani |

ಬೆಂಗಳೂರು: ಭಾಗವತರು ಸಂಘಟನೆಯು ಡಿಸೆಂಬರ್‌ 18 ರಂದು ರವಿವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಾಡಿನ ಹೆಮ್ಮೆಯ ಕವಿ ಸು.ರಂ. ಎಕ್ಕುಂಡಿಯವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದೆ.

Advertisement

ದಿನವಿಡೀ ಸು.ರಂ. ಎಕ್ಕುಂಡಿಯವರ ಕಾವ್ಯಗಳ ಓದು, ಗೀತೆಗಳ ಗಾಯನ, ಅವರ ಬಗೆಗೆ ಒಂದಿಷ್ಟು ಮಾತು-ನೆನಪು, ಕೆಲವರಿಗೆ ಸಮ್ಮಾನ-ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಅಂದು ಬೆಳಗ್ಗೆ 10 ಕ್ಕೆ ಶತಮಾನೋತ್ಸವ ಕಾರ್ಯಕ್ರಮವನ್ನು ಕವಿ ಜಯಂತ ಕಾಯ್ಕಿಣಿಯವರು ಉದ್ಘಾಟಿಸುವರು. ಈ ಸಂದರ್ಭದಲ್ಲಿ ಪುಸ್ತಕವನ್ನು ಹಿರಿಯ ಲೇಖಕಿ ಡಾ. ವಿಜಯಾ ಬಿಡುಗಡೆ ಮಾಡುವರು. ಹಿರಿಯ ಪತ್ರಕರ್ತ ಜಿ.ಎನ್‌. ಮೋಹನ್‌ ಮುಖ್ಯ ಅತಿಥಿಗಳಾಗಿರುವರು. ಅಧ್ಯಕ್ಷತೆಯನ್ನು ಕವಿ ಡಾ. ಎಚ್‌. ಎಸ್‌. ವೆಂಕಟೇಶ ಮೂರ್ತಿ ವಹಿಸುವರು.

ಉದ್ಘಾಟನೆ ಬಳಿಕ ನೀನಾಸಂ ಪ್ರತಿಷ್ಠಾನ, ಸಂಚಿ ಫೌಂಡೇಷನ್‌ ನವರಿಂದ ಎಕ್ಕುಂಡಿಯವರ ಕವಿತೆ ಮಿಥಿಲೆಯ ಗೀತ ಸಾಕ್ಷ್ಯಚಿತ್ರ ಪ್ರದರ್ಶನವಿದೆ. ಅಧ್ಯಕ್ಷತೆ ಡಾ. ಮಲ್ಲೇಪುರಂ ಜಿ. ವೆಂಕಟೇಶ್‌ ಅವರದ್ದು. ಶೂದ್ರ ಶ್ರೀನಿವಾಸ್‌, ಡಿ.ವಿ. ಪ್ರಹ್ಲಾದ್‌, ಲತಾ ಗುತ್ತಿ, ಮಧುಕರ ಎಕ್ಕುಂಡಿ ಭಾಗವಹಿಸುವರು. ಎರಡನೇ ಗೋಷ್ಠಿಯಲ್ಲಿ ದೂರದರ್ಶನ ಚಂದನದಲ್ಲಿ ಪ್ರಸಾರವಾದ ಸಂದರ್ಶನದ ಆಯ್ದ ಭಾಗವನ್ನು ಪ್ರಸಾರ ಮಾಡುವುದಲ್ಲದೇ, ಎಕ್ಕುಂಡಿಯವರ ಗೀತೆಗಳನ್ನು ಸಂಗೀತಗಾರ ಡಾ. ವಿದ್ಯಾಭೂಷಣ ಹಾಡುವರು.ವಿದ್ವಾನ್‌ ಡಾ. ಪ್ರಭಂಜನಾಚಾರ್ಯರು ಭಾಗವಹಿಸುವರು.

ಮೂರನೇ ಗೋಷ್ಠಿ ಅವರ ಸಾಕ್ಷ್ಯ ಚಿತ್ರ ಪ್ರದರ್ಶನ. ಸಿಐಐಎಲ್‌ ರೂಪಿಸಿರುವ ಸು.ರಂ. ಎಕ್ಕುಂಡಿಯವರ ಕುರಿತ ಕವಿತೆಗಳ ವಾಚನವಿದೆ. ಅಧ್ಯಕ್ಷತೆ ಕಥೆಗಾರ ಎಸ್‌. ದಿವಾಕರ್‌. ಚಲನಚಿತ್ರ ನಿರ್ದೇಶಕ ಬಿ.ಸುರೇಶ್‌, ಎಚ್‌.ಎನ್‌. ಆರತಿ, ಜಯಲಕ್ಷ್ಮೀ ಪಾಟೀಲ್‌ ಮತ್ತಿತರರು ಪಾಲ್ಗೊಳ್ಳುವರು. ಸಂಜೆ 5 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ. ಹಿರಿಯ ಪತ್ರಕರ್ತ ರವೀಂದ್ರ ಭಟ್‌ ಸಮಾರೋಪ ಭಾಷಣ ಮಾಡುವರು.

Advertisement

ಹಿರಿಯ ಪತ್ರಕರ್ತರಾದ ಜೋಗಿ, ಆರ್‌.ಜಿ. ಹಳ್ಳಿ ನಾಗರಾಜ್‌ ಮತ್ತಿತರರು ಭಾಗವಹಿಸುವರು. ಇದೇ ಹೊತ್ತಿನಲ್ಲಿ ಎಕ್ಕುಂಡಿಯವರ ಕುರಿತು ಪಿಎಚ್‌. ಡಿ ಅಧ್ಯಯನ ಮಾಡಿರುವ ಡಾ. ರಾಜೇಶ್ವರಿ ಪೀಟರ್‌, ಶ್ರೀನಿವಾಸ್‌ ಅವರನ್ನು ಸಮ್ಮಾನಿಸಲಾಗುತ್ತದೆ. ಸು.ರಂ. ಎಕ್ಕುಂಡಿಯವರ ಕುಟುಂಬಸ್ಥರಾದ ರಂಗನಾಥ ಎಕ್ಕುಂಡಿ, ವೇದಾ ಎಕ್ಕುಂಡಿ, ವಾದಿರಾಜ ಎಕ್ಕುಂಡಿ, ವೀಣಾ ಎಕ್ಕುಂಡಿ, ಭಾರತಿ ಎಕ್ಕುಂಡಿ, ನಾರಾಯಣ ನವರತ್ನರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಭಾಗವತರು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next