ಪೆರ್ಲ:ಆಧುನಿಕ ಕಾಲಘಟ್ಟದಲ್ಲಿ ಮಕ್ಕಳು ಗ್ರಾಮೀಣ ಆಟ ಆಡುವುದರ ಬದಲು ಮೊಬೈಲ್ ಗೇಮ್,ಟಿವಿ ವೀಕ್ಷಣೆಯಲ್ಲಿ ಸಮಯ ಕಳೆಯುದರಲ್ಲಿ ತಲ್ಲೀನರಾಗಿ ನೆರೆಹೊರೆಯ ಮಕ್ಕಳ ಆಟ,ಕುಣಿತ,ಕೇಕೆ,ಕಲರವಗಳಿಗೆ ಅವಕಾಶವೇ ಇಲ್ಲದಾಗಿದೆ.
ಇದೀಗ ಬೇಸಗೆ ರಜೆಯ ಮಜ.ಪಾಠ,ಓದುಗಳಿಲ್ಲದೆ ಆಟಕಷ್ಟೇ ಪ್ರಧಾನ್ಯ.ಆಟವಾಡುವ ಹೊರತಾಗಿ ಪುಟಾಣಿಗಳು ವಿಶೇಷವಾಗಿ ಪರಿಸರದೊಂದಿಗೆ ಸಮಯ ಕಳೆಯಲು,ಆಟವಾಡಲು ಎಂಡೋಸಲ್ಫಾನ್ ಬಾಧಿತ ವಾಣೀನಗರ ಸಮೀಪ ಕುತ್ತಾಜೆಯಲ್ಲಿ ಮೇ1ರಂದು ಒಟ್ಟು ಸೇರಿದರು.
ಕೃಷಿ ಪದವೀಧರೆ ಕೃಪಾಳ ಪರಿಸರ ಪ್ರೇಮದ ಯಶೋಗಾಥೆಯನ್ನು ಕಣ್ಣಾರೆ ಕಂಡುಕೊಳ್ಳಲು ಪುಟಾಣಿಗಳ ತಂಡ ಕುತ್ತಾಜೆ ತಲುಪಿತು.ಪ್ರಗತಿಪರ ಯುವ ಕೃಷಿಕ,ಸಾಮಾಜಿಕ ಮುಂದಾಳು ಜಗದೀಶ್ ಅವರ ಆಡು ಸಾಕಣೆ,ಕೃಷಿ ಕೈತೋಟ,ಜೇನು ಸಾಕಣೆ,ರಬ್ಬರ್ ತೋಟ,ತೋಡಿಗೆ ನಿರ್ಮಿಸಿದ ಕಟ್ಟ ,ನೈಸರ್ಗಿಕ ಕಾಡು ಸಂರಕ್ಷಣೆ ಮೊದಲಾದವುಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.ಜೇನು ಸಾಕಣೆ,ನೀರಿನ ವ್ಯವಸ್ಥೆಯ ನವೀನ ಯೋಜನೆ,ತೋಡಿನಲ್ಲಿ ಸಂಚರಿಸಿ ನೀರು ಸೇಕರಣೆಗಾಗಿ ನಿರ್ಮಿಸುವ ಕಟ್ಟ ,ಕೃಷಿ ಉಪಕರಣಗಳು,ವಸಂತಿ,ಜಗದೀಶ್,ಕಮಲ,ಕೃಷ್ಣ ಮೊದಲಾದವರ ಕೆಲಸಕಾರ್ಯಗಳನ್ನು ಕಂಡು ಮಕ್ಕಳು ಕೃಷಿಯ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಕ್ರೋಢೀಕರಿಸಿದರು.
ಮಧ್ಯಾಹ್ನದ ಊಟ ಕೃಪಾಳ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದೂ ತಾಯಿ ಬಡಿಸಿದ ಮಾವಿನ ಹಣ್ಣಿನ ಸಾರು,ಕರಂಡೆ ಉಪ್ಪಿನ ಕಾಯಿ ಪೇಟೆ ಮಕ್ಕಳಿಗೆ ಗ್ರಾಮೀಣ ಶೈಲಿಯ ಊಟದ ರುಚಿ ಅವಿಸ್ಮರಣೀಯವಾಯಿತು.
ಸಂಜೆ ಸ್ವರ್ಗ ಶಾಲೆಯಲ್ಲಿ ನಡೆದ ಜಲ ಜಾಗೃತಿ ಚಿಂತನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಜಲತಜ್ಞ ,ಪರಿಸರ ಕಾಳಜಿಯ ಶ್ರೀಪಡ್ರೆಯವರೊಂದಿಗೆ ಮಕ್ಕಳು ಸಂವಾದ ನಡೆಸಿದರು.ಒಟ್ಟಿನಲ್ಲಿ ಮಕ್ಕಳಿಗೆ ನವೀನ ಕಲಿಕೆ,ಹೊಸ ಅನುಭವವಾಯಿತು.ಅಜೀತ್ ಸ್ವರ್ಗ,ಪ್ರದೀಪ್ ಶಾಂತಿಯಡಿ ಮಾರ್ಗದರ್ಶಕರಾಗಿದ್ದರು. ಕಾಸರಗೋಡಿನ ಪಕ್ಷಿಪ್ರೇಮಿ ತಂಡದ ರಾಜು ಕಿದೂರು ಅವರು ನೇತೃತ್ವ ವಹಿಸಿದ್ದರು.
ಮಕ್ಕಳಿಗೆ ಮಾಹಿತಿ
ನೀರಿನ ಸಂಪನ್ಮೂಲಗಳಿಗೆ ಅಂತರ್ಜಲ ಸಂರಕ್ಷಣೆ,ಮಿತಬಳಕೆಯ ಬಗ್ಗೆ ಕೃಪಾಳ ಅಮ್ಮ ವಸಂತಿ ಮಕ್ಕಳಿಗೆ ಮಾಹಿತಿ ಇತ್ತರು.ಖ್ಯಾತ ವೈದ್ಯ,ಪರಿಸರ ಪ್ರೇಮಿ ,ಡಾ|ಮೋಹನ್ ಕುಮಾರ್ ಅವರನ್ನು ಸಂದರ್ಶಿಸಿ ವಿವರ ಸ,ಗರಹಿಸಿಸಿದರು.ಪರಿಸರ ರಕ್ಷಣೆಯು ನಮ್ಮ ಕರ್ತವ್ಯ,ಅದಕ್ಕಾಗಿ ಶ್ರಮಿಸ ಬೇಕು ಎಂದು ಅವರು ಒತ್ತಿ ಹೇಳಿದರು.ಎಂಡೋಸಲ್ಫಾನ್ ಹೋರಾಟ, ದೊಂಪೆತ್ತಡ್ಕ ಕಗ್ಗಲ್ಲು ಕೋರೆ ವಿರುದ್ಧ ತಮ್ಮ ಹೋರಾಟ, ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಂಡರು.